Published : Feb 22, 2026, 09:01 PM ISTUpdated : Feb 22, 2026, 09:06 PM IST
Tanya Mittal wedding rumors: ಹಿಂದಿ ಬಿಗ್ಬಾಸ್ 19ರ ಸ್ಪರ್ಧಿ ತಾನ್ಯಾ ಮಿತ್ತಲ್ ಮದುಮಗಳ ವೇಷದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮದುವೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸಿದ್ಧತೆ ಆರಂಭವಾಗಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ಪೋಸ್ಟ್ ಮಾಡಿರುವುದರಿಂದ ವೀಡಿಯೋ ಜನರ ಕುತೂಹಲ ಹೆಚ್ಚಾಗಿದೆ.
ಬಿಗ್ಬಾಸ್ ಬೆಡಗಿ ಬಂಡಲ್ ರಾಣಿ ಎಂದೇ ಫೇಮಸ್ ಆಗಿದ್ದ ತಾನ್ಯಾ ಮಿತ್ತಲ್ ಹಸೆಮಣೆ ಏರ್ತಿದ್ದಾರಾ ಹೀಗೊಂದು ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದಕ್ಕೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ವೀಡಿಯೋವೊಂದು ಕಾರಣವಾಗಿದೆ. ಹೌದು ಸಲ್ಮಾನ್ ಖಾನ್ ನಡೆಸಿ ಕೊಡುವ ಹಿಂದಿ ಬಿಗ್ಬಾಸ್ 19ರ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ತಾನ್ಯಾ ಮಿತ್ತಲ್‌ಗೆ ತನ್ನ ಅಭಿಮಾನಿಗಳನ್ನು ಹೇಗೆ ಸೆಳೆಯಬೇಕು ಎಂಬುದು ಚೆನ್ನಾಗಿ ತಿಳಿದಂತಿದೆ.
ಬಿಗ್ಬಾಸ್ ಕಾರ್ಯಕ್ರಮ ಮುಗಿದು ತಿಂಗಳುಗಳೇ ಕಳೆದರೂ ಅವರ ಡ್ರಾಮಾಗಳು ಹಾಗೂ ಅವರ ಐಷಾರಾಮಿ ಜೀವನಕ್ಕೆ ಸಂಬಂಧಿಸಿದಂತೆ ಟ್ರೆಂಡ್ ಜನರನ್ನು ಸೆಳೆಯುತ್ತಲೇ ಇದೆ. ಹೀಗಿರುವಾಗ ತಾನ್ಯಾ ಮಿತ್ತಲ್ ಮದ್ವೆಯಾಗ್ತಿದ್ದಾರೆ. ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂಬ ಊಹಾಪೋಹಾವೊಂದು ಹರಿದಾಡುತ್ತಿದೆ. ಅದಕ್ಕೆ ಕಾರಣ ತಾನ್ಯಾ ಮಿತ್ತಲ್ ನೀಡಿರುವ ಒಂದು ವೀಡಿಯೋ ಹಿಂಟ್.
ತಾನ್ಯಾ ಮಿತಲ್ ಅವರು ಮದುಮಗಳಂತೆ ಸಿಂಗಾರಗೊಂಡು ಉತ್ತರ ಭಾರತದಲ್ಲಿ ಮದುಮಗಳು ಧರಿಸುವಂತೆ ಕೆಂಪು ಬಣ್ಣದ ಲೆಹಂಗಾ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ವಿಡಿಯೋದಲ್ಲಿ ಅವರ ಮೇಲೆ ಕೆಂಪು ಗುಲಾಬಿ ಹೂವಿನ ಮಳೆ ಸುರಿಸುತ್ತಿರುವುದನ್ನು ಕಾಣಬಹುದು. ಅವರು ಈ ವೀಡಿಯೋಗೆ ಪ್ರಿಪರೇಷನ್ ಬಿಗಿನ್ ಎಂಬ ಶೀರ್ಷಿಕೆ ನೀಡಿದ್ದಾರೆ.
ನಿನ್ನೆ ಅವರು ಈ ವೀಡಿಯೋ ಪೋಸ್ಟ್ ಮಾಡಿದ್ದು, ಅನೇಕರು ತಾನ್ಯಾ ವಧು ಆಗ್ತಿದ್ದಾಳೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಈ ವಿಡಿಯೋಗೆ ಅನುಮಾನ ವ್ಯಕ್ತಪಡಿಸಿದ್ದು, ಇದು ಫೋಟೋಶೂಟ್ ಅನಿಸುತ್ತಿದೆ. ಆದರೆ ನನಗೆ ಹೃದಯಾಘಾತವಾಗುವುದೊಂದು ಬಾಕಿ. ತಾನ್ಯಾ ಕ್ಲಾಸಿಕ್ ಆಗಿದ್ದಾರೆ. ನಿರ್ದೇಶಕಿ ಏಕ್ತಾ ಕಪೂರ್ ತಾನ್ಯಾ ರೀಲ್ಸ್ ಅನ್ನು ಲೈಕ್ ಮಾಡಿದ್ದು, ಬಹುಶಃ ಅವರು ಯಾವುದು ಪ್ರಾಜೆಕ್ಟ್ ಮಾಡ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದು ತಾನ್ಯಾ ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಅದೃಷ್ಟಶಾಲಿ ಹುಡುಗ ಯಾರು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ
56
4.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ತಾನ್ಯಾ
ತಾನ್ಯಾ ಮಿತ್ತಲ್ ಒಬ್ಬ ಉದ್ಯಮಿ ಮತ್ತು ಡಿಜಿಟಲ್ ತಾರೆಯಾಗಿದ್ದು, ಅವರಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ 4.4 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ. ಅವರು ಹ್ಯಾಂಡ್‌ಮೇಡ್ ವಿತ್ ಲವ್ ಬೈ ತಾನ್ಯಾ ಎಂಬ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದು, ಇದು ಸಣ್ಣ ಕಲ್ಪನೆಯಿಂದ ಆರಂಭವಾದ ಉಡುಗೊರೆ ಬ್ರಾಂಡ್ ಆಗಿದೆ. ಆದರೆ ತಾನ್ಯಾಗೆ ಸಾಕಷ್ಟು ಜನಪ್ರಿಯತೆ ನೀಡಿದ್ದು, ಬಿಗ್ಬಾಸ್ 19 . ಆದರೆ ಈಗ ತಾನ್ಯಾ ಮದುವೆಯಾಗ್ತಿದ್ದಾರಾ ಇಲ್ವಾ ಅನ್ನೋ ಬಗ್ಗೆ ಅವರೇ ಹೇಳಬೇಕು. ಅವರು ಇದುವರೆಗೆ ಮದುವೆಯ ಬಗ್ಗೆಯಾಗಲಿ ತಮ್ಮ ಸಂಗಾತಿಯ ಬಗೆಯಾಗಲಿ ಹೇಳಿಕೊಂಡಿಲ್ಲ.
ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್ ಅವರು ಐಷಾರಾಮಿ ಜೀವನ ಹಾಗಿದೆ, ಹೀಗಿದೆ ಎಂದು ಹೇಳಿ ಭಾರೀ ಟ್ರೋಲ್ ಆಗಿದ್ದರು.ತಾಜ್‌ಗೆ ಹೋಗಿ ಅಲ್ಲಿ ಕಾಫಿ ಕುಡಿಯುತ್ತೇನೆ, ಇಂಗ್ಲೆಂಡ್‌ನಿಂದ ಬಿಸ್ಕತ್ ತರಿಸಿಕೊಳ್ತೀನಿ, ಒಂದು ಕಾಫಿಗೋಸ್ಕರ ಅಲ್ಲಿಗೆ ಹೋಗ್ತೀನಿ, ಬಿಗ್ ಬಾಸ್ ಮನೆಗೆ 800 ಸೀರೆ ತಂದಿದ್ದೇನೆ, ನಾನು ಐಶ್ವರ್ಯಾ ರೈಗಿಂತ ಸುಂದರಿ ಎಂದೆಲ್ಲ ಮಾತನಾಡಿದ್ದರು. ಇದನ್ನು ಕೇಳಿ ಅಲ್ಲಿದ್ದವರೇ ಅವರನ್ನು ಟ್ರೋಲ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.