Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು!

Published : Dec 02, 2025, 09:35 PM IST

'ಬಿಗ್ ಬಾಸ್ ಕನ್ನಡ ಸೀಸನ್ 12' ರಿಂದ ಎಲಿಮಿನೇಟ್ ಆದ ಜಾಹ್ನವಿ, ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಶ್ವಿನಿ ಗೌಡ ಗೆಲ್ಲಬೇಕೆಂಬುದು ತಮ್ಮ ಆಸೆಯಾದರೂ, ಗೆಲ್ಲುವುದೇ ಬೇರೆಯವರು ಎನ್ನುವ ಮೂಲಕ ಅವರ ಹೆಸರು ರಿವೀಲ್​  ಮಾಡಿದ್ದಾರೆ! 

PREV
17
ಬಿಗ್​ಬಾಸ್​ನಿಂದ ಎಲಿಮಿನೇಷನ್​

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ನಿಂದ ಫೈನಲ್​ ಕಂಟೆಸ್ಟೆಂಟ್​ ಎಂದೇ ಅಂದುಕೊಂಡಿದ್ದ ಜಾಹ್ನವಿ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಸ್ಪಂದನಾ ಅವರ ವಿಷಯದಲ್ಲಿ ಜಾಹ್ನವಿ ವಾಹಿನಿ ವಿರುದ್ಧ ಇವರು ಮಾತನಾಡಿದ್ದೇ ಇವರಿಗೆ ಮುಳುವಾಯಿತು ಎಂದು ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.

27
ಕೆಲ ದಿನ ಸೆಲೆಬ್ರಿಟಿ

ಅದೇನೇ ಇದ್ದರೂ ಜಾಹ್ನವಿ ಎಲ್ಲ ಬಿಗ್​ಬಾಸ್​ ಸ್ಪರ್ಧಿಗಳಂತೆ ಕೆಲವು ದಿನಗಳವರೆಗೆ, ವಿವಿಧ ಮಾಧ್ಯಮಗಳಲ್ಲಿ ಸಂದರ್ಶನ ನೀಡಲಿದ್ದಾರೆ. ಆ್ಯಂಕರ್​ ಆಗಿ ಗುರುತಿಸಿಕೊಂಡು ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವ ಜಾಹ್ನವಿ ಅವರು, ಮುಂದಿನ ಬಿಗ್​ಬಾಸ್​ ಸೀಸನ್​ ಬರುವವರೆಗೂ ಬಿಗ್​ಬಾಸ್​ ಮೂಲಕವೇ ಖ್ಯಾತಿ ಗಳಿಸಲಿದ್ದಾರೆ.

37
ಬಿಗ್​ಬಾಸ್​ ವಿನ್ನರ್​

ಇದೀಗ ಅವರು ಟಾಪ್​ 5 ಸ್ಪರ್ಧಿಗಳು ಹಾಗೆನೇ ಬಿಗ್​ಬಾಸ್​ 12ರ ವಿನ್ನರ್​ ಬಗ್ಗೆ ಮಾತನಾಡಿದ್ದಾರೆ. ಆದರೆ ಇವರ ಈ ಮಾತು ಹಲವರಲ್ಲಿ ಅಚ್ಚರಿ ತಂದಿದೆ. ಇದೊಂದು ಯಾರೂ ಊಹಿಸದ ಟ್ವಿಸ್ಟ್​ ಎಂದೇ ಎಲ್ಲರೂ ಆಡಿಕೊಳ್ಳುತ್ತಿದ್ದಾರೆ.

47
ಟಾಪ್​ 5 ಯಾರೂ ಅರ್ಹರಿಲ್ಲ

ಅದಕ್ಕೆ ಕಾರಣವೂ ಇದೆ. ಇದಾಗಲೇ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿರುವ ಸ್ಪರ್ಧಿಗಳು ಗಿಲ್ಲಿ ನಟ (Gilli Nata) ಬಿಗ್​ಬಾಸ್​ ವಿನ್ನರ್​ ಎಂದು ಹೇಳಿದ್ದಾರೆ. ಅದರಂತೆ ಜಾಹ್ನವಿ ಕೂಡ ಟಾಪ್‌ 3ರಲ್ಲಿ ಗಿಲ್ಲಿ ನಟ ಫಿಕ್ಸ್‌ ಎಂದಿದ್ದಾರೆ. ಇದರ ಜೊತೆಗೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಕೂಡ ಬಿಗ್‌ ಬಾಸ್‌ ಫಿನಾಲೆಯಲ್ಲಿ ಇರುತ್ತಾರೆ, ಆದರೆ ಟಾಪ್​ 5 ಆಗುವಂಥ ಸ್ಪರ್ಧಿಗಳು ಯಾರೂ ಇಲ್ಲ ಅನಿಸತ್ತೆ ಎಂದಿದ್ದಾರೆ.

57
ಅಶ್ವಿನಿ ಗೌಡ ನನ್ನ ಫೆವರೆಟ್​

ಆದರೆ ವಿನ್ನರ್​ ವಿಷಯದಲ್ಲಿ ಅವರು ಆಡಿದ ಮಾತುಗಳು ಮಾತ್ರ ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಏಕೆಂದರೆ, ಬಿಗ್​ಬಾಸ್​ನಲ್ಲಿ ಅಶ್ವಿನಿ ಗೌಡ ಅವರ ಬಲಗೈ ಜಾಹ್ನವಿ ಆಗಿದ್ದರು ಎಂದೇ ಹೇಳುವುದು ಉಂಟು. ಅದರಂತೆಯೇ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ನನಗೇನೂ ಅಷ್ಟು ಫೆವರೆಟ್​ ಅಲ್ಲ ಎನ್ನುವ ಸತ್ಯವನ್ನೂ ಜಾಹ್ನವಿ ನುಡಿದಿದ್ದಾರೆ. ಇದರ ಹೊರತಾಗಿಯೂ, ಅಶ್ವಿನಿ ಗೌಡ ಬದಲು ಬಿಗ್​ಬಾಸ್​ ಗೆಲ್ಲುವುದು (Bigg Boss 12 Winner) ಗಿಲ್ಲಿ ನಟನೇ ಆಗುತ್ತಾನೆ ಎಂದಿದ್ದಾರೆ ಜಾಹ್ನವಿ.

67
ಅಶ್ವಿನಿ ಗೆಲ್ಲಬೇಕು, ಆದರೆ...

ಅಶ್ವಿನಿ ಗೌಡ (Bigg Boss Ashwini Gowda) ಅವರು ವಿನ್ನರ್​ ಆಗಬೇಕು ಎನ್ನುವುದು ನನಗೆ ಆಸೆ. ಈವರೆಗೂ ಶ್ರುತಿ ಒಬ್ಬರೇ ಲೇಡಿ ವಿನ್ನರ್​. ಹಾಗೆ ನೋಡಿದ್ರೆ, ಅಶ್ವಿನಿ ಗೌಡ ಅವರು ಅನ್ನಿಸಿದ್ದನ್ನ ಅವರು ನೇರವಾಗಿ ಹೇಳುತ್ತಿದ್ದಾರೆ. ಟಾಸ್ಕ್‌ಗಳನ್ನು ಕೂಡ ಅವರು ತುಂಬಾ ಚೆನ್ನಾಗಿ ಆಡುತ್ತಾರೆ. ಅವರೇ ಗೆಲ್ಲಬೇಕು ಎಂದಿದ್ದಾರೆ. 

77
ಗೆಲ್ಲೋದು ಇವರೇ!

ಗಿಲ್ಲಿ ವಿಷ್ಯ ಹೇಳುವುದಾದರೆ, ಇದು ವ್ಯಕ್ತಿತ್ವದ ಆಟ. ಆದರೆ ಗಿಲ್ಲಿಯಲ್ಲಿ ನಾವು ಕಾಮಿಡಿ ಬಿಟ್ಟರೆ ಬೇರೇನೂ ನಾನು ನೋಡಿಲ್ಲ. ಅವನಲ್ಲಿ ಬೇರೆ ಎಮೋಷನ್ಸ್‌ ಇಲ್ಲ. ಆದರೂ ಬಿಗ್‌ ಬಾಸ್‌ ಗೆಲ್ಲೋದು ಅವನೇ ಎನ್ನಿಸುತ್ತಿದೆ ಎಂದಿದ್ದಾರೆ ಜಾಹ್ನವಿ!

Read more Photos on
click me!

Recommended Stories