ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ, ಭಾವುಕ ಪೋಸ್ಟ್

Published : Jul 05, 2026, 05:11 PM IST

ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ ಚಕ್ರವರ್ತಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದ ನಟಿ ಕಳೆದೆರಡು ತಿಂಗಳಿನಿಂದ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದಾರೆ.

PREV
16
ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದ ನಟಿ

ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಕಪಿಲ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸುಮೋನಾ ಚಕ್ರವರ್ತಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಕಳೆದೆರಡು ತಿಂಗಳಿನಿಂದ ಸೋಶಿಯಲ್ ಮೀಡಿಯಾಗಳಿಂದಲೂ ದೂರ ಉಳಿದಿರುವ ಸುಮೋನಾ ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾಗಿದ್ದಾರೆ. ಈ ಕುರಿತು 2 ತಿಂಗಳ ಬಳಿಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

26
ಆರೋಗ್ಯ ಸಮಸ್ಯೆ ಕುರಿತು ಮುಕ್ತವಾಗಿ ಮಾತನಾಡಿದ ಸುಮೋನಾ

ಎಂಡೊಮೆಟ್ರಿಯೊಸಿಸ್ ಆರೋಗ್ಯ ಸಮಸ್ಯೆ 2021ರಲ್ಲಿ ಕಾಣಿಸಿಕೊಡಿತ್ತು. ಆದರೆ ಇತ್ತೀಚೆಗೆ ತೀವ್ರವಾಗಿತ್ತು. ಹೀಗಾಗಿ ಮೇ ತಿಂಗಳಲ್ಲಿ ತಾನು ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ. ಹೊಟ್ಟೆ ಮೇಲೆ ಗಾಯದ ಕುರುತುಗಳಿವೆ. ಸದ್ಯ ಆರೋಗ್ಯದ ಕಡೆಗೆ ಗಮನ ಹರಿಸಿದ್ದೇನೆ ಎಂದು ಸುಮೋನಾ ಹೇಳಿದ್ದಾರೆ.

36
2 ತಿಂಗಳ ಬಳಿಕ ಭಾವುಕ ಪೋಸ್ಟ್

ಆರೋಗ್ಯ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಸುಮೋನಾ ಚಕ್ರವರ್ತಿ ನಟನೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಂದ ದೂರವಾಗಿದ್ದು ಮಾತ್ರವಲ್ಲ, ಸೋಶಿಯಲ್ ಮೀಡಿಯಾಗಳಿಂದ ದೂರವಾಗಿದ್ದೆ. ಮೇ.4ರಂದು ಸರ್ಜರಿಗೆ ಒಳಗಾಗಿದ್ದೆ. ಕೆಲ ವರ್ಷಗಳಿಂದ ಎಂಡೊಮೆಟ್ರಿಯೊಸಿಸ್ ನಿಯಂತ್ರಿಸಲು ಪ್ರಯತ್ನ ಪಟ್ಟಿದೆ. ಆದರೆ ಸಮಸ್ಯೆ ಉಲ್ಬಣಗೊಂಡಿತ್ತು. ಹೀಗಾಗಿ ಸರ್ಜರಿ ಅನಿವಾರ್ಯವಾಗಿತ್ತು ಎಂದು ಸುಮೋನಾ ಹೇಳಿದ್ದಾರೆ.

46
ವ್ಯಾಟ್ಸಾಪ್ ಡಿಲೀಟ್ ಮಾಡಲು ಮುಂದಾಗಿದ್ದ ನಟಿ

ಮಾನಸಿಕವಾಗಿ, ದೈಹಿಕವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ವ್ಯಾಟ್ಸಾಪ್ ಡಿಲೀಟ್ ಮಾಡಬೇಕೆಂದು ನಿರ್ಧರಿಸಿದ್ದೆ. ಇನ್‌ಸ್ಟಾಗ್ರಾಂ ಡಿಲೀಟ್ ಮಾಡಲು ಮಂದಾಗಿದ್ದೆ. ಆದರೆ ಹಲವರ ಸಲಹೆ ಸ್ವೀಕರಿಸಿ ನಿರ್ಧಾರದಿಂದ ಹಿಂದೆ ಸರಿದೆ. ಮಾನಸಿಕವಾಗಿಯೂ ನಾನು ಕುಗ್ಗಿ ಹೋಗಿದ್ದೆ. ಇದೀಗ ಚೇತರಿಕೆ ಸಮಯ ಎಂದು ಸುಮೋನಾ ಚಕ್ರವರ್ತಿ ಹೇಳಿದ್ದಾರೆ.

56
ಟ್ರೋಲ್, ಕಮೆಂಟ್‌ಗೆ ತಿರುಗೇಟು

ತುಟಿ, ದೇಹದ ಭಾಗಗಳ ಬಗ್ಗೆ ಕೆಟ್ಟ ಕಮೆಂಟ್ ಮಾಡುತ್ತಾರೆ. ಇದು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಕೀಳುಮಟ್ಟದ ಕಮೆಂಟ್ ಅವಕಾಶಗಳನ್ನು ಪಡೆಯುತ್ತಾ ಮೇಲೆ ಬರುತ್ತಿರುವ ನನ್ನಂತ ಹಲವರ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ. ಟ್ರೋಲ್, ಕಮೆಂಟ್ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುತ್ತಿದ್ದೆ. ಆದರೆ ಇದೀಗ ಉತ್ತಮರು ನೀಡಿದ ಸಲಹೆ ಪ್ರಕಾರ ಮುಂದುವರಿಯುತ್ತಿದ್ದೇನೆ ಎಂದಿದ್ದಾರೆ.

66
ಗಾಯಗ ಗುರುತು ನೋಡಿದಾಗ ಬೇಸರವಾಗುತ್ತೆ

ಸರ್ಜರಿ ಬಳಿಕ ನನ್ನ ಹೊಟ್ಟೆ ಮೇಲೆ ಮೂರು ಗಾಯದ ಗುರುತುಗಳಿವೆ. ಇದು ಮಾಸಲು ಹಲವು ದಿನಗಳೇ ಬೇಕು. ಆದರೆ ನೋಡುವಾಗ ಬೇಸರವಾಗುತ್ತದೆ. ನಟಿಯಾಗಿ ಹೊಟ್ಟೆ ಮೇಲೆ ಗಾಯದ ಗುರುತಿದ್ದರೆ ಕಷ್ಟ. ಆದರೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಚೇತರಿಕೆ ಬಳಿಕ ನಟನೆ ಮುಂದುವರಿಸುತ್ತೇನೆ ಎಂದು ಸುಮೋನಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories