Karna Serial ಯಾರೂ ಊಹಿಸದ ತಿರುವು! ಮ್ಯಾರೇಜ್​ ಸರ್ಟಿಫಿಕೇಟ್​ಗೆ ಕರ್ಣ- ನಿಧಿ ಸಹಿ: ರಮೇಶ್​ ಕಕ್ಕಾಬಿಕ್ಕಿ

Published : Feb 06, 2026, 10:01 PM IST

ಆಸ್ತಿಗಾಗಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಹೊರಟ ರಮೇಶ್‌ನ ಕುತಂತ್ರಕ್ಕೆ ಕರ್ಣ ತಿರುಗೇಟು ನೀಡಿದ್ದಾನೆ. ನಿತ್ಯಾಳಿಂದ ಸಹಿ ಹಾಕಿಸಿ ರಮೇಶ್‌ಗೆ ಶಾಕ್ ಕೊಟ್ಟಿದ್ದು, ಈ ಅನಿರೀಕ್ಷಿತ ನಡೆಯಿಂದ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಆದರೆ ಆಗಿದ್ದೇನು?

PREV
16
ಭಾರಿ ಟ್ವಿಸ್ಟ್​

ಕರ್ಣ ಸೀರಿಯಲ್​ (Karna Serial) ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಯಾರೂ ಊಹಿಸದ ತಿರುವು ಇದಕ್ಕೆ ಸಿಕ್ಕಿದೆ. ಕರ್ಣ ತನ್ನ ಇನ್ನೊಂದು ಮುಖವನ್ನು ರಮೇಶ್​ಗೆ ತೋರಿಸುತ್ತಾ ಆತನನ್ನು ಆಟವಾಡಿಸುತ್ತಿದ್ದರೆ, ಕುತಂತ್ರಿ ರಮೇಶ್​ ಕೂಡ ಇನ್ನೊಂದು ಪ್ಲ್ಯಾನ್​ ಮಾಡುತ್ತಲೇ ಇದ್ದಾನೆ.

26
ಅಮ್ಮನ ಕಾಲಿಗೆ

ಇದಾಗಲೇ ಪೂಜೆಯ ನೆಪದಲ್ಲಿ ರಮೇಶ್​ನನ್ನು ಉಪವಾಸ ಇಟ್ಟು, ತಲೆ ಸುತ್ತುವಂತೆ ಮಾಡಿ, ಅಮ್ಮನ ಕಾಲಿಗೆ ಬೀಳುವಂತೆ ಮಾಡಿದ್ದಾನೆ ಕರ್ಣ. ಇದನ್ನೆಲ್ಲಾ ನೋಡಿ ರಮೇಶ್​ಗೆ ಮೈ ಉರಿದು ಹೋಗಿದೆ.

36
ಲೈಫ್​ ಹಾಳು

ಹೇಗಾದರೂ ಮಾಡಿ ಕರ್ಣ, ನಿಧಿ ಮತ್ತು ನಿತ್ಯಾರ ಲೈಫ್​ ಹಾಳು ಮಾಡಲೇಬೇಕು ಎನ್ನುವ ಪಣ ತೊಟ್ಟಿದ್ದಾನೆ ಆತ. ಹೇಗಿದ್ದರೂ ಅವನಿಗೆ ಕರ್ಣ ಮತ್ತು ನಿಧಿ ಮದುವೆಯಾಗಿಲ್ಲ ಎನ್ನುವ ಸತ್ಯ ಗೊತ್ತಿರುವ ಕಾರಣದಿಂದ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾನೆ.

46
ಮ್ಯಾರೇಜ್​ ಸರ್ಟಿಫಿಕೇಟ್​ ಕುತಂತ್ರ

ಇದೀಗ, ಅವರಿಬ್ಬರ ಮ್ಯಾರೇಜ್​ ಸರ್ಟಿಫಿಕೇಟ್​ ಮಾಡಿಸಿಬಿಟ್ಟರೆ ಅವರು ಏನೂ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ, ಆಸ್ತಿಯನ್ನು ಇಬ್ಬರ ಹೆಸರಿಗೆ ಮಾಡಬೇಕಿದೆ. ಅದಕ್ಕಾಗಿ ಮ್ಯಾರೇಜ್​ ಸರ್ಟಿಫಿಕೇಟ್​ ಬೇಕು ಎನ್ನುವ ಕುತಂತ್ರ ಬುದ್ಧಿಯನ್ನು ಉಪಯೋಗಿಸಿದ್ದಾನೆ ರಮೇಶ್​.

56
ಇಬ್ಬರ ಸಹಿ ಬಿತ್ತು

ಕರ್ಣನೂ ಅದಕ್ಕೆ ಒಪ್ಪಿದ್ದಾನೆ. ಮ್ಯಾರೇಜ್​ ಸರ್ಟಿಫಿಕೇಟ್​ ಸಿದ್ಧವಾಗಿದೆ. ಇಬ್ಬರ ಸಹಿಯೂ ಬಿದ್ದಾಗಿದೆ. ಅಬ್ಬಬ್ಬಾ ಹಾಗಿದ್ದರೆ ಅವರಿಬ್ಬರ ಮದುವೆ ಆದಂತೆನಾ ಎಂದು ಪ್ರಶ್ನಿಸಿದರೆ, ಇಲ್ಲ... ಇಲ್ಲ... ತಡೆದುಕೊಳ್ಳಿ. ಅಲ್ಲೇ ಇರೋದು ಟ್ವಿಸ್ಟ್​.

66
ಇಲ್ಲೇ ಇರೋದು ಟ್ವಿಸ್ಟ್​!

ಕರ್ಣ ಮೊದಲೇ ನಿತ್ಯಾ ಬಳಿ ಈ ವಿಷಯವನ್ನು ಹೇಳಿ ನಕಲಿ ಸಹಿ ಹಾಕುವಂತೆ ಹೇಳಿದ್ದ. ಇದರಿಂದ ನಿತ್ಯಾ ಕೂಡ ಆ ಪ್ರಮಾಣ ಪತ್ರದ ಮೇಲೆ ನಕಲಿ ಸಹಿ ಹಾಕಿದ್ದಾಳೆ. ಇಷ್ಟು ಈಸಿಯಾಗಿ ಸಹಿ ಹಾಕಿದ್ದನ್ನು ನೋಡಿ ರಮೇಶ್​ ಕೂಡ ಕಕ್ಕಾಬಿಕ್ಕಿಯಾಗಿದ್ದಾನೆ. ಎಲ್ಲೋ ಮಿಸ್​ ಹೊಡೀತಾ ಇದೆ ಎನ್ನಿಸುತ್ತಾ ಇದ್ದರೂ ಏನೂ ಅಂತ ತಿಳಿಯದೇ ಗೋಜಿಗೆ ಸಿಲುಕಿದ್ದಾನೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories