Amruthadhaare: ಅಜ್ಜಿನೇ ಡ್ರಾಮಾ ಕ್ವೀನ್​ ಅಂದ್ರೆ ಮರಿಮೊಮ್ಮಕ್ಕಳು ಇನ್ನೊಂದು ಹೆಜ್ಜೆ ಮುಂದೆ!

Published : Dec 17, 2025, 02:48 PM IST

ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಿ, ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಮಾಸ್ಟರ್‌ಪ್ಲ್ಯಾನ್ ರೂಪಿಸಿದ್ದಾಳೆ. ತನ್ನ ಕೊನೆಯಾಸೆಯಂತೆ ನಟಿಸಿ, ಮಕ್ಕಳಾದ ಆಕಾಶ್ ಮತ್ತು ಮಿಂಚು ಜೊತೆ ಸೇರಿ ಇಬ್ಬರನ್ನೂ ಮತ್ತೆ ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾಳೆ.  

PREV
17
ಅಮೃತಧಾರೆ ಟ್ವಿಸ್ಟ್​

ಅಮೃತಧಾರೆ (Amruthadhaare) ಇದೀಗ ಭಾರಿ ಟ್ವಿಸ್ಟ್​ ಪಡೆದುಕೊಂಡಿದೆ. ಅಜ್ಜಿ ಈಗ ಗೌತಮ್​ ಮತ್ತು ಭೂಮಿಕಾರನ್ನು ಒಂದು ಮಾಡುವ ಮಾಸ್ಟರ್​ಪ್ಲ್ಯಾನ್​ ಹಾಕಿದ್ದಾಳೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.

27
ಒಂದಾದ ಭೂಮಿಕಾ ಮತ್ತು ಗೌತಮ್​

ಅಜ್ಜಿಯನ್ನು ನೋಡಲು ಭೂಮಿಕಾ ಮತ್ತು ಗೌತಮ್​ ಒಂದಾಗಿದ್ದಾರೆ. ಇಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಇದಕ್ಕೂ ಮುನ್ನ ಆ ಇಬ್ಬರು ಮಕ್ಕಳು ಇವರದ್ದೇ ಮಕ್ಕಳು ಎಂದು ಅಜ್ಜಿ ತಿಳಿದುಕೊಳ್ಳಬೇಕು ಎನ್ನುವ ರೀತಿಯಲ್ಲಿ ಆಕಾಶ್​ ಮತ್ತು ಮಿಂಚು ಟ್ರಯಲ್​ ಮಾಡೋಣ ಎಂದು ಹೇಳಿದ್ದಾರೆ.

37
ಆಕಾಶ್​-ಮಿಂಚು ಡ್ರಾಮಾ

ಅದೇ ರೀತಿ, ಆಕಾಶ್​ ಡ್ಯಾಡಿ ಅಂತ ಗೌತಮ್​ನನ್ನು ಹೋಗಿ ಬಿಗಿದಪ್ಪಿಕೊಂಡಿದ್ದರೆ, ಮಿಂಚು ಮಮ್ಮಿ ಎಂದು ಭೂಮಿಕಾಳನ್ನು ಅಪ್ಪಿಕೊಂಡಿದ್ದಾಳೆ. ಇವರಿಬ್ಬರು ಡ್ರಾಮಾದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

47
ಅಜ್ಜಿಯ ನಾಟಕ

ಅಲ್ಲಿ ಅಜ್ಜಿ ಹಾಸಿಗೆ ಹಿಡಿದವರ ರೀತಿ ಮಲಗಿದ್ದಾಳೆ. ಭಾಗ್ಯಳನ್ನು ಉದ್ದೇಶಿಸಿ ಅಜ್ಜಿ, ನೋಡು ಸೆರಗನ್ನು ಹಲ್ಲಿನಿಂದ ಕಚ್ಚಿಟ್ಟುಕೊಂಡು ಅಳ್ತಾ ಇರು ಎಂದು ಐಡಿಯಾ ಹೇಳಿದ್ದಾಳೆ.

57
ಬಿಕ್ಕಿ ಬಿಕ್ಕಿ ಅತ್ತ ಭಾಗ್ಯಮ್ಮ

ಅದಳಂತೆ ಭಾಗ್ಯಮ್ಮ ಸೆರಗನ್ನು ಹಲ್ಲಿನಿಂದ ಕಚ್ಚಿಹಿಡಿದು ಅಜ್ಜಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಂತೆ ನಾಟಕ ಮಾಡುತ್ತಿದ್ದಾಳೆ. ಅಜ್ಜಿ ಇನ್ನೇನು ಕೊನೆಯ ಉಸಿರು ಚೆಲ್ಲುವಂತೆ ಮಲಗಿಕೊಂಡಿದ್ದಾಳೆ.

67
ಅಜ್ಜಿ ಎಂದ ಗೌತಮ್​

ಇತ್ತ ಅಜ್ಜಿಯನ್ನು ನೋಡಲು ಬಂದ ಗೌತಮ್​ ಮತ್ತು ಭೂಮಿಕಾ ಅಜ್ಜಿಯನ್ನು ಮಾತನಾಡಿಸಿದ್ದಾರೆ. ಇನ್ನೇನು ಕೊನೆಯ ಕ್ಷಣ ಎನ್ನುವಂತೆ ಅಜ್ಜಿ ಇಬ್ಬರನ್ನೂ ಆಶೀರ್ವದಿಸಿ ನೂರ್ಕಾಲ ಹೀಗೆ ಚೆನ್ನಾಗಿ ಬಾಳಿ ಎಂದು ಆಶೀರ್ವಾದ ಮಾಡಿದ್ದಾಳೆ.

77
ಹೈಲೆವೆಲ್​ ಡ್ರಾಮಾ

ಅಲ್ಲಿಗೆ ಅಜ್ಜಿ ಮತ್ತು ಮರಿಮೊಮ್ಮಕ್ಕಳ ಡ್ರಾಮಾ​ ಹೈಲೆವೆಲ್​ ಹೋಗಿದೆ. ಒಟ್ಟಿನಲ್ಲಿ ಭೂಮಿಕಾ ಮತ್ತು ಗೌತಮ್​ ಒಂದಾದರೆ ಸಾಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Read more Photos on
click me!

Recommended Stories