Kwatle Kitchen: ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ

Published : Jul 05, 2026, 01:07 PM IST

ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಸೀಸನ್ 2 ಶೋನಲ್ಲಿ, ಗಾಯಕ ಹನುಮಂತ 'ಅರುಂಧತಿ' ಸಿನಿಮಾದ ಪಶುಪತಿ ಪಾತ್ರದಲ್ಲಿ ಕಾಣಿಸಿಕೊಂಡು ನಗೆಗಡಲಲ್ಲಿ ತೇಲಿಸಿದ್ದಾರೆ. ಅವರ ತಮಾಷೆಯ ಸಂಭಾಷಣೆಗಳು, ತುಕಾಲಿ ಸಂತೋಷ್ ಅವರ ಅನ್ನಾಬೆಲ್ಲಾ ಗೆಟಪ್ ಮತ್ತು ಇತರ ಸ್ಪರ್ಧಿಗಳ ಕ್ವಾಟ್ಲೆಗಳು ಸಂಚಿಕೆಯನ್ನು ರಂಜನೀಯವಾಗಿಸಿವೆ.

PREV
15
ಕ್ವಾಟ್ಲೆ ಕಿಚನ್ ಸೀಸನ್ 2

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕ್ವಾಟ್ಲೆ ಕಿಚನ್ ಸೀಸನ್ 2 ಅದ್ಧೂರಿ ಆರಂಭ ಪಡೆದುಕೊಂಡಿದೆ. ಈ ಬಾರಿಯ ಸೀಸನ್‌ನಲ್ಲಿ ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಮತ್ತು ಸಿಂಗರ್ ಹನುಮಂತ ಹೈಲೈಟ್ ಆಗಿದ್ದಾರೆ. ಶೋ ಆರಂಭವಾದ ದಿನದಿಂದಲೂ ಇವರಿಬ್ಬರು ಮಾಡುವ ತಮಾಷೆ ವಿಡಿಯೋಗಳು ವೈರಲ್ ಆಗುತ್ತವೆ.

25
ಪಶುಪತಿ ಪಾತ್ರದಲ್ಲಿ ಹನುಮಂತ

ಈ ವಾರದ ಸಂಚಿಕೆಯಲ್ಲಿ ಅರುಂಧತಿ ಸಿನಿಮಾದ ವಿಲನ್ ಪಶುಪತಿ ಪಾತ್ರದಲ್ಲಿ ಹನುಮಂತ ಕಾಣಿಸಿಕೊಂಡಿದ್ದಾರೆ. ಬೊಮ್ಮಾಲಿ ಎಂದು ಹೇಳುತ್ತಾ ಹನುಮಂತ ಶೋನಲ್ಲಿದ್ದ ಎಲ್ಲರನ್ನು ನಗಿಸಿದ್ದಾರೆ. ಇದೇ ವೇಳೆ ನಾಲ್ಕು ವಾರದಿಂದ ಚಾನೆಲ್‌ನವರು ಸಂಭಾವನೆಯನ್ನು ನೀಡಿಲ್ಲ ಎಂದು ಹನುಮಂತ ಹೇಳಿಕೊಂಡಿದ್ದಾ

35
ಪಶುಪತಿ ದೆವ್ವ ಬಿಡಿಸುವ ವ್ಯಕ್ತಿ

ಕ್ವಾಟ್ಲೆ ಕಿಚನ್ ಶೋ ನಿರೂಪಕಿಯಾಗಿರುವ ಸುಷ್ಮಾ ರಾವ್, ಸಿನಿಮಾದಲ್ಲಿ ಪಶುಪತಿ ಏನು ಮಾಡ್ತಾನೆ? ಅರುಂಧತಿ ಸಿನಿಮಾ ನೋಡಿದ್ದೀಯಾ ಎಂದು ಕೇಳುತ್ತಾರೆ. ಇದಕ್ಕೆ ಪಶುಪತಿ ದೆವ್ವ ಬಿಡಿಸುವ ವ್ಯಕ್ತಿ ಎಂದು ಹೇಳುತ್ತಾರೆ. ಹನುಮಂತ ಅವರ ಮಾತು ಕೇಳಿದ್ರೆ ಅರುಂಧತಿ ಸಿನಿಮಾ ನೋಡಿಲ್ಲ ಎಂದು ಅರ್ಥವಾಗುತ್ತದೆ.

45
ಮೂಸುವ ಮೂಲಕ ದೆವ್ವ ಬಿಡಿಸೋದು

ಮುಂದುವರಿದು ಮೂಸುವ ಮೂಲಕ ದೆವ್ವ ಬಿಡಿಸೋದಾಗಿ ಹನುಮಂತ ಹೇಳುತ್ತಾರೆ. ಈ ಮಾತನ್ನು ಕೇಳುತ್ತಿದ್ದಂತೆ ಕರಿಯಪ್ಪ, ನನ್ನನ್ನು ಮೂಸುವಂತೆ ಹೇಳಿ ಜೈ ರುಂಡಮಾಲಿನಿ ಅಂತಾರೆ. ಇಂದಿನ ಸಂಚಿಕೆಯಲ್ಲಿ ಪ್ರಚಂಡ ಕುಳ್ಳ ಸಿನಿಮಾದ ಕಿಂಕಿಣಿ ಶರ್ಮಾದಲ್ಲಿ ಕಾಣಿಸಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದಿರೋದನ್ನು ಗಮನಿಸಬಹುದು.

55
ಅನ್ನಾಬೆಲ್ಲಾ ಗೊಂಬೆಯ ಲುಕ್‌ನಲ್ಲಿ ತುಕಾಲಿ ಸಂತೋಷ

ಈ ಎಲ್ಲದರ ನಡುವೆ ತುಕಾಲಿ ಸಂತೋಷ್, ಎಲ್ಲಾ ಸ್ಪರ್ಧಿಗಳನ್ನು ತಮಾಷೆ ಮಾಡಿದ್ದಾರೆ. ಹನುಮಂತ ನೀನು ಮಾಡ್ತಿರೋದು ಪಶುಪತಿ ಎಂಬ ವಿಲನ್ ಪಾತ್ರ, ನಾಯಿ ರೋಲ್ ಅಲ್ಲ ಅಂದಿದ್ದಾರೆ. ಇನ್ನು ತುಕಾಲಿ ಸಂತೋಷ್, ಹಾರರ್ ಮೂವಿಯ ಅನ್ನಾಬೆಲ್ಲಾ ಗೊಂಬೆಯ ಲುಕ್‌ನಲ್ಲಿ ಬಂದಿದ್ದಾರೆ. ಈ ಶೋನಲ್ಲಿ ತೀರ್ಪುಗಾರರಾಗಿ ನಟಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories