Lakshmi Nivasa Serial: ಕೋರ್ಟ್‌ಗೆ ಹೋಗಿ ಬಂದ ನಂತರ ಹರೀಶ್‌ಗೆ ಸ್ವಲ್ಪ ಬುದ್ಧಿ ಬಂದಿರುವ ಹಾಗೆ ಕಾಣುತ್ತದೆ. ಆದರೆ ಸಂತೋಷ್‌ಗೆ ಮಾತ್ರ ದುರಾಸೆ ಹೆಚ್ಚಾಗುತ್ತಲೇ ಇದೆ. ಈಗ ಇದೇ ದುರಾಸೆಯಿಂದ ಖೆಡ್ಡಾಕ್ಕೆ ಬೀಳಲು ಸಜ್ಜಾಗಿದ್ದಾನೆ.

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಶ್ರೀನಿವಾಸ್ ಮಗ ಸಂತೋಷ್ ವರ್ತನೆ ಕಂಡು ಹಿಡಿ ಶಾಪ ಹಾಕಿದವರೇ ಹೆಚ್ಚು. "ಅಬ್ಬಾ! ರಿಯಲ್‌ ಲೈಫ್‌ನಲ್ಲಿ ಇಂಥ ಮಗ ಯಾರಿಗೂ ಬ್ಯಾಡಪ್ಪ" ಅಂತ ಅಮ್ಮ-ಅಪ್ಪ ಕೈ ಮುಗಿದದ್ದೇ ಮುಗಿದದ್ದು. ಅಷ್ಟಕ್ಕೂ ಸಂತೋಷ್ ಕಂಡರೆ ಎಲ್ಲರಿಗೂ ಯಾಕೆ ಅಷ್ಟೇ ಕೋಪ ಎಂಬುದು ದಿನ ನಿತ್ಯ ಧಾರಾವಾಹಿ ನೋಡುವ ವೀಕ್ಷಕರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಹೌದು. ಈ ಸಂತೋಷ್, ಲಕ್ಷ್ಮೀ-ಶ್ರೀನಿವಾಸ್‌ಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊಟ್ಟ ಮೊದಲನೆಯದಾಗಿ ಎಲ್ಲರೂ ಒಟ್ಟಿಗೆ ಇರುವಾಗಲೇ ಅಪ್ಪ-ಅಮ್ಮನನ್ನ ಬಹಳ ಕೀಳಾಗಿ ಕಂಡ. ಇನ್ನು ತಂಗಿ-ತಮ್ಮಂದಿರ ಖರ್ಚು ತಾನು ನೋಡಿಕೊಳ್ಳಬೇಕಾಗುತ್ತದೆ ಎಂದು ಗಂಟೆಗೆ, ಗಳಿಗೆಗೆ ಕುಹಕ ಮಾತುಗಳನ್ನು ಆಡುತ್ತಲೇ ಬಂದವ. ದೊಡ್ಡ ಜಿಪುಣನಾದ ಸಂತೋಷ್‌ ದುಡಿದ ದುಡ್ಡಲ್ಲಿ ಮನೆ ಕಟ್ಟಿಸಿಯೂ ಆಯ್ತು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಈ ಪಾರ್ಟಿ. ಎಲ್ಲೋ ಅಪ್ಪ-ಅಮ್ಮ ದೂರದಲ್ಲಿ ಪುಟ್ಟ ಗೂಡು ಕಟ್ಟುಕೊಂಡು ನೆಮ್ಮದಿಯಾಗಿದ್ದರೆ ಅಲ್ಲಿಗೂ ತೆರಳಿ "ನನ್ನ ಪಾಲು ನನಗೆ ಕೊಡಿ" ಅಂದ.

ಸಂತೋಷ್‌ಗೆ ಆಸೆ ಹೆಚ್ಚಾಯ್ತು..

ಆಗಲೇ ಅಪ್ಪ ಶ್ರೀನಿವಾಸ್ ಕೋಪ ನೆತ್ತಿಗೇರಿದ್ದು, ಕೊನೆಗೆ ಕೋರ್ಟ್ ಮೊರೆ ಹೋಗಿ, ತನ್ನ ಇಬ್ಬರೂ ಮಕ್ಕಳಾದ ಸಂತೋಷ್-ಹರೀಶ್‌ಗೆ ಬುದ್ಧಿ ಕಲಿಸಿದರು. "ಕೋತಿ ತಾನು ಕೆಡುವುದು ಅಲ್ಲದೆ ವನವನ್ನೂ ಕೆಡಿಸಿತು" ಎನ್ನುವ ಹಾಗೆ. ಜೊತೆಗೆ ತಮ್ಮ ಹರೀಶ್‌ನನ್ನು ಹಾಳು ಮಾಡಿದ್ದಾಯ್ತು. ಕೋರ್ಟ್‌ಗೆ ಹೋಗಿ ಬಂದ ನಂತರ ಹರೀಶ್‌ಗೆ ಸ್ವಲ್ಪ ಬುದ್ಧಿ ಬಂದಿರುವ ಹಾಗೆ ಕಾಣುತ್ತದೆ. ಆದರೆ ಸಂತೋಷ್‌ಗೆ ಮಾತ್ರ ದುರಾಸೆ ಹೆಚ್ಚಾಗುತ್ತಲೇ ಇದೆ. ಈಗ ಇದೇ ದುರಾಸೆಯಿಂದ ಖೆಡ್ಡಾಕ್ಕೆ ಬೀಳಲು ಸಜ್ಜಾಗಿದ್ದಾನೆ. ಹೌದು. ದುಡ್ಡು ಡಬ್ಬಲ್ ಮಾಡುವ ದಂಧೆಯೊಂದರ ಹಿಂದೆ ಬಿದ್ದಿರುವ ಸಂತೋಷ್‌, ಈಗ ಅದರಲ್ಲಿ ಹಣ ಹಾಕಿದ್ದಾನೆ.

ಸದ್ಯಕ್ಕೆನೋ ತಾನು ಹಾಕಿದ ಹಣ ಬಂದಿತು. ಆದರೆ ಮುಂದಿನ ದಿನಗಳಲ್ಲಿ ಅವನು ಖಂಡಿತ ಹಣ ಕಳೆದುಕೊಳ್ಳುತ್ತಾನೆ. ಈಗ ಅದರ ಎಲ್ಲ ಮುನ್ಸೂಚನೆ ಸಿಕ್ಕಿವೆ. ಇದನ್ನೆಲ್ಲಾ ನೋಡಿದ ವೀಕ್ಷಕರು ಅಪ್ಪ-ಅಮ್ಮನಿಗೆ ಅಷ್ಟು ಹಿಂಸೆ ಕೊಟ್ಟಿದ್ದಾನೆ. ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯಾಗಲಿದೆ ಎನ್ನುತ್ತಿದ್ದಾರೆ. ಸಂತೋಷ್ ಲಕ್ಕಿ ಭಾಸ್ಕರ್ ಆಗುವ ಭರದಲ್ಲಿ ದುಡ್ಡನ್ನೆಲ್ಲಾ ಕಳೆದುಕೊಂಡು ಮುಂದೊಂದು ದಿನ ಖಾಲಿಯಾಗುತ್ತಾನೆ. ಆಗ ಅಪ್ಪ-ಅಮ್ಮನ ಬಳಿಗೆ ಬರಲೇಬೇಕು ಎನ್ನುತ್ತಿದ್ದಾರೆ. 

ಸದ್ಯ ವೀಕ್ಷಕರು ಮಾಡಿರುವ ಕಾಮೆಂಟ್ ಹೀಗಿದೆ ನೋಡಿ...

*ಇವನ್ ದುರಾಸೆಗೆ ಇವನೇ ಬಲಿ ಕಾ ಬಕ್ರ ಆಗ್ತಿದ್ದಾನೆ.
*ಮೊದ್ಲು ಇವನ್ನ ಮುಳುಗಿಸಿ. ಮೇಲೆ ಹೇಳಿದ ಹಾಗೆ ಮಾಡಿ. ಪಾಪರ್ ಚೀಟಿ ಆಗಿ ರೋಡ್ ರೋಡ್ ನಲ್ಲಿ ಅಲಿಬೇಕು. ಅದನ್ನ ನಾನು ಕಣ್ಣಿಂದ ನೋಡಬೇಕು.
*ಓಹೋ ಸರಿಯಾಗಿ ಹಳ್ಳಕ್ಕೆ ಬೀಳ್ತಾ ಇದ್ದಾನೆ. ಬೀಳಪ್ಪ ಆದ್ರೆ ಅಪ್ಪ ಅಮ್ಮ ಹತ್ತಿರ ಹೋಗ್ಬೇಡ.
*ಪ್ರೇಕ್ಷಕರು ಉಗಿಯೋದು ನೋಡಿ ಡೈರೆಕ್ಟರ್ ಅಪ್ಪ ಮಗನ ಒಂದು ಮಾಡೋಕೆ ಒಳ್ಳೆ ಸ್ಟೋರಿ ಹುಡುಕಿದ್ದೀಯ.
*ಅತಿ ದುರಾಸೆಯಿಂದ ಮುಳುಗಲಿ... ತಂದೆ ತಾಯಿಯ ಬೆಲೆ ಅರ್ಥವಾಗಲಿ.
*ಅತಿ ಆಸೆ ಗತಿ ಗೇಡು.
*ಬೇಗ ಇವನು ಬೀದಿಗೆ ಬರಬೇಕು ಅಪ್ಪ, ಅಮ್ಮನಾ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು.
*ದುರಾಸೆ ಬೀಳಬೇಡ ಸಂತೋಷ. ಆಮೇಲೆ ನಿನ್ನ ಮನೆ ಎಲ್ಲಾ ಮಾರ್ಕೊಳ್ಳು ಬೇಕಾಗುತ್ತೆ ಉಷಾರು.
*ಇವನು ಪಾಪರ್ ಆಗಿ ಜನಗಳು ಇವನ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ. ಆಗ ವೀಣಾ ಶ್ರೀನಿವಾಸ ಕೊಟ್ಟ ದುಡ್ಡಿಂದ ಎಲ್ಲರ ಸಾಲ ವಾಪಾಸ್ ಕೊಡ್ತಾಳೆ. 
*ಮುಂದೆ ಇದೆ ಮಾರಿ ಹಬ್ಬ…ಅಂತೆಲ್ಲಾ ಕಾಮೆಂಟ್ ಮಾಡಿರುವುದನ್ನ ನೀವು ನೋಡಬಹುದು.