Karna Serial: ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಹುಟ್ಟತ್ತಾ? ಮನೆಯಲ್ಲೇ ಇರೋ ನಿಧಿ ಕಥೆಯೇನು- ಏನಿದು ಟ್ವಿಸ್ಟ್​?

Published : Oct 27, 2025, 02:45 PM IST

ಪ್ರೀತಿಸಿದ ನಿಧಿ ಮನೆಯಲ್ಲಿದ್ದರೂ, ಪತ್ನಿ ನಿತ್ಯಾಳೊಂದಿಗೆ ಹೊಂದಿಕೊಳ್ಳಲು ಕರ್ಣ ಪ್ರಯತ್ನಿಸುತ್ತಿದ್ದಾನೆ. ನಿತ್ಯಾಗೆ ಅಡುಗೆಯಲ್ಲಿ ಸಹಾಯ ಮಾಡುವ ಕರ್ಣನ ನಡೆ ಮನೆಯವರಿಗೆ ಸಂತಸ ತಂದರೂ, ನಿಧಿಗೆ ನೋವು ನೀಡಿದೆ. ಈ ನಡುವೆ, ಕರ್ಣನ ಕಾಳಜಿಗೆ ನಿತ್ಯಾ ಮನಸೋತರೆ ಕಥೆ ಏನಾಗಬಹುದು ಎಂಬ ಆತಂಕ ಶುರುವಾಗಿದೆ.

PREV
15
ಅತೀ ಎನ್ನುವಷ್ಟು ಒಳ್ಳೆತನ

ಅತಿ ಹೆಚ್ಚು ಎನ್ನಿಸುವಷ್ಟೇ ಒಳ್ಳೆಯತನಕ್ಕೆ ಪ್ರತಿರೂಪವಾಗಿದ್ದಾನೆ ಕರ್ಣ. ಒಲ್ಲದ ಮದುವೆಯಿಂದ ಹೇಳಿಕೊಳ್ಳಲಾಗದ ಸಂಕಟ ಒಂದೆಡೆಯಾದರೆ, ಪ್ರೀತಿಸಿದ ಜೀವ ಮನೆಯಲ್ಲಿಯೇ ಇದ್ದರೂ, ಆ ಬಗ್ಗೆ ಹೇಳಿಕೊಳ್ಳಲಾಗದ ನೋವು ಇನ್ನೊಂದೆಡೆ.

25
ನಿತ್ಯಾ-ನಿಧಿ ಒಂದೇ ಕಡೆ

ತಾನು ಪ್ರೀತಿಸಿರುವ ನಿಧಿ ಮನೆಯಲ್ಲಿಯೇ ಇದ್ದಾಳೆ. ಆದರೆ ಕರ್ಣನನ್ನು ಪ್ರೀತಿಸ್ತಿರೋದು ತನ್ನ ತಂಗಿನೇ ಎನ್ನೋದು ನಿತ್ಯಳಿಗೆ ಗೊತ್ತಿಲ್ಲ. ಅದೇ ಇನ್ನೊಂದೆಡೆ, ನಿಧಿಗೆ ಕರ್ಣನ ಮನೆಯಲ್ಲಿಯೇ ಇದ್ದು ಏನೂ ಹೇಳಿಕೊಳ್ಳಲು ಆಗದೇ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.

35
ಶ್ಯಾವಿಗೆ ಪಾಯಸ

ಅದೇ ಇನ್ನೊಂದೆಡೆ, ಮದುವೆಯಾದ ಹೊಸತರದಲ್ಲಿ ನಿತ್ಯ ಸ್ವೀಟ್​ ಮಾಡಬೇಕಿದೆ. ಆದರೆ ಆಕೆಗೆ ಏನೂ ಗೊತ್ತಿಲ್ಲ. ಆಗ ಕರ್ಣನೇ ಮೇಲಿನಿಂದ ಆಕೆಗೆ ಶ್ಯಾವಿಗೆ ಪಾಯಸವನ್ನು ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಾನೆ. ಕೊನೆಗೆ ಕಾಲ್​ ಸರಿಯಾಗಿ ಕೇಳಿಸುವುದಿಲ್ಲ ಎಂದು ಹತ್ತಿರವೇ ಹೋಗಿ ಹೇಳಿಕೊಡುತ್ತಾನೆ.

45
ಮನೆಯವರಿಗೆ ಖುಷಿ

ಗಂಡ-ಹೆಂಡತಿ ಇಬ್ಬರೂ ಒಟ್ಟಾಗಿ ಇರುವುದನ್ನು ನೋಡಿ ಮನೆಯವರು ಖುಷಿ ಪಡುತ್ತಾರೆ. ಆದರೆ, ನಿಧಿ ಮಾತ್ರ ದುಃಖಿತಳಾಗಿದ್ದಾಳೆ. ಇಷ್ಟೆಲ್ಲಾ ನೋವು ಇಟ್ಟುಕೊಂಡು ಅದ್ಹೇಗೆ ಇಷ್ಟೊಂದು ಖುಷಿಯಾಗಿ ಇರುತ್ತೀರಿ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ನಗುವೇ ಕರ್ಣನ ಉತ್ತರವಾಗಿದೆ.

55
ಲವ್​ ಹುಟ್ಟತ್ತಾ?

ಇದೀಗ ಇನ್ನೊಂದೆಡೆ ಫ್ಯಾನ್ಸ್​ಗೆ ಆತಂಕ ಕಾಡುತ್ತಿದೆ. ಕರ್ಣ ತೋರುವ ಪ್ರೀತಿ ಕಂಡು ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಆಗಿಬಿಟ್ಟರೆ ಏನು ಕಥೆ ಎಂದು? ಅವಳ ಹೊಟ್ಟೆಯಲ್ಲಿ ಬೇರೆ ಮಗುವಿದೆ. ಅದು ಕರ್ಣನದ್ದೇ ಎಂದು ತಿಳಿದುಕೊಂಡರೆ ಇನ್ನೂ ಕಷ್ಟವಾಗಿಬಿಡುತ್ತದೆ ಎನ್ನುವುದು ಅವರ ಆತಂಕ. ಅದಕ್ಕೆ ಕಾಲವೇ ಉತ್ತರಿಸಬೇಕಿದೆ.

ಪ್ರೊಮೋಗಾಗಿ ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories