Lakshmi Nivasa: ಮದ್ವೆಗೆ ಸಿದ್ಧವಾದ ಸಿಂಚನಾ ಸೀರಿಯಲ್​ನಿಂದ ಹೊರಕ್ಕೆ: ಮರಳಿ ಬಂದ ಹಳೆಯ 'ಸಿಂಚನಾ'

Published : Jul 05, 2026, 05:27 PM IST

'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿಂಚನಾ ಪಾತ್ರಧಾರಿ ರೂಪಿಕಾ ಅವರು ಮದುವೆಯ ಕಾರಣದಿಂದ ಸೀರಿಯಲ್ ತೊರೆದಿದ್ದಾರೆ. ಅವರ ಸ್ಥಾನಕ್ಕೆ, ಈ ಹಿಂದೆ ಇದೇ ಪಾತ್ರ ನಿರ್ವಹಿಸಿದ್ದ ನಟಿ ದಿವ್ಯಶ್ರೀ ಅವರು ಮರುಪ್ರವೇಶ ಮಾಡಿದ್ದಾರೆ.

PREV
16
ಬದಲಾದ ಸಿಂಚನಾ

ಲಕ್ಷ್ಮೀ ನಿವಾಸ (Lakshmi Nivasa Serial) ಧಾರಾವಾಹಿಯಲ್ಲಿ ಸಿಂಚನಾ ಪಾತ್ರ ಮಾಡುತ್ತಿದ್ದ ರೂಪಿಕಾ ಅವರು ಬದಲಾಗಿದ್ದಾರೆ. ಏಕೆಂದರೆ, ಬರುವ ಆಗಸ್ಟ್​ 31ರಂದು ಇವರ ಮದುವೆ ಇದೆ. ಕಳೆದ 5 ವರ್ಷಗಳಿಂದ ಕೆನಡಾದಲ್ಲೇ ನೆಲೆಸಿರುವ ಅಂಕಿತ್​ ಎನ್ನುವವರ ಜೊತೆ ರೂಪಿಕಾ ಅವರದ್ದು ಅರೇಂಜ್ಡ್​​ ಮ್ಯಾರೇಜ್​ ಆಗಲಿದ್ದಾರೆ. ಭಾವಿ ಪತಿ ಅಂಕಿತ್​ ಕೆನಡಾದಲ್ಲಿ ಇನ್ವೆಸ್ಟ್‌ ಕೋ ಅಂತ ಫೈನಾನ್ಸ್‌ ಕಂಪನಿಯಲ್ಲಿ, ಟ್ಯಾಕ್ಸ್‌ ಸ್ಪೆಷಲಿಸ್ಟ್‌ ಆಗಿ ವರ್ಕ್‌ ಆಗಿದ್ದಾರೆ.

26
ಮದುವೆಗಾಗಿ ಸೀರಿಯಲ್​ನಿಂದ ದೂರ

ಇದೇ ಕಾರಣಕ್ಕೆ, ಮದುವೆ ತಯಾರಿಗಾಗಿ ರೂಪಿಕಾ ಸೀರಿಯಲ್​ ಬಿಟ್ಟಿದ್ದಾರೆ. ಮದುವೆಯ ನಂತರ ಕೆನಡಾಗೆ ಹೋಗಿ ಸೆಟಲ್​ ಆಗುವ ಪ್ಲ್ಯಾನ್​ ಕೂಡ ಇರುವ ಹಿನ್ನೆಲೆಯಲ್ಲಿ, ಅವರು ಧಾರಾವಾಹಿಯನ್ನು ತೊರೆದಿದ್ದಾರೆ.

36
ರೂಪಿಕಾ ಬದಲು ದಿವ್ಯಶ್ರೀ

ಸಿಂಚನಾ ಪಾತ್ರವನ್ನು ಇನ್ನುಮುಂದೆ ನಟಿ ದಿವ್ಯಶ್ರೀ ಅವರು ಮಾಡಲಿದ್ದಾರೆ. ಕುತೂಹಲದ ವಿಷ್ಯ ಏನೆಂದರೆ, ದಿವ್ಯಶ್ರೀ ಅವರು, ರೂಪಿಕಾ ಅವರು ಈ ಪಾತ್ರಕ್ಕೂ ಬರುವ ಮುನ್ನ ಸಿಂಚನಾ ಆಗಿ ನಟಿಸಿದ್ದರು. ಅವರು ಸೀರಿಯಲ್​ ತೊರೆದಿದ್ದರಿಂದ ಆ ರೋಲ್​ ಅನ್ನು ರೂಪಿಕಾ ನಿರ್ವಹಿಸುತ್ತಿದ್ದರು.

46
ಬೇರೆ ಸೀರಿಯಲ್​ ಆಫರ್​

2024ರಲ್ಲಿ, ದಿವ್ಯಶ್ರೀ ಸೀರಿಯಲ್ ಅರ್ಧಕ್ಕೆ ಬಿಟ್ಟಿದ್ದರು. ಇದಕ್ಕೆ ಕಾರಣ, ಕಲರ್ಸ್ ಕನ್ನಡದ (Colors Kannada) ಚುಕ್ಕಿ ತಾರೆ ಸೀರಿಯಲ್. ಚುಕ್ಕಿ ತಾರೆ ಧಾರಾವಾಹಿಯಲ್ಲಿ ದಿವ್ಯಶ್ರೀ ಲೀಡ್ ರೋಲ್‌ನಲ್ಲಿ ನವೀನ್ ಸಜ್ಜು ಜೊತೆ ನಟಿಸುವ ಆಫರ್​ ಬಂದಿದ್ದರಿಂದ ಲಕ್ಷ್ಮೀ ನಿವಾಸ ತೊರೆದಿದ್ದರು. ಈಗ ಮತ್ತೆ ಅದೇ ರೋಲ್​ಗೆ ಕಮ್​ಬ್ಯಾಕ್​ ಆಗಿದ್ದಾರೆ.

56
ರೂಪಿಕಾ ಕುರಿತು

ಇನ್ನು ನಟಿ ರೂಪಿಕಾ ಕುರಿತು ಹೇಳುವುದಾದರೆ, ಕನ್ನಡದಲ್ಲಿ ಬಾಲ ನಟಿಯಾಗಿ ನಟನೆ ಆರಂಭಿಸಿದ ರೂಪಿಕಾ ಬಳಿಕ ಚೆಲುವಿನ ಚಿಲಿಪಿಲಿ, ಕಾಲ್ಗೆಜ್ಜೆ, ರುದ್ರಾಕ್ಷಿಪುರ, ಮಜ್ಜಿಗೆ ಹುಳಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ದೊರೆ ಸಾನಿ ಎನ್ನುವ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ರೂಪಿಕಾ ನಟಿಸಿದ್ದರು.

66
ಭರತನಾಟ್ಯ ಕಲಾವಿದೆ

ನಟಿ ರೂಪಿಕಾ ಭರತನಾಟ್ಯ ಕಲಾವಿದೆ. ಇದಾಗಲೇ ಹಲವಾರು ಪ್ರಶಸ್ತಿಗಳು ಬಂದಿವೆ. ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದಮೇಲೆ ಕೆನಡಾದಲ್ಲಿಯೂ ಇದನ್ನು ಮುಂದುವರೆಸುವ ಯೋಚನೆ ಇರುವುದಾಗಿ ನಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories