'ಕೃಷ್ಣ ರುಕ್ಕು' ಎಂಬ ಹೊಸ ಕನ್ನಡ ಧಾರಾವಾಹಿಯು ಅಣ್ಣನ ಸಾವಿಗೆ ಕಾರಣವಾದ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ತಂಗಿಯ ಕಥೆಯಾಗಿದೆ. ನಾಯಕನ ಅಜಾಗರೂಕತೆಯಿಂದ ನಡೆದ ಅಪಘಾತದಲ್ಲಿ ಅಣ್ಣನನ್ನು ಕಳೆದುಕೊಂಡ ಇಬ್ಬರು ಸಹೋದರಿಯರು, ಅದೇ ಮನೆಗೆ ಸೊಸೆಯರಾಗಿ ಪ್ರವೇಶಿಸುತ್ತಾರೆ.
ಜೀ ಕನ್ನಡದ ಹೊಸ ಧಾರಾವಾಗಿ 'ಕೃಷ್ಣ ರುಕ್ಕು' ಸೀರಿಯಲ್ ಮಾರ್ಚ್ 9ರಿಂದ ಪ್ರಸಾರವಾಗಲಿದೆ ಎಂದು ವಾಹಿನಿ ಹೇಳಿದೆ. ಇಂದು ಸುದೀರ್ಘವಾದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಧಾರವಾಹಿ ಕಥೆ ಏನು? ಪಾತ್ರಗಳ ಪರಿಚಯವನ್ನು ನೀಡಲಾಗಿದೆ.
25
ನವೀನ್ ಸಜ್ಜು
ಗಾಯಕ ನವೀನ್ ಸಜ್ಜು ಈ ಸೀರಿಯಲ್‌ನಲ್ಲಿ ಮನೆಯ ಜವಾಬ್ದಾರಿ ಹೊತ್ತ ಮಗ, ಮೂವರು ತಂಗಿಯರ ಮುದ್ದಿನ ಮಗನಾಗಿ ಕಾಣಿಸಿಕೊಂಡಿದ್ದರು. ಆದ್ರೆ ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರವನ್ನು ಮುಗಿಸಲಾಗಿದೆ. ಈ ಹಿಂದೆ ಕಲರ್ಸ್ ಕನ್ನಡದ ಚುಕ್ಕಿ ತಾರೆ ಸೀರಿಯಲ್‌ನಲ್ಲಿಯೂ ನವೀನ್ ಸಜ್ಜು ನಟಿಸಿದ್ದರು. ಆದ್ರೆ ಇಲ್ಲಿಯೂ ಸೀರಿಯಲ್ ಆರಂಭವಾದ ಎರಡೇ ವಾರದಲ್ಲಿ ನವೀನ್ ಸಜ್ಜು ಪಾತ್ರ ಮುಕ್ತಾಯಗೊಂಡಿತ್ತು.
35
ಕೃಷ್ಣ-ರುಕ್ಕು ಕಥೆ ಏನು?
ಮಧ್ಯಮ ವರ್ಗದ ಮಂಜು ವೃತ್ತಿಯಲ್ಲಿ ಆಟೋ ಚಾಲಕ. ಮಂಜುಗೆ ಮೂರು ಜನ ಮುದ್ದಾದ ತಂಗಿಯರು. ಮೊದಲ ತಂಗಿ ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೊರಟಾಗ ನಡೆದ ಅಪಘಾತದಲ್ಲಿ ಮಂಜು ಸಾಯುತ್ತಾನೆ. ಇದೇ ಅಪಘಾತದಲ್ಲಿ ಮದುವೆಯಾಗಬೇಕಿದ್ದ ಹುಡುಗನೂ ಸಾಯುತ್ತಾನೆ.
ಇತ್ತ ಕಥಾನಾಯಕ ತಾಯಿಯನ್ನು ಕಳೆದುಕೊಂಡ ತಬ್ಬಲಿ ಮಗ. ತಂದೆ ಸೂರ್ಯಪ್ರಕಾಶ್ ಮಗನಾಗಿರುವ ಹೀರೋ ಮದ್ಯ ಸೇವಿಸಿ ಕಾರ್ ಚಲಾಯಿಸಿ ವೇಗವಾಗಿ ಆಟೋಗೆ ಡಿಕ್ಕಿ ಹೊಡೆಯುತ್ತಾನೆ. ಈ ಅಪಘಾತದಲ್ಲಿ ಮಂಜು ಮತ್ತು ಆತನ ತಂಗಿಯನ್ನು ಮದುವೆಯಾಗಬೇಕಿರೋ ಹುಡುಗ ಸಾಯುತ್ತಾನೆ.
ಪ್ರಿಯಕರ ಮತ್ತು ಅಣ್ಣನ ಸಾವಿನ ಚಿತೆ ಮುಂದೆ ಶಪಥ ಮಾಡುವ ಮಂಜು ತಂಗಿ, ಇಬ್ಬರ ಸಾವಿಗೆ ಕಾರಣಾದ ಕುಟುಂಬದ ನಾಶ ಮಾಡುವ ಶಪಥ ಮಾಡುತ್ತಾಳೆ. ಹಾಗಾಗಿ ಕಥಾನಾಯಕ ಕೃಷ್ಣನ ಸೋದರನನ್ನ ಮದುವೆಯಾಗಿ ಸೂರ್ಯಪ್ರಕಾಶ್ ಮನೆಗೆ ಬರುತ್ತಾಳೆ. ಅಚ್ಚರಿ ಎಂಬಂತೆ ಮಂಜು ಮತ್ತೋರ್ವ ಸೋದರಿ ರುಕ್ಕು ಸಹ ಕೃಷ್ಣನನ್ನು ಮದುವೆಯಾಗಿ ಬರುತ್ತಾಳೆ. ಸೂರ್ಯಪ್ರಕಾಶ್ ಪಾತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್.ನಾರಾಯಣ್ ನಟಿಸಿದ್ದಾರೆ.
ದಿನಾಂಕ ಮಾತ್ರ ನೀಡಲಾಗಿದ್ದು, ಯಾವ ಸಮಯ ಎಂಬುದರ ಮಾಹಿತಿಯನ್ನು ವಾಹಿನಿ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.