ಅಂದು ಪ್ರೀತಿ ಹೆಚ್ಚಾಗಿತ್ತು, ಬ್ಯಾಲೆನ್ಸ್ ಕಡಿಮೆ ಇತ್ತು: ನಟ ಸುದರ್ಶನ್‌ ಮನೆಗೆ Bhagyalakshmi ಬಂದು 10 ವರ್ಷ!

Published : Apr 11, 2026, 10:11 AM IST

Actor Sudarshan Rangaprasad: ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್‌ ರಂಗಪ್ರಸಾದ್‌ ಹಾಗೂ ನಟಿ ಸಂಗೀತಾ ಭಟ್‌ ಜೋಡಿಗೆ ಇಂದು ಖುಷಿಯ ವಿಷಯ. ಇವರಿಬ್ಬರೂ 10 ವರ್ಷ ಪೂರೈಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷ ಫೋಟೋಶೂಟ್‌ ಹಂಚಿಕೊಂಡಿದ್ದಾರೆ. 

PREV
110
ಬಿರುಗಾಳಿಯಲ್ಲೂ ನನ್ನ ಪಾಲಿನ ಶಾಂತಿ

“ನಮ್ಮ 13 ವರ್ಷಗಳ ಸಾಂಗತ್ಯ... 3 ವರ್ಷಗಳ ಪ್ರೀತಿ, 10 ವರ್ಷಗಳ ಸುಂದರ ದಾಂಪತ್ಯ ನನ್ನ ಪ್ರೀತಿಯ ಸುದರ್ಶನ್‌ ರಂಗಪ್ರಸಾದ್. ನೀವು ಕೇವಲ ಪತಿಯಷ್ಟೇ ಅಲ್ಲ, ನನಗೆ ಆಸರೆಯಾದ ಮನೆ, ನನ್ನ ಶಕ್ತಿ ಮತ್ತು ಪ್ರತಿಯೊಂದು ಸಂಕಷ್ಟದ ಬಿರುಗಾಳಿಯಲ್ಲೂ ನನ್ನ ಪಾಲಿನ ಶಾಂತಿ” ಎಂದು ಸಂಗೀತಾ ಭಟ್‌ ಬರೆದುಕೊಂಡಿದ್ದಾರೆ.

210
ನನ್ನ ಕನಸುಗಳನ್ನು ನಿಮ್ಮದೇ

ನೀವು ನನ್ನನ್ನು ಪದಗಳಿಲ್ಲದೆ ಅರ್ಥಮಾಡಿಕೊಳ್ಳುತ್ತೀರಿ, ನನ್ನ ಕನಸುಗಳನ್ನು ನಿಮ್ಮದೇ ಎಂಬಂತೆ ಬೆಂಬಲಿಸುತ್ತೀರಿ ಮತ್ತು ನಮ್ಮ ಕನಸುಗಳನ್ನು ಅಷ್ಟೇ ದೃಢವಾಗಿ ಹೊರತೀರಿ ಎಂದಿದ್ದಾರೆ.

310
ಅದೇ ತಾಳ್ಮೆ, ಪ್ರೀತಿ

10 ವರ್ಷಗಳ ದಾಂಪತ್ಯದ ನಂತರವೂ, ನೀವು ಪ್ರತಿದಿನ ತಾಳ್ಮೆ, ಪ್ರೀತಿ ಮತ್ತು ‘ನಮ್ಮನ್ನು’ ಆಯ್ಕೆ ಮಾಡಿಕೊಳ್ಳುತ್ತೀರಿ. ಇಂದು ನಾನೇನಾಗಿದ್ದೇನೋ, ಅದೆಲ್ಲವೂ ನಿಮ್ಮಿಂದಾಗಿ ಹೆಚ್ಚು ಸುರಕ್ಷಿತವಾಗಿದೆ ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾರೆ ಸಂಗೀತಾ ಭಟ್.‌

410
ನನ್ನ ಬಳಿ ಅಷ್ಟೊಂದಿಲ್ಲ.

ಸದ್ಯಕ್ಕೆ ನನ್ನ ಬಳಿ ನೀಡಲು ಅಷ್ಟೊಂದು ಏನೂ ಇಲ್ಲದಿರಬಹುದು, ಆದರೆ ಪ್ರತಿದಿನದ ಸಣ್ಣಪುಟ್ಟ ಮತ್ತು ಈ ಜಗತ್ತಿಗೆ ಕಾಣಿಸದ ಅದೃಶ್ಯ ಕ್ಷಣಗಳಲ್ಲಿ ಹಾಗೂ ನಾವು ಜೊತೆಯಾಗಿ ಕಟ್ಟುತ್ತಿರುವ ಈ ಸುಂದರ ಬದುಕಿನಲ್ಲಿ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಹೇಳಿದ್ದಾರೆ.

510
10ನೇ ವರ್ಷದ ವಿವಾಹ ವಾರ್ಷಿಕೋತ್ಸವ

ನನ್ನ ಆತ್ಮೀಯ ಪತಿಗೆ 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಇಂತಹ ಇನ್ನೂ ಅನೇಕ ಸುಂದರ ವರ್ಷಗಳು ನಮ್ಮದಾಗಲಿ ಎಂದು ಸಂಗೀತಾ ಹೇಳಿದ್ದಾರೆ.

610
ಅಂದು ಹೇಳಿದ ಡೈಲಾಗ್...

ಸುದರ್ಶನ್‌ ರಂಗಪ್ರಸಾದ್‌ ಕೂಡ ಪೋಸ್ಟ್‌ ಹಂಚಿಕೊಂಡಿದ್ದು, “ನಾವು ಇಷ್ಟು ದೂರ ಬಂದಿದ್ದೇವೆ ಎನ್ನುವುದನ್ನು ನಂಬಲಾಗುತ್ತಿಲ್ಲ. ಮದುವೆ ಅನ್ನೋದು ಪ್ರತಿಯೊಬ್ಬ ಹೆಣ್ಣಿಗೂ ದೊಡ್ಡ ನಿರ್ಧಾರ. ನನಗೆ ನೆನಪಿದೆ, ನಾನು ನಿನ್ನನ್ನು ಮದುವೆಯಾಗಬೇಕು ಅಂದುಕೊಂಡಾಗ ನಿನಗೆ ನಾನು, “ಏನು ಮಾಡುವುದು ಡಾರ್ಲಿಂಗ್... ಪ್ರೀತಿ ಅತೀ ಹೆಚ್ಚಾಗಿತ್ತು, ಬ್ಯಾಂಕ್ ಬ್ಯಾಲೆನ್ಸ್ ಅತೀ ಕಡಿಮೆ ಇತ್ತು... ಕೆರಿಯರ್ ಕೆಳಗಿತ್ತು, ಸ್ಟ್ರೆಸ್ ಜಾಸ್ತಿಯಿತ್ತು... ಸಾರಿ, ಈಗಲೇ ಬೇಡ... ನನಗೆ ದಾರಿ ತೋಚುತ್ತಿಲ್ಲ!” ಎಂದು ಹೇಳಿದ್ದೆ. ಆಗ ನೀನು “ಹೇಳಿದ್ದು ಇಷ್ಟೇ, “ಬಾ ಇಬ್ಬರೂ ಒಟ್ಟಿಗೇ ದಾರಿ ತಪ್ಪೋಣ, ಒಟ್ಟಿಗೇ ಕಷ್ಟಪಡೋಣ ಮತ್ತು ಒಬ್ಬರನ್ನೊಬ್ಬರು ಒಟ್ಟಿಗೇ ಹುಡುಕೋಣ!” ಎಂದು ಹೇಳಿದ್ದೆ. ಏನ್ ಡೈಲಾಗ್ ಗುರು ಇದು!” ಎಂದು ಹೇಳಿದ್ದಾರೆ.

710
ಸ್ಪೇಸ್‌ ಬೇಕು..

ನೀನು ಯಾವಾಗಲೂ ‘ನಮ್ಮನ್ನು’ ಮತ್ತು ಜೀವನವನ್ನು ಜೊತೆಯಾಗಿ ಎದುರಿಸುವುದನ್ನೇ ಮೊದಲ ಸ್ಥಾನದಲ್ಲಿಟ್ಟೆ. ನೀನು ಯಾವಾಗಲೂ ನಿನಗೆ ನಿನ್ನದೇ ಆದ ‘ಸ್ಪೇಸ್’ ಬೇಕು ಅಂತ ಹೇಳ್ತಿರ್ತೀಯಾ, ಆದರೆ ಆ ಸ್ಪೇಸ್‌ನಲ್ಲಿ ನಾನೂ ಇರಬೇಕು ಅಂತ ಬಯಸ್ತೀಯಾ!! (ನನಗಿದು ಪೂರ್ತಿ ಅರ್ಥವಾಗದಿದ್ದರೂ... ಅರ್ಥವಾಗುತ್ತೆ!) ಎಂದಿದ್ದಾರೆ.

810
ಕಷ್ಟ ಇತ್ತು..ಸರಿ ಮಾಡಿಕೊಂಡೆವು

ಎಲ್ಲದಕ್ಕೂ ಧನ್ಯವಾದಗಳು... ಈ ಪಯಣ ಕೇವಲ ಸುಲಭವಾಗಿರಲಿಲ್ಲ ಎಂದು ನನಗೆ ಗೊತ್ತು. ಕಷ್ಟದ ಸಮಯಗಳಿದ್ದವು, ಅನಿರೀಕ್ಷಿತ ಸವಾಲುಗಳಿದ್ದವು... ಎಲ್ಲವೂ ಮುಗಿದೇ ಹೋಯಿತು, ಇನ್ಯಾವುದೂ ಸರಿಯಾಗದು ಎಂದುಕೊಂಡ ಕ್ಷಣಗಳಿದ್ದವು... ಆದರೆ ಪ್ರತಿ ಬಾರಿಯೂ ನಾವು ಅದನ್ನು ಸರಿಪಡಿಸಿದೆವು!

ನಮ್ಮ 10 ವರ್ಷಗಳ ‘ಕಿನ್ಸುಗಿ’ (Kintsugi) ಸಂಭ್ರಮಕ್ಕೆ ಚಿಯರ್ಸ್! ಎಂದು ಸುದರ್ಶನ್‌ ರಂಗಪ್ರಸಾದ್‌ ಹೇಳಿದ್ದಾರೆ.

910
ತಾಂಡವ್‌ ಪಾತ್ರ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುದರ್ಶನ್‌ ರಂಗಪ್ರಸಾದ್‌ ಅವರು ತಾಂಡವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

1010
ಸಂಗೀತಾ ಭಟ್‌ ಖ್ಯಾತ ನಟಿ

ಸಂಗೀತಾ ಭಟ್‌ ಕೂಡ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಿದ್ದಾರೆ, ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories