Bigg Boss ಗೆಲ್ಲೋರು ಯಾರು? ಮೊದಲೇ ಅವರಿಗೆ ಹೇಳಲಾಗತ್ತಾ? ದೊಡ್ಮನೆ ಗುಟ್ಟು ಕಿಚ್ಚ ಸುದೀಪ್​ ರಿವೀಲ್​

Published : Dec 17, 2025, 01:03 PM IST

ಬಿಗ್​ಬಾಸ್​ ಶೋ ಸ್ಕ್ರಿಪ್ಟೆಡ್ ಮತ್ತು ವಿನ್ನರ್ ಮೊದಲೇ ನಿರ್ಧಾರವಾಗಿರುತ್ತದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಈ ಎಲ್ಲಾ ಚರ್ಚೆಗಳಿಗೆ ನಟ ಸುದೀಪ್ ಅವರೇ ಉತ್ತರ ನೀಡಿದ್ದು, ಜಗಳವಾಡದವರೂ ಗೆದ್ದ ಉದಾಹರಣೆಗಳನ್ನು ನೀಡಿದ್ದಾರೆ.  

PREV
18
ಬಿಗ್​ಬಾಸ್​ 12ರ ಹವಾ

ಬಿಗ್​ ಬಾಸ್​ 12 ಇನ್ನೇನು ಒಂದೊಂದು ತಿಂಗಳಿನಲ್ಲಿ ಮುಗಿಯಲಿದೆ. ಇದಾಗಲೇ ಗೆಲ್ಲುವವರು ಯಾರು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಅಷ್ಟಕ್ಕೂ ಬಿಗ್​ಬಾಸ್​ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡುವುದು ಇದೆ. ಇವೆಲ್ಲವೂ ಸ್ಕ್ರಿಪ್ಟೆಡ್​ ಎನ್ನುವ ದೊಡ್ಡ ಆರೋಪವೂ ಇದ್ದು, ಇವುಗಳನ್ನು ಕೆಲವರು ಒಪ್ಪಿಕೊಂಡಿದ್ದಾರೆ, ಕೆಲವರು ಇಲ್ಲ ಎಂದಿದ್ದಾರೆ.

28
ಛಾನ್ಸ್​ ಸಿಗುವುದು ಇಂಥವರಿಗೆ?

ಅದೇ ಇನ್ನೊಂದೆಡೆ, ಜೈಲಿಗೆ ಹೋದವರು, ಕಾಂಟ್ರವರ್ಸಿ ಮಾಡಿಕೊಂಡವರು, ಜಗಳದಿಂದಲೇ ಹೊರಗೆ ಫೇಮಸ್​ ಆದವರಿಗೆ ಮಾತ್ರ ಬಿಗ್​ಬಾಸ್​​ ಮೀಸಲು, ಮೊದಲ ಕೆಲವು ದಿನ ಮನೆಯಿಂದ ಹೊರಕ್ಕೆ ಹಾಕುವ ಸಲುವಾಗಿ ಯಾವುದೇ ಕಾಂಟ್ರವರ್ಸಿ ಇಲ್ಲದವರನ್ನು ಕರೆಸಿಕೊಳ್ಳಲಾಗುತ್ತದೆ, ಇದು ನಾಮ್​ಕೇವಾಸ್ತೆ ಮಾತ್ರ ಎನ್ನುತ್ತಾರೆ ಹಲವರು.

38
ಜಗಳಗಂಟರೇ ಇರುವುದು!

ಕೊನೆಯವರೆಗೂ ಉಳಿದುಕೊಳ್ಳುವವರ ಪೈಕಿ ಹೆಚ್ಚಿನವರು ಜಗಳಗಂಟರೇ, ಏಕೆಂದರೆ ಇವರಿಂದಲೇ ಟಿಆರ್​ಪಿ ಏರುವುದು ಎನ್ನುವುದು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ.

48
ಬಹು ದೊಡ್ಡ ಆರೋಪ

ಇನ್ನೂ ಒಂದು ದೊಡ್ಡ ಆರೋಪ ಇದೆ. ಇದು ಬಿಗ್​ಬಾಸ್​ ಮಾತ್ರವಲ್ಲದೇ, ಬಹಳಷ್ಟು ರಿಯಾಲಿಟಿ ಎನ್ನುವ ಷೋಗಳಲ್ಲಿಯೂ ಇದ್ದೇ ಇದೆ. ಅದೇನೆಂದರೆ, ಯಾರು ವಿನ್​ ಆಗುತ್ತಾರೆ ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ ಎನ್ನುವುದು. ಈಗ ಬಿಗ್​ಬಾಸ್​​ ವಿನ್​ ಆಗುವವರು ಯಾರು, ಅವರಿಗೆ ಮೊದಲೇ ಹೇಳಲಾಗತ್ತಾ ಎನ್ನುವ ಕೆಲವು ಪ್ರಶ್ನೆಗಳಿಗೆ ಖುದ್ದು ಸುದೀಪ್​ ಅವರೇ ಮಾಧ್ಯಮವೊಂದಕ್ಕೆ ಉತ್ತರ ಕೊಟ್ಟಿದ್ದಾರೆ.

58
ಸುದೀಪ್​ ಹೇಳಿದ್ದೇನು?

ಬಿಗ್​ಬಾಸ್​​ನಲ್ಲಿ ಎಲ್ಲಾ ರೀತಿಯ, ಎಲ್ಲಾ ಸ್ವಭಾವದ ವ್ಯಕ್ತಿಗಳು ಬರುತ್ತಾರೆ. ಕೆಲವೊಮ್ಮೆ ಅವರು ಮಿತಿ ಮೀರಿ ನಡೆದುಕೊಳ್ಳುವುದೂ ಇದೆ. ಅವೆಲ್ಲವನ್ನೂ ನಾವು ಕಂಟ್ರೋಲ್​ ಮಾಡಬೇಕು ಅಷ್ಟೇ ಎಂದು ಹೇಳಿದ್ದಾರೆ.

68
ಸೈಲಂಟ್​ ಇದ್ದವರೂ ಗೆದ್ದಿದ್ದಾರೆ

ಇವೆಲ್ಲವುಗಳ ನಡುವೆ ಜಗಳವಾಡಿಕೊಂಡಿರುವವರೇ ಗೆಲ್ಲುತ್ತಾರೆ ಎನ್ನುವುದು ಶುದ್ಧ ತಪ್ಪು. ಈ ಹಿಂದೆ ನಟಿ ಶ್ರುತಿ ಅವರು, ಬಿಗ್​ಬಾಸ್​ನಲ್ಲಿ ಕೊನೆಯವರೆಗೂ ಸೈಲೆಂಟ್​ ಆಗಿಯೇ ಇದ್ದರು. ಅವರು ಬಿಗ್​ಬಾಸ್​​ ಕಪ್​ ಗೆದ್ದುಕೊಂಡು ಹೋಗಿದ್ದಾರೆ. ಸುಮಾರು 50 ದಿನ ಆದ ಮೇಲೆ ಬಂದ ಹನುಮಂತು ಕಾಮಿಡಿ ಮಾಡಿದ್ರು ಮಾತ್ರವಲ್ಲದೇ ಅಲ್ಲಿ ಗಲಾಟೆ ಏನೂ ಮಾಡಲಿಲ್ಲ, ಅವರೂ ಗೆದ್ದುಕೊಂಡು ಹೋಗಲಿಲ್ಲವೆ? ಹಾಗೆನೇ ಅವರೇ ಇವರೇ ಅಂತೇನೂ ಇಲ್ಲ. ಕೊನೆಯವರೆಗೂ ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ಲುವುದು ಎಂದಿದ್ದಾರೆ.

78
ಜಗಳ ಜಾಸ್ತಿ

ಈ ಸಲ ಜಗಳ ಸ್ವಲ್ಪ ಜಾಸ್ತಿ ಆಗಿದೆ. ಹಿಂದೆ ಕೂಡ ಹೀಗೆಯೇ ಆಗಿದ್ದೂ ಇದೆ. ವಿಭಿನ್ನ ಸ್ವಭಾವದವರು ಇರೋ ಕಾರಣ ನಾವು ಹೇಗೆ ಹ್ಯಾಂಡಲ್​ ಮಾಡ್ತೀವಿ ಎನ್ನೋದು ಮುಖ್ಯವಾಗುತ್ತದೆ ಎಂದಿದ್ದಾರೆ ಸುದೀಪ್​.

88
ಮೊದಲೇ ಗೊತ್ತಿರತ್ತಾ?

ಇದೇ ವೇಳೆ ಇಂಥವರೇ ಬಿಗ್​ಬಾಸ್​ ಗೆಲ್ಲೋದು ಎನ್ನುವುದು ಮೊದಲೇ ನಿಗದಿಯಾಗಿರುತ್ತಾ ಎನ್ನುವ ಪ್ರಶ್ನೆಗೆ ಸುದೀಪ್​ ಅವರು, ನಾವು ಸೋಷಿಯಲ್‌ ಮೀಡಿಯಾದಲ್ಲಿ ಮಾತನಾಡುವ ರೀತಿ ಮತ್ತು ಅಥವಾ ರಿಯಾಲಿಟಿ, ಯಾವುದನ್ನು ತೆಗೆದುಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿರಬೇಕಲ್ಲವೆ ಎನ್ನುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಬಂದಿರೋದನ್ನು ನಂಬಬಾರದು ಎಂದು ಸೂಚ್ಯವಾಗಿ ಹೇಳಿದ್ದಾರೆ.

Read more Photos on
click me!

Recommended Stories