ಬಿಗ್ ಬಾಸ್ ಮನೆ ಮಗಳು ಇದೀಗ ಹೊಸ ಧಾರಾವಾಹಿಯಲ್ಲಿ ವಿಲನ್: ಹೊಸ ಅವತಾರದಲ್ಲಿ ಐಶ್ವರ್ಯಾ ಶಿಂಧೋಗಿ

Published : Jun 05, 2025, 09:35 PM IST

ಐಶ್ವರ್ಯಾ ಶಿಂಧೋಗಿ ಅವರಿಗೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್​ನ ಪಾತ್ರ ಸಿಕ್ಕಿದೆ. ಈ ಸಂದರ್ಭದ ಪ್ರೋಮೋನ ಸ್ಟಾರ್ ಸುವರ್ಣ ವಾಹಿನಿಯು ಹಂಚಿಕೊಂಡಿದೆ.

PREV
17

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಆಗಿ ಬಿಗ್ ಬಾಸ್ ಮನೆ ಮಗಳು ಎಂದು ಗಮನ ಸೆಳೆದವರು ಐಶ್ವರ್ಯಾ ಶಿಂಧೋಗಿ. ಸದ್ಯ ಐಶ್ವರ್ಯಾ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ.

27

ಹೌದು! ಐಶ್ವರ್ಯಾ ಶಿಂಧೋಗಿ ಅವರಿಗೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್​ನ ಪಾತ್ರ ಸಿಕ್ಕಿದೆ. ಈ ಸಂದರ್ಭದ ಪ್ರೋಮೋನ ಸ್ಟಾರ್ ಸುವರ್ಣ ವಾಹಿನಿಯು ಹಂಚಿಕೊಂಡಿದೆ.

37

ಹೆಸರು ಮಾತ್ರ ಸಾಕ್ಷಿ, ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ಧುರ್ಯೋದನ ಇಷ್ಟ ಎಂದು ಐಶ್ವರ್ಯಾ ಅವರ ಪಾತ್ರ ಪರಿಚಯ ಆಗುತ್ತದೆ.

47

ಇದು ನೆಗೆಟಿವ್ ಶೇಡ್‌ನ ಪಾತ್ರ ಎಂಬುದು ಸ್ಪಷ್ಟವಾಗಿದೆ. ಕಥಾ ನಾಯಕ-ನಾಯಕಿ ಮಧ್ಯೆ ಸಾಕ್ಷಿ ಬರುತ್ತಾಳೆ. ಇನ್ನು ರಾಣಾ ಪಾತ್ರದಲ್ಲಿ ಸುಂದರ್ ಅವರು ಕಾಣಿಸಿದ್ದಾರೆ. ಸದ್ಯ ಈ ಪ್ರೋಮೋ ಎಲ್ಲರ ಗಮನ ಸೆಳೆದಿದೆ.

57

ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿನ್ನ ಜೊತೆ ನನ್ನ ಕಥೆ ಹೆಸರಿನ ಧಾರಾವಾಹಿಯು ಈಗಾಗಲೇ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಐಶ್ವರ್ಯಾ ಶಿಂಧೋಗಿ ನಟಿಸೋ ಸಾಧ್ಯತೆ ಇದೆ.

67

ಇತ್ತೀಚೆಗೆ ಐಶ್ವರ್ಯಾ ಶಿಂಧೋಗಿ ದುಬಾರಿ ಬೆಲೆಯ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದರು. ಇದೀಗ ಹೊಸ ಧಾರಾವಾಹಿಯಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

77

ಇನ್ನು ನಾಗಿಣಿ 2, ಮಂಗಳ ಗೌರಿ ಮದುವೆ ಹಾಗೂ ನಮ್ಮ ಲಚ್ಚಿ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಇದೆಲ್ಲದರ ಮಧ್ಯೆ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ಅವರ ಲವ್‌ ಗಾಸಿಪ್‌ ಕೂಡ ಜೋರಾಗಿ ಹಬ್ಬಿದೆ.

Read more Photos on
click me!

Recommended Stories