ಕರ್ಣ ಧಾರಾವಾಹಿಯಲ್ಲಿ ಇತ್ತೀಚೆಗೆ ಕರ್ಣ ರೋಗಿಯೋರ್ವರಿಗೆ ಮೆಡಿಸಿನ್ ಚೀಟಿ ಬರೆದುಕೊಟ್ಟಿದ್ದು, ಆ ಬಳಿಕ ನಿಧಿ, ನಿತ್ಯಾ ನಡುವೆ ಚರ್ಚೆ ಆದ ವಿಷಯದ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಹೇಗೆ ಸಾಧ್ಯ ಎಂಬ ಚರ್ಚೆ ಆಗುತ್ತಿದೆ. ವೀಕ್ಷಕರ ಪ್ರಕಾರ ನಿರ್ದೇಶಕರು ಮಾಡಿದ ತಪ್ಪೇನು?
ಕರ್ಣ ರೋಗಿಯೋರ್ವರಿಗೆ ಪ್ರಿಸ್ಕಿಪ್ಶನ್ ಬರೆದುಕೊಡ್ತಾರೆ. ಆದರೆ ಆ ಹಳೆಯಲ್ಲಿ ನಿಧಿ ತನ್ನ ಹಾಗೂ ಕರ್ಣನ ಹೆಸರು ಬರೆದಿರುತ್ತಾಳೆ. ಈ ಪ್ರಿಸ್ಕ್ರಿಪ್ಶನ್ ಬೇರೆಯವರಿಗೆ ಸಿಕ್ಕಿದರೆ ಸಮಸ್ಯೆ ಆಗುತ್ತದೆ ಎಂದು ಅವಳು ಆ ಚೀಟಿಯನ್ನು ಹುಡುಕಿ ಹೊರಟಿದ್ದಾಳೆ.
27
ನಿತ್ಯಾಗೆ ಪ್ರಿಸ್ಕಿಪ್ಶನ್ ಕೊಡ್ತಾರೆ
ಆ ರೋಗಿಗೆ ನಿಧಿ ಚೀಟಿ ಕೊಡಿ ಎಂದಿದ್ದಾಳೆ. ಆ ರೋಗಿ ಮಾತ್ರ ಕೊಡದೆ, ಆಗಲ್ಲ, ಟೈಮ್ ಆಯ್ತು ಎಂದು ನೆಪ ಹೇಳಿದ್ದಾರೆ. ಆದರೆ ನಿಧಿ ಒತ್ತಾಯ ಮಾಡುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ನಿತ್ಯಾ ಎಂಟ್ರಿ ಕೂಡ ಆಗುವುದು. ನಿತ್ಯಾ ಏನು ಗಲಾಟೆ ಎಂದು ಕೇಳಿದಾಗ, ಆ ರೋಗಿ ಪ್ರಿಸ್ಕಿಪ್ಶನ್ ಕೊಡುತ್ತಾಳೆ. ಆಗ ಆ ರೋಗಿಯು ಏನೂ ಮಾತನಾಡೋದಿಲ್ಲ.
37
ನಿಧಿ MBBS ಮಾಡ್ತಿದ್ರೂ ಬೆಲೆ ಇಲ್ಲ
ಕರ್ಣನ ಕ್ಯಾಬಿನ್ ಒಳಗಡೆ ಇದ್ದ ನಿಧಿ, ನಾನು ಇಲ್ಲೇ ಎಂಬಿಬಿಎಸ್ ಮಾಡ್ತಿದೀನಿ ಎಂದು ಹೇಳಿದರೂ ಕೂಡ ಪ್ರಿಸ್ಕ್ರಿಪ್ಶನ್ ಕೊಡೋದಿಲ್ಲ. ಆದರೆ ನಿತ್ಯಾ ಕೇಳಿದಾಗ ಮಾತ್ರ ಪ್ರಿಸ್ಕ್ರಿಪ್ಶನ್ ಕೊಡ್ತಾರೆ. ಇದು ಹೇಗೆ ಸಾಧ್ಯ? ನಿತ್ಯಾ ಇಂಜಿನಿಯರ್ ಓದಬೇಕು ಎಂದುಕೊಂಡವಳಿಗೆ ಹಣದ ಸಮಸ್ಯೆ ಇದ್ದಿದ್ದರಿಂದ ಅವಳು ಓದಿರಲಿಲ್ಲ. ಈಗ ಕರ್ಣ ಅವಳನ್ನು ಆಸ್ಪತ್ರೆಯ ಬೋರ್ಡ್ ಆಫ್ ಮೆಂಬರ್ ಆಗಿ ನೇಮಕ ಮಾಡಿದ್ದಾನೆ.
ಆಸ್ಪತ್ರೆ, ಮೆಡಿಕಲ್ ಬಗ್ಗೆ ಏನೂ ತಿಳಿಯದ ನಿತ್ಯಾಳನ್ನು ಹೇಗೆ ಬೋರ್ಡ್ ಆಫ್ ಮೆಂಬರ್ ಮಾಡಿಕೊಂಡರು? ನಿತ್ಯಾಗೆ ಮೆಡಿಕಲ್ ಪ್ರಿಸ್ಕ್ರಿಪ್ಶನ್ ಓದೋಕೆ ಬರುತ್ತದಾ? ಮೆಡಿಕಲ್‌ನವರಿಗೆ ಬಿಟ್ಟು ಉಳಿದವರಿಗೆ ಡಾಕ್ಟರ್ಸ್ ರೈಟಿಂಗ್ ಏನು ಎನ್ನೋದು ಅರ್ಥವೇ ಆಗೋದಿಲ್ಲ. ಹೀಗಾಗಿ ನಿತ್ಯಾಗೆ ಹೇಗೆ ಅರ್ಥ ಆಗುತ್ತದೆ ಎಂಬ ಪ್ರಶ್ನೆ ಎದ್ದಿದೆ. ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
57
ವೀಕ್ಷಕರ ಪ್ರಶ್ನೆ ಏನು?
ನಿತ್ಯಾ ಒಂದೇ ರಾತ್ರಿ ಡಾಕ್ಟರ್ ಆದಳಾ? ಡಾಕ್ಟರ್ ಓದುತ್ತಿರುವ ನಿಧಿ ಕೇಳಿದಾಗ ಚೀಟಿ ಕೊಡದವರು, ನಿತ್ಯಾ ಕೇಳಿದಕೂಡಲೇ ಹೇಗೆ ಕೊಡ್ತಾರೆ? ಮೆಡಿಕಲ್ ಬಗ್ಗೆ ಓದುತ್ತಿರುವ ನಿಧಿ ಕೇಳಿದಾಗ ಕೊಡದವರು, ಮೆಡಿಕಲ್ ಬಗ್ಗೆ ಏನೂ ಗೊತ್ತಿಲ್ಲದವರು ಕೇಳಿದ್ರೆ ಹೇಗೆ ಕೊಡ್ತಾರೆ? ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.
67
ನಿತ್ಯಾ ನಾಳೆ ಆಪರೇಶನ್ ಮಾಡ್ತಾಳಾ?
ಇದನ್ನೆಲ್ಲ ನೋಡಿದರೆ ನಾಳೆ ನಿತ್ಯಾ ಆಪರೇಶನ್, ಸರ್ಜರಿ ಎಂದು ಮಾಡಿದರೂ ಕೂಡ ಆಶ್ಚರ್ಯ ಇಲ್ಲ. ಆಸ್ಪತ್ರೆ ದೃಶ್ಯದೊಳಗಡೆ ನಿತ್ಯಾ ಪಾತ್ರವನ್ನು ತುರುಕಿದ್ದೀರಿ. ನಿತ್ಯಾ ಪಾತ್ರ ಇಷ್ಟು ಎಂದು ಹೀಗೆ ಮಾಡಿದ್ದೀರಾ? ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.
77
ಮೆಡಿಕಲ್ ಶಾಪ್‌ನವರು MBBS ಮಾಡ್ತಾರಾ?
ಈ ಕಾಮೆಂಟ್‌ಗಳಿಗೆ ಇನ್ನು ಕೆಲವರು ಕಾಮೆಂಟ್ ಮಾಡಿದ್ದು, “ಮೆಡಿಕಲ್ ಶಾಪ್ ಇಟ್ಟುಕೊಂಡವರು ಮೆಡಿಕಲ್ ಓದುತ್ತಾರಾ? ಸಾಧ್ಯವೇ ಇಲ್ಲ ಎಂದು ನಿತ್ಯಾ ಪರ ಬ್ಯಾಟಿಂಗ್ ಬೀಸಿದ್ದಾರೆ. ಹುಣ್ಣಿಮೆ ಆದ್ರೆ ಕರ್ಣನ ಮದುವೆ ಆಗುತ್ತದೆ ಅಂತ ಹೇಳಿದ್ರಿ, ಎಲ್ಲಿ ಆಯ್ತು? ನಿಧಿಗೆ ಕಂಕಣ ಬಾಗ್ಯ ಇದೆ ಅಂದ್ರಿ ಎಲ್ಲಿ ಮದುವೆ ಆಯ್ತು? ಬರಿ ದೇವರ ಹೆಸರಲ್ಲಿ ಸುಳ್ಳು ಹೇಳೋದೇ ಆಯ್ತು, ಬೇಗ ಕರ್ಣ ನಿಧಿ ಮದುವೆ ಮಾಡಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.