Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾಡಿದ ನಟಿ

Published : Apr 11, 2026, 01:03 PM IST

'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ (ರಿಯಾ) ಅವರು ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆಯೂ ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಪೋಷಕರ ಒತ್ತಡವಿಲ್ಲದ ಬೆಂಬಲ, ಮೊದಲ ದಿನದಿಂದಲೇ  ತಯಾರಿ, ಸಮಯ ನಿರ್ವಹಣೆಯೇ  ಯಶಸ್ಸಿಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

PREV
16
ಮಾದರಿ ರಿಯಾ

ಓದುವ ಮಕ್ಕಳು ಹೇಗಾದ್ರೂ ಓದುತ್ತಾರೆ. ಅವರಿಗೆ ಓದಿನ ಜೊತೆ ವಿವಿಧ ಪಠ್ಯೇತರ ಚಟುವಟಿಕೆ ಅಥವಾ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ದುಡಿಯುವುದು ಯಾವುದೂ ಅಡ್ಡಿ ಬರುವುದೇ ಇಲ್ಲ. ಆದರೆ ಎಷ್ಟೋ ಮನೆಗಳಲ್ಲಿ 10ನೇ ಕ್ಲಾಸ್​, 12ನೇ ಕ್ಲಾಸ್​ ಆರಂಭವಾಗುತ್ತಿದ್ದಂತೆಯೇ ಪಾಲಕರು ಮಕ್ಕಳ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ಕತ್ತರಿ ಹಾಕಿ, ಓದು ಓದು ಎಂದು ಮಕ್ಕಳಿಗೆ ಎಷ್ಟೋ ಬಾರಿ ಮಾನಸಿಕ ಚಿತ್ರಹಿಂಸೆಯನ್ನೂ ಕೊಡುವುದು ಇದೆ. ಆಟ ಆಡುವುದಕ್ಕೂ ಬಿಡದೇ, ಸಂಗೀತ, ನೃತ್ಯದಲ್ಲಿ ಆಸಕ್ತಿ ಇದ್ದರೂ ಅಲ್ಲಿಯೂ ಹೋಗಲು ಬಿಡದೇ ಮಕ್ಕಳನ್ನು ಉಸಿರುಗಟ್ಟಿಸುವ ಪಾಲಕರು ಹಲವರು ಇದ್ದಾರೆ. ಇವರಿಗೆಲ್ಲಾ ಮಾದರಿ ಕರ್ಣ ಸೀರಿಯಲ್​ ರಿಯಾ.

26
ಫಲಿತಾಂಶ ಬಂದಾಗ ಆಗೋದೇನು?

  ಪ್ರತಿಬಾರಿಯ ಫಲಿತಾಂಶ ಬಂದಾಗಲೂ ಅತ್ಯಧಿಕ ಅಂಕ ಗಳಿಸುವ ಬಹುಪಾಲು ಮಂದಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿರುವ, ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕಿಲೋಮೀಟರ್​ ದೂರ ನಡೆದು ಶಾಲೆಗೆ ಹೋಗುವ, ಮನೆಗೆಲಸ ಮಾಡುವ, ಕೂಲಿ ಮಾಡಿಕೊಂಡು ದುಡಿಯುವ, ಕಡು ಬಡತನದಲ್ಲಿ ಓದಿರುವ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜಿಯಾಗಿರುವ ಮಕ್ಕಳೇ ಎನ್ನುವುದು ಮಾತ್ರ ಅಷ್ಟೇ ದಿಟ.

36
ಇಬ್ಬರು ಯುವ ನಟಿಯರ ಸಾಧನೆ

ಇದೀಗ ಪಿಯುಸಿಯಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿರುವ ಕರ್ಣ ಸೀರಿಯಲ್​ (Karna Serial) ರಿಯಾ ಅರ್ಥಾತ್​ ಅಂಕಿತಾ ಜಯರಾಮ್​ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಕಳೆದ ವರ್ಷ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ, ತನ್ವಿ ಪಾತ್ರ ಮಾಡುತ್ತಿದ್ದ ಅಮೃತಾ ಗೌಡ ಅವರು ಪಿಯುಸಿ ಕಾಮರ್ಸ್​ನಲ್ಲಿ ಶೇಕಡಾ 90ರಷ್ಟು ಗಳಿಸಿ ಹೈಲೈಟ್ ಆಗಿದ್ದರು. ಅಷ್ಟಕ್ಕೂ ಇವರಿಬ್ಬರೂ ಸೀರಿಯಲ್​ನ ಬಿಜಿ ಷೆಡ್ಯೂಲ್​ ನಡುವೆಯೇ ಪರೀಕ್ಷೆಗೆ ತಯಾರಿ ನಡೆಸಿ ಇಷ್ಟು ಅಂಕ ಗಳಿಸಿದ್ದಾರೆ.

46
ಅಪ್ಪ-ಅಮ್ಮ ಒತ್ತಡ ಹಾಕ್ತಿರಲಿಲ್ಲ

ಇದೀಗ ಕರ್ಣ ಸೀರಿಯಲ್​​ ರಿಯಾ ಅರ್ಥಾತ್​ Ankita Jayaram ಅವರು ತಾವು ಸೀರಿಯಲ್ ಮತ್ತು ಪರೀಕ್ಷೆ ಎರಡನ್ನೂ ಹೇಗೆ ನಿಭಾಯಿಸಿದ್ವಿ ಎನ್ನುವ ಬಗ್ಗೆ statenewsind ಚಾನೆಲ್​ ಜೊತೆ ಮಾತನಾಡಿದ್ದಾರೆ. ಅವರು ಹೇಳಿದ ಮೊಟ್ಟ ಮೊದಲ ವಿಷ್ಯ ಎಂದರೆ ಓದು ಓದು ಅಂತ ನನ್ನ ಅಪ್ಪ-ಅಮ್ಮ ಯಾವತ್ತೂ ಪ್ರೆಷರ್​ ಹಾಕ್ತಾ ಇರಲಿಲ್ಲ. ಎಷ್ಟು ಆಗುತ್ತದೆಯೋ ಓದು, ತುಂಬಾ ಟೆನ್ಷನ್​ ಮಾಡಿಕೊಳ್ಳಬೇಡ. ಕೂಲ್​ ಆಗಿರು ಅಂತನೇ ಹೇಳ್ತಿದ್ರು. ಅದೇ ನನಗೆ ದೊಡ್ಡ ಸಪೋರ್ಟ್​ ಆಯಿತು ಎಂದಿದ್ದಾರೆ.

56
ಮೊದಲ ದಿನದಿಂದಲೇ ತಯಾರಿ

ಮೊದಲ ದಿನದಿಂದಲೇ ಓದಿದರೆ ಒಳ್ಳೆಯದು. ಹಾಗೆಂದು ಬೇರೆಲ್ಲಾ ಆ್ಯಕ್ಟಿವಿಟೀಸ್ ಬಿಟ್ಟು ಬರೀ ಓದೋದನ್ನೆ ಮಾಡಿದ್ರೆ ಆಗಲ್ಲ. ಪಠ್ಯೇತರ ಚಟುವಟಿಕೆಗಳೂ ಇರಬೇಕು. ಎಲ್ಲರೂ ಟೈಂ ಮ್ಯಾನೇಜ್ ಮಾಡಿ ಓದ್ತಾ ಇದ್ದರು. ಆದರೆ ನನ್ನದು ಬಿಜಿ ಷೆಡ್ಯೂಲ್​ ಇದ್ದುದರಿಂದ ಸಿಕ್ಕ ಟೈಮ್​ನಲ್ಲಿ ಓದ್ತಾ ಇದ್ದೆ.. ಮೊದಲ ದಿನದಿಂದಲೂ ಓದಿನ ಕಡೆ ಗಮನ ಕೊಡ್ತಾ ಇದ್ದುದರಿಂದ ಇಷ್ಟು ಅಂಕ ಬಂತು ಎಂದಿದ್ದಾರೆ ನಟಿ.

66
ಶೂಟಿಂಗ್ ಇದ್ದಾಗ ಸ್ವಲ್ಪ ಕಷ್ಟವಾಯ್ತು

ಫೆಬ್ರುವರಿ 28ಕ್ಕೆ ಎಕ್ಸಾಮ್​ ಶುರುವಾಗಿತ್ತು. ಆಗಲೇ ಕರ್ಣ ಸೀರಿಯಲ್​ ಶೂಟಿಂಗ್ ಕೂಡ ಇತ್ತು. ಮೊದಲೇ ಪರೀಕ್ಷೆಗೆ ಪ್ರಿಪೇರ್​ ಆಗಿದ್ದೆ. ಆದರೆ ಪರೀಕ್ಷೆ ಶುರುವಾದ ಮೇಲೆ ಸೀರಿಯಲ್​ ಶೂಟಿಂಗೂ ಇದ್ದುದರಿಂದ ಟೈಮ್​ ಅಡ್ಜಸ್ಟ್​ ಮಾಡಿಕೊಳ್ಳೋದು ಸ್ವಲ್ಪ ಕಷ್ಟವಾಗಿತ್ತು. ಆದರೆ ಟೈಂ ಸಿಕ್ಕಾಗೆಲ್ಲಾ, ಬಿಡುವಿನ ವೇಳೆಯಲ್ಲಿ ಓದುತ್ತಿದ್ದೆ ಎಂದಿದ್ದಾರೆ ಅಂಕಿತಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories