'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಿರುವುದಕ್ಕೆ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರವನ್ನು ಸಾಯಿಸಿರುವುದು ಕಥೆಗಾರರ ಷಡ್ಯಂತ್ರ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರದಲ್ಲಿ ನಟಿ ವಿಜಯಲಕ್ಷ್ಮಿ ಸುಬ್ರಮಣಿ (vijayalakshmi Subramani) ಮಿಂಚುತ್ತಿದ್ದಾರೆ. ಮನೆ ಬಿಟ್ಟು ಹೋಗಿರುವ ಜಾಹ್ನವಿ, ತನ್ನ ಸ್ನೇಹಿತೆಯ ಮಗಳು ಎಂದು ಗೊತ್ತಾದ ತಕ್ಷಣ ಆಕೆಯನ್ನು ವಾಪಸ್ ಮನೆಗೆ ಕರೆದು ಆಕೆಗೆ ತಾಯಿಯ ಪ್ರೀತಿ ನೀಡುತ್ತಿದ್ದಾಳೆ ಲಲಿತಾ. ಈ ಪಾತ್ರದಲ್ಲಿ ನಟಿ ವಿಜಯಲಕ್ಷ್ಮಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.
28
ಸಾಯಿಸಿದ ಲಲಿತಾ ಪಾತ್ರ
ಆದರೆ, ಏನೋ ಗೊತ್ತಿಲ್ಲ. ಈಗ ದಿಢೀರ್ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಪಾತ್ರವನ್ನು ಸಾಯಿಸಿರುವ ಬಗ್ಗೆ ಮಾತನಾಡಿದ್ದಾರೆ. ನಿನ್ನೆಯಷ್ಟೇ ಒಂದು ಪೋಸ್ಟ್ ಮಾಡಿದ ನಟಿ, ಇದು ಎಷ್ಟು ಸರಿ? ಒಂದು ಒಳ್ಳೆ ಪಾತ್ರವನ್ನ ಸುಖಾಸುಮ್ಮನೆ ಸಾಯಿಸೋದು? ಈ ಧಾರಾವಾಹಿಗೆ ಕಥೆ ಮಾಡುವವರ ಪಾಂಡಿತ್ಯ ನಿಪುಣತೆಗೆ ಕನ್ನಡಿ ಹಿಡಿದಿದೆ ಎನ್ನುತ್ತಾ ತಮ್ಮ ಪಾತ್ರವನ್ನು ಸಾಯಿಸಿರುವ ಬಗ್ಗೆ ನೋವು ತೋಡಿಕೊಂಡಿದ್ದರು.
38
ನಗಲೋ ಅಳಲೊ?
ಇಂದು ಮತ್ತೊಂದು ಪೋಸ್ಟ್ ಹಾಕಿರುವ ನಟಿ, ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾವನ ಜೊತೆ ಲಲಿತಾಳ ಕೊನೆಮಾತುಗಳು... ಎಷ್ಟು ಆಶ್ಚರ್ಯ ಅಂದರೆ ಲಕ್ಷ್ಮಿನಿವಾಸ ಧಾರವಾಹಿಯ ಮೊದಲ ದಿನದ ಸೀನ್ ನಲ್ಲಿ ಇದೆ ಸೀರೆ ಉಟ್ಟಿದ್ದೆ, ಕೊನೆಯ ಸೀನ್ನಲ್ಲೂ ಅದೇ ಸೀರೆ. ಈ ಸೀರಿಯಲ್ ನಲ್ಲಿ ಕಥಾಬ್ರಹ್ಮರು ನನಗೆ ತಿಳಿಸದೇ ಮಾಡಿದ ಷಡ್ಯಂತ್ರಕ್ಕೆ ನನ್ನ ಈ ಹಸಿರು ಸೀರೆ ನಗಬೇಕೋ.. ಅಳ್ಬೇಕೋ ತಿಳಿದೇ ಸೂಟ್ ಕೇಸ್ನಲ್ಲಿ ಕೂತಿದೆ ಎಂದು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಏನಾಯಿತು ಎಂದು ಅವರು ಹೇಳಲಿಲ್ಲ. ಹಲವರು ಈ ಪ್ರಶ್ನೆ ಮಾಡಿದ್ದು, ಅದಕ್ಕೆ ಅವರು ಉತ್ತರಿಸಲಿಲ್ಲ. ಆದರೆ ಅವರ ಪಾತ್ರವನ್ನು ಕೊನೆಗೊಳಿಸಲಾಗಿದೆ ಎನ್ನುವುದು ಮಾತ್ರ ತಿಳಿದಿದೆ.
58
ಅಂಜಲಿ ಹೊರಕ್ಕೆ
ಅಷ್ಟಕ್ಕೂ ಲಕ್ಷ್ಮೀ ನಿವಾಸ ಸೀರಿಯಲ್ ಪಾತ್ರಗಳಿಂದಾಗಿ ಸದಾ ಸದ್ದು ಮಾಡುತ್ತಲೇ ಇದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರೇಣುಕಾ ಪಾತ್ರ ಮಾಡ್ತಿದ್ದ ನಟಿ ಅಂಜಲಿ ಸುಧಾಕರ್ ಈ ಸೀರಿಯಲ್‌ನಿಂದ ಹೊರಕ್ಕೆ ಬಂದಿದ್ದರು.
68
ನೆಗೆಟಿವ್ ರೋಲ್
ಆಗಲೇ ವಿಜಯಲಕ್ಷ್ಮೀ ಕೂಡ ಕುತೂಹಲದ ಪೋಸ್ಟ್ ಶೇರ್ ಮಾಡಿದ್ದರು. ‘’ಗೆಳತಿ ಅಂಜಲಿ ಇಂದು ನೀನು ಹೊರಗೆ ಬಂದಿರುವೆ. ಅತೀ ಶೀಘ್ರದಲ್ಲಿ ನಾನೂ ಕೂಡ ಈ ಸೀರಿಯಲ್‌ನಿಂದ ಹೊರಬರುವೆ’’ ಎಂದು ಬರೆದಿದ್ದರು. ರೇಣುಕಾ ಪಾತ್ರ ನೆಗೆಟಿವ್ ಆಗಿ ಬದಲಾಗಿದ್ದು ಇಷ್ಟವಾಗಲಿಲ್ಲ ಎಂದಿದ್ದರು.
78
ಕುತೂಹಲ
ಅತಿಯಾದ ರಾಜಕೀಯ ನಿಜವಾದ ಕಲಾವಿದೆಯರಿಗೆ ಮನ್ನಣೆ, ಗೌರವ ಇಲ್ಲ. ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವಿಬ್ಬರು ಯಾವ ಕೊರತೆಯೂ ಮಾಡಿಲ್ಲ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದರು. ಆದರೆ ಈಗ ಅವರನ್ನೇ ಹೊರಕ್ಕೆ ಕಳುಹಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
88
ಶ್ವೇತಾ, ಭವಿಷ್ ಗೌಡ ಹೊರಕ್ಕೆ
ಇದಕ್ಕೂ ಮುನ್ನ ನಟಿ ಶ್ವೇತಾ ಸೀರಿಯಲ್‌ನಿಂದ ಹೊರಬಂದು ಆ ಪಾತ್ರವನ್ನು ಈಗ ನಟಿ ಮಾಧುರಿ ಅಭಿನಯಿಸುತ್ತಿದ್ದಾರೆ. ವಿಶ್ವ ಪಾತ್ರದಲ್ಲಿ ನಟಿಸುತ್ತಿರುವ ನಟ ಭವಿಷ್ ಗೌಡ ಕೂಡ ಬೇರೊಂದು ಸೀರಿಯಲ್ ನಿಮಿತ್ತ ಲಕ್ಷ್ಮೀ ನಿವಾಸ ಬಿಟ್ಟಿದ್ದರು. ನಟ ನಕುಲ್ ಶರ್ಮಾ ಈಗ ವಿಶ್ವನ ರೋಲ್ ಮಾಡುತ್ತಿದ್ದಾರೆ.