'ಕರ್ಣ' ಸೀರಿಯಲ್‌ನಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದ ವಿಐಪಿ ಪುತ್ರನಿಗೆ ಪೊಲೀಸ್ ಅಧಿಕಾರಿಯೊಬ್ಬರು ಖಡಕ್ ಉತ್ತರ ನೀಡಿದ್ದು, ನಿಜ ಜೀವನಕ್ಕೆ ಹೋಲಿಸುತ್ತಿರುವ ನೆಟ್ಟಿಗರು, ರಾಜಕಾರಣಿಗಳ ಮಕ್ಕಳ ಪುಂಡಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಬೇಕು ಎನ್ನುತ್ತಿದ್ದಾರೆ
ಸೀರಿಯಲ್ಗಳನ್ನು ರಿಯಲ್ ಲೈಫ್ಗೆ ಹೋಲಿಸುವ ಹಲವಾರು ಮಂದಿ ಇದ್ದಾರೆ. ಬಹುತೇಕ ಸೀರಿಯಲ್ಗಳಲ್ಲಿ, ಭಾಷೆ ಯಾವುದಾದರೇನು, ಅದು ಇರುವುದು ಮನರಂಜನೆಗಾಗಿ ಮಾತ್ರ. ಅದರಲ್ಲಿ ಇರುವ ಹಲವು ಅಂಶಗಳು ರಿಯಲ್ ಲೈಫ್ಗೆ ದೂರವಾಗಿರುತ್ತವೆ, ಅಲ್ಲಿ ವೀಕ್ಷಕರನ್ನು ರಂಜಿಸಲು ಏನು ಬೇಕಾದರೂ ಸೃಷ್ಟಿ ಮಾಡುವುದು ಇದ್ದೇ ಇದೆ.
26
ರಿಯಲ್ ಲೈಫ್ಗೆ ಕಂಪೇರ್
ಆದರೆ, ಕೆಲವೊಮ್ಮೆ ಸೀರಿಯಲ್ಗಳಲ್ಲಿ ಬರುವ ಕೆಲವು ದೃಶ್ಯಗಳನ್ನು ನೋಡುವ ವೀಕ್ಷಕರು ಇದು ರಿಯಲ್ ಲೈಫ್ನಲ್ಲಿಯೂ ಹೀಗೆಯೇ ಇದ್ರೆ ಎಷ್ಟು ಚೆನ್ನಾಗಿತ್ತು ಎಂದು ಪ್ರಶ್ನಿಸೋದು ಇದೆ. ಅದರಲ್ಲಿ ಒಂದು ಕರ್ಣ ಸೀರಿಯಲ್ (Karna Serial) ಈ ದೃಶ್ಯ.
36
ಡ್ರಗ್ಸ್ ಕೇಸ್‌ನಲ್ಲಿ ಸಂಜಯ್
ಇದೀಗ ಸಂಜಯ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ನಾನು ಡ್ರಗ್ಸ್ ತೆಗೆದುಕೊಂಡಿದ್ದೇನೆ. ಅದು ತಪ್ಪು. ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ ಎನ್ನುವ ಬೋರ್ಡ್ ಹಿಡಿದುಕೊಂಡು ಪೊಲೀಸರು ಆತನನ್ನು ನಿಲ್ಲಿಸಿದ್ದಾರೆ. ಆಗ ಆತ ಪೊಲೀಸರಿಗೆ ರೋಪ್ ಹಾಕಿದ್ದಾನೆ. ನೀವು ತಪ್ಪು ಮಾಡ್ತಿದ್ದೀರಾ, ನಾನು ಯಾರು ನನ್ನಪ್ಪ ಯಾರು ಎನ್ನೋದು ನಿಮಗಿನ್ನೂ ಗೊತ್ತಿಲ್ಲ ಎನ್ನುತ್ತಿದ್ದಾನೆ. ಆಗ ಆ ಪೊಲೀಸ್ ಅಧಿಕಾರಿ, ನಿನ್ನಪ್ಪ ಯಾರಾದ್ರೆ ನನಗೇನೋ ಎಂದು ಪ್ರಶ್ನಿಸಿದ್ದಾರೆ. ಈ ಡೈಲಾಗ್ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇದಕ್ಕೆ ಕಾರಣ, ರಾಜಕಾರಣಿಗಳು, ವಿಐಪಿ ಎನ್ನಿಸಿಕೊಂಡಿರುವವರ ಮಕ್ಕಳು ಮಾಡುತ್ತಿರುವ ಪುಂಡಾಟ, ಅಪ್ರಾಪ್ತರಾಗಿದ್ದರೂ ಐಷಾರಾಮಿ ಕಾರು ಬೈಕು ತೆಗೆದುಕೊಂಡು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದರೂ, ಯಾವುದಾದರೂ ಕೇಸ್‌ನಲ್ಲಿ ಸಿಕ್ಕಿ ಬಿದ್ದಿದ್ದರೂ ಅವರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ, ಏನು ಎಂದು ಬೇರೆ ಹೇಳಬೇಕಾಗಿಲ್ಲ.
56
ಕೇಸೇ ಕ್ಲೋಸು!
ಕೇಸ್ ಎಷ್ಟೇ ಸ್ಟ್ರಾಂಗ್ ಆಗಿದ್ದರೂ, ಡ್ರೈವ್ ಮಾಡ್ತಿದ್ದದ್ದು ನಾನಲ್ಲ, ಡ್ರೈವರು ಎಂದೋ, ಸತ್ತಿರುವ ಕುಟುಂಬಕ್ಕೆ ಬ್ಲ್ಯಾಕ್ಮೇಲ್ ಮಾಡಿಯೋ, ಹೆದರಿಸಿ-ಗದರಿಸಿಯೋ ಇಲ್ಲವೇ ಈ ಕೇಸ್ ನಡೆದೇ ಇಲ್ಲ ಎಂದು ರಿಪೋರ್ಟ್ ಬರೆಯಲು ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕುವುದು ಇವೆಲ್ಲಾ ಗುಟ್ಟಾಗಿ ಏನೂ ಉಳಿದಿಲ್ಲವಲ್ಲ. ಆದ್ದರಿಂದ ಸೀರಿಯಲ್‌ನಲ್ಲಿ ಈ ಪೊಲೀಸ್ ಹೇಳಿದಂತೆ ರಿಯಲ್ ಲೈಫ್ನಲ್ಲಿಯೂ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಆಗಿದ್ದರೆ, ಎಷ್ಟು ಚೆನ್ನ ಎನ್ನುತ್ತಿದ್ದಾರೆ ನೆಟ್ಟಿಗರು.
66
ರಿಯಾಲಿಟಿಯೂ ಹೀಗೇ ಇದ್ರೆ?
ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಘಟನೆಗಳ ಬಗ್ಗೆ ಕಮೆಂಟ್ ಮಾಡ್ತಿರೋ ನೆಟ್ಟಿಗರು, ಪೊಲೀಸ್ ಇಲಾಖೆ ಜಗ್ಗದೇ, ಬೆದರಿಕೆಗಳಿಗೆ ಬಗ್ಗದೇ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ, ಲಂಚ ಪಡೆಯದೇ ಇಂಥ ಪುಂಡರ ಆಟಕ್ಕೆ ಬ್ರೇಕ್ ಹಾಕಬೇಕಿದೆ. ಇದು ಸೀರಿಯಲ್ಗಳಲ್ಲಿ ತೋರಿಸಿದರಷ್ಟೇ ಸಾಲದು, ರಿಯಾಲಿಟಿಯಲ್ಲಿಯೂ ಇದು ಆಗಬೇಕಿದೆ ಎಂದು ಭಾರಿ ಕಮೆಂಟ್ಸ್ಗಳಿಂದ ತುಂಬಿಸುತ್ತಿದ್ದಾರೆ ನೆಟ್ಟಿಗರು. ಕೆಲವು ಪೊಲೀಸರು ದಕ್ಷರಾಗಿದ್ದರೆ ಸಾಲದು, ಪ್ರತಿಯೊಬ್ಬರೂ ಆದಾಗಲೇ ಇಂಥವರಿಗೆ ಬುದ್ಧಿ ಬರೋದು ಎನ್ನುವುದು ಅವರ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.