Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

Published : Dec 02, 2025, 10:32 PM IST

'ಲಕ್ಷ್ಮೀ ನಿವಾಸ'ದಲ್ಲಿ ವಿಶ್ವನ ಮನೆಯಿಂದ ಹೊರಬಿದ್ದ ಜಾಹ್ನವಿಗೆ ಸಂಕಷ್ಟ ಎದುರಾಗಿದೆ. ಮಾರುವೇಷದಲ್ಲಿ ಬಂದ ಸೈಕೋ ಪತಿ ಜಯಂತ್ ಆಕೆಯನ್ನು ಹುಡುಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ, ಇಷ್ಟು ದಿನ ಜಾಹ್ನವಿಯ ಪರ ಇದ್ದ ವೀಕ್ಷಕರು ಇದೀಗ ಆಕೆಯ ವಿರುದ್ಧ ತಿರುಗಿಬಿದ್ದು ಜಯಂತ್ ಪರ ಮಾತನಾಡುತ್ತಿದ್ದಾರೆ.

PREV
17
ಮನೆಬಿಟ್ಟ ಜಾಹ್ನವಿ

ಲಕ್ಷ್ಮೀ ನಿವಾಸ (Lakshmi Nivasa)ದಲ್ಲಿ ಚಿನ್ನುಮರಿ ಜಾಹ್ನವಿ ಕಥೆ ಮತ್ತಲ್ಲಿಗೇ ಬಂದು ನಿಂತಿದೆ. ಇಷ್ಟು ದಿನ ಆಶ್ರಯ ಪಡೆದ ವಿಶ್ವನ ದೊಡ್ಡಮನೆಯಿಂದ ಆಕೆಗೆ ಗೇಟ್​ಪಾಸ್​ ಸಿಕ್ಕಿದೆ. ಆಕೆಯ ಬಗ್ಗೆ ವಿಶ್ವನ ಅಮ್ಮ ಮತ್ತು ತನುಗೆ ಸಂಶಯ ಬಂದಿದ್ದರಿಂದ ಜಾಹ್ನವಿಯ ಕುಟುಂಬದ ಬಗ್ಗೆ ಪ್ರಶ್ನೆ ಮಾಡುತ್ತಲೇ ಜಾಹ್ನವಿ ಮನೆಬಿಟ್ಟು ಬಂದಿದ್ದಾಳೆ.

27
ವೀಕ್ಷಕರ ಬೇಸರ

ವಿಶ್ವನ ಅಮ್ಮ ಉಡಿ ತುಂಬಿ ಕಳಿಸಿದ್ದಾಳೆ. ದುಡ್ಡು ಕೊಡಲು ಬಂದಾಗ ಅದನ್ನು ಜಾಹ್ನವಿ ತೆಗೆದುಕೊಳ್ಳಲಿಲ್ಲ. ಇಷ್ಟು ದಿನ ಚೆನ್ನಾಗಿ ಕೆಲಸ ಮಾಡಿದ ಜಾಹ್ನವಿಯನ್ನು ಈ ರೀತಿಯಾಗಿ ನಡುಬೀದಿಯಲ್ಲಿ ಕೈಬಿಟ್ಟಿರುವ ಬಗ್ಗೆ ವಿಶ್ವನ ಅಮ್ಮನ ಬಗ್ಗೆ ವೀಕ್ಷಕರು ತುಂಬಾ ಬೇಸರ ಹೊರಹಾಕುತ್ತಿದ್ದಾರೆ. ಅದೇ ವೇಳೆ ವಿಶ್ವನದ್ದೂ ಅತಿಯಾಗಿದ್ದರಿಂದ ತನು ಕೂಡ ಹೀಗೆ ಮಾಡಬೇಕಾಯಿತು ಎನ್ನುತ್ತಿದ್ದಾರೆ.

37
ವಿಶ್ವನ ಮನೆಗೆ ಬಂದ ಸೈಕೋ

ಅದೇ ಇನ್ನೊಂದೆಡೆ, ವೇಷ ಬದಲಿಸಿಕೊಂಡಿರುವ ಸೈಕೋ ಜಯಂತ್​ ಇದೀಗ ನೇರವಾಗಿ ವಿಶ್ವನ ಮನೆಗೇ ಬಂದಿದ್ದಾನೆ. ಜಾಹ್ನವಿ ಅಲ್ಲಿಯೇ ಇದ್ದಾಳೆ ಎನ್ನುವ ಸಂದೇಹ ಅವನಿಗೆ ಮೊದಲಿನಿಂದಲೂ ಇತ್ತು. ಆದ ಕಾರಣ ಆಕೆಯನ್ನು ಹುಡುಕಿ ಬಂದಿದ್ದಾನೆ.

47
ಮುಂದೇನು ಎನ್ನುವ ಚಿಂತೆ

ಜಾಹ್ನವಿ ದಿಕ್ಕು ದೆಸೆಯಿಲ್ಲದೇ ಹೊರಕ್ಕೆ ಬಂದು ಮುಂದೇನು ಎನ್ನುವುದು ತಿಳಿಯುತ್ತಿಲ್ಲ. ಇದೇ ವೇಳೆ ವೇಷ ಬದಲಿಸಿಕೊಂಡಿರುವ ಜಯಂತ್​ ಜಾಹ್ನವಿಯನ್ನು ನೋಡಿದ್ದಾನೆ!

57
ಮಾರುವೇಷ

ಜಾಹ್ನವಿಯನ್ನು ನೋಡಿ ಆತನಿಗೆ ಸಹಜವಾಗಿ ಖುಷಿಯಾಗಿರುತ್ತದೆ. ಯಾರು ಕೂಡ ಗುರುತು ಹಿಡಿಯದ ರೀತಿಯಲ್ಲಿ ವೇಷ ಬದಲಿಸಿಕೊಂಡಿರುವ ಜಯಂತ್​ನನ್ನು ಖಂಡಿತವಾಗಿಯೂ ಜಾಹ್ನವಿ ಗುರುತಿಸಲಾರಳು.

67
ಉಲ್ಟಾ ಹೊಡೆದ ವೀಕ್ಷಕರು

ಮಾರುವೇಷದಲ್ಲಿ ಬಂದಿರೋ ಜಯಂತ್​ ಮುಂದಿನ ನಡೆ ಏನು ಎನ್ನುವ ಕುತೂಹಲ ಇದ್ದೇ ಇದೆ. ಇದೇ ವೇಳೆ, ನೆಟ್ಟಿಗರು ಮಾತ್ರ ಜಾಹ್ನವಿ ವಿರುದ್ಧವಾಗಿದ್ದಾರೆ. ಇಂಥ ಹೆಂಡ್ತಿ ನಿನಗೆ ಬೇಡಪ್ಪಾ, ಅವಳು ಸರಿಯಿಲ್ಲ, ಅವಳಿಗೆ ಡಿವೋರ್ಸ್​ ಕೊಡು ಎಂದು ಹೇಳುತ್ತಿದ್ದಾರೆ. ಇಷ್ಟು ದಿನ ಇಂಥ ಸೈಕೋ ಗಂಡನನ್ನು ಕಟ್ಟಿಕೊಂಡಿರೋ ಜಾಹ್ನವಿ ಬಗ್ಗೆ ಕರುಣೆ ತೋರಿಸ್ತಿದ್ದೋರು ಈಗ ಉಲ್ಟಾ ಹೊಡೆದಿದ್ದಾರೆ!

77
ವಿಚಿತ್ರವಾದರೂ ಸತ್ಯ!

ಜಯಂತ್​ ಹೆಂಡತಿಗಾಗಿ ಪರದಾಡುತ್ತಿರುವುದನ್ನು ನೋಡಲಾಗದೇ ವೀಕ್ಷಕರು ಈಗ ಸೈಕೋ ಜಯಂತ್​ ಪರವಾಗಿದ್ದು, ಜಾಹ್ನವಿಯ ವಿರೋಧ ಆಗಿರುವುದು ಮಾತ್ರ ವಿಚಿತ್ರವಾದರೂ ಸತ್ಯ!

Read more Photos on
click me!

Recommended Stories