Lakshmi Nivasa Serial: ಜೈಲಿನಿಂದ ವೆಂಕಿ ರಿಲೀಸ್;‌ ಸತ್ಯ ಹೇಳಿ ಎಲ್ರಿಂದ ದೂರ ಆಗ್ತಾನಾ ಸಿದ್ದೇಗೌಡ?

Published : Jun 06, 2025, 12:50 PM ISTUpdated : Jun 06, 2025, 01:04 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀಕಾಂತ್‌ನನ್ನು ವೆಂಕಿ ಕೊಲೆ ಮಾಡಿಲ್ಲ ಅಂದ್ರೆ ಅಪಘಾತ ಮಾಡಿರೋರು ಯಾರು ಎನ್ನೋದು ರಿವೀಲ್‌ ಆಗಬೇಕಿದೆ. ಈಗ ಸಿದ್ದು ಜೈಲಿಗೆ ಹೋಗ್ತಾನಾ? ಏನಾಗಬಹುದು?

PREV
16

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಮದುವೆ ಆಗಬೇಕಿದ್ದ ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ನಲ್ಲಿ ವೆಂಕಿ ಸಿಲುಕಿ ಹಾಕಿಕೊಂಡಿದ್ದಾನೆ. ಸಿದ್ದೇಗೌಡನೇ ಈ ಅಪಘಾತ ಮಾಡಿದ್ದು ಎನ್ನೋದು ಅವನ ಮನೆಯವರಿಗೆ ಮಾತ್ರ ಗೊತ್ತಿದೆ.

26

ಸಿದ್ದುನನ್ನು ಕಾಪಾಡಲು ಹೋಗಿ ವೆಂಕಿಯನ್ನು ಜೈಲಿಗೆ ಕಳಿಸಲಾಗಿತ್ತು. ಭಾವನಾ ಮನೆಯವರಿಗೆ ಬಿಟ್ಟು ಉಳಿದವರಿಗೆ ಈ ವಿಷಯ ಗೊತ್ತಿತ್ತು. ಮಗನನ್ನು ಕಾಪಾಡಬೇಕು ಅಂತ ವೆಂಕಿಯನ್ನು ಬಲಿಕೊಡಲು ಸಿದ್ದು ತಂದೆ ರೆಡಿಯಾಗಿದ್ದನು.

36

ಇನ್ನೊಂದು ಕಡೆ ಏನೂ ಮಾಡದ ವೆಂಕಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಅಂತ ಭಾವನಾ ಅಂದುಕೊಂಡಿದ್ದಾಳೆ. ಹೀಗಾಗಿ ಅವಳು ಒದ್ದಾಡುತ್ತಿದ್ದಾಳೆ. ಇನ್ನು ಕೊನೆಗೂ ವೆಂಕಿಯದ್ದು ತಪ್ಪಿಲ್ಲ. ಅಂದು ಆಕ್ಸಿಡೆಂಟ್‌ ಆಗೋ ದಿನ ವೆಂಕಿ ಮದುವೆ ಮಂಟಪದಲ್ಲಿ ಓಡಾಡುತ್ತಿದ್ದ ಎನ್ನೋದನ್ನು ಭಾವನಾ ಕೋರ್ಟ್‌ನಲ್ಲಿ ಸಾಬೀತುಪಡಿಸಿದ್ದಾಳೆ.

46

ಹಾಗಾದರೆ ಕೊಲೆ ಮಾಡಿದವರ ಹೆಸರು ಹೊರಗಡೆ ಬರತ್ತಾ? ಹೌದು. ನಾನೇ ಕೊಲೆ ಮಾಡಿದ್ದೇನೆ ಅಂತ ಸಿದ್ದು ಒಪ್ಪಿಕೊಳ್ಳಲು ರೆಡಿ ಆಗಿದ್ದಾನೆ. ಭಾವನಾಳನ್ನು ಇಷ್ಟಪಟ್ಟ ಸಿದ್ದು, ಅವಳಿಗೆ ಗೊತ್ತಿಲ್ಲದೆ ತಾಳಿ ಕಟ್ಟಿದ್ದನು. ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರೋ ಸಿದ್ದುನನ್ನು ಪ್ರೀತಿಸಲು ಭಾವನಾ ಒಂದಷ್ಟು ಟೈಮ್‌ ತಗೊಂಡಿದ್ದಾಳೆ.

56

ಭಾವನಾ ಹಾಗೂ ಸಿದ್ದು ನಡುವೆ ಈಗ ಪ್ರೀತಿ ಶುರುವಾಗಿದೆ. ಇವರಿಬ್ಬರೂ ಇನ್ನೇನು ಹೊಸ ಜೀವನ ಶುರು ಮಾಡ್ತಾರೆ ಎನ್ನುವಷ್ಟರಲ್ಲಿ ಸಿದ್ದುನೇ ಕೊಲೆ ಮಾಡಿದ್ದು ಅಂತ ಗೊತ್ತಾದರೆ ಏನಾಗುವುದು. ಇಷ್ಟುದಿನ ಸತ್ಯ ಮುಚ್ಚಿಟ್ಟಿದ್ದರು ಅಂತ ಸಿದ್ದುನನ್ನು ಭಾವನಾ ದೂರ ಮಾಡಲೂಬಹುದು.

66

ಪಾತ್ರಧಾರಿಗಳು

ಸಿದ್ದೇಗೌಡ- ಧನಂಜಯ

ಭಾವನಾ- ದಿಶಾ ಮದನ್‌

ವೆಂಕಿ-ಚಂದ್ರಶೇಖರ್‌

ಚೆಲುವಿ-ಅಮೃತಾ ಮೂರ್ತಿ

Read more Photos on
click me!

Recommended Stories