BBK 12: ಅಯ್ಯಯ್ಯೋ..ಟಾಸ್ಕ್‌ನಲ್ಲಿ ಇಲ್ದಿರೋದನ್ನು ಮಾಡ್ತಾವ್ರೇ...ರಾಶಿಕಾ ಶೆಟ್ಟಿ, ಸೂರಜ್‌ ಪ್ರೇಮಗೀತೆ ಶುರು

Published : Oct 27, 2025, 02:43 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ಹೊಸ ರೀತಿಯ ಟಾಸ್ಕ್‌ ನೀಡಲಾಗಿತ್ತು. ಕಾಲೇಜು ಮಕ್ಕಳ ಜೊತೆ ಸ್ಪರ್ಧಿಗಳು ನಟಿಸಬೇಕಿತ್ತು. ಕಾಲೇಜಿನಲ್ಲಿರುವ ವಿಷಯಗಳು ದೊಡ್ಮನೆಯಲ್ಲಿ ಇರಬೇಕಿತ್ತು. ರೋಗಿ ಬಯಸಿದ್ದು ಹಾಲು ಅನ್ನ, ಬಿಗ್‌ ಬಾಸ್‌ ಕೊಟ್ಟಿದ್ದು ಹಾಲು ಎನ್ನ ಎನ್ನೋ ಥರ ಆಯ್ತು ಇದು.

PREV
16
ರಾಶಿಕಾ ಶೆಟ್ಟಿ, ಸೂರಜ್‌ ಪ್ರೇಮಗೀತೆ ಫುಲ್‌ ಟ್ರೋಲ್‌

ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರು ಮೊದಲೇ ಆತ್ಮೀಯತೆಯಿಂದ ಇದ್ದರು. ಇನ್ನು ರಾಶಿಕಾ ಹೊರಗಡೆ ಹೋಗ್ತಾರೆ ಎಂದಾದಾಗ ಸೂರಜ್‌ ಅವರು ಬಂದು ಒಂದು ಲಾಂಗ್‌ ಹಗ್‌ ಕೊಟ್ಟಿದ್ದು ಎಲ್ಲರ ಕಣ್ಣಿಗೆ ಬಿದ್ದಿತ್ತು. ಇದೀಗ ಫುಲ್‌ ಟ್ರೋಲ್‌ ಕೂಡ ಆಗುತ್ತಿದೆ. ಹೀಗಿರುವಾಗ ಕಾಲೇಜಿನಲ್ಲಿ ಇರುವಂತೆ ಬಿಹೇವ್‌ ಮಾಡಿ ಎಂದಾಗ ರಾಶಿಕಾ ಸೂರಜ್‌ ಸುಮ್ಮನೆ ಇರ್ತಾರಾ?

26
ಲೈನ್‌ ಹೊಡೆಯಬಹುದು

ಸ್ಪಂದನಾ ಸೋಮಣ್ಣ ಅವರ ಕೆನ್ನೆ ಮುಟ್ಟಲು ಅಭಿಷೇಕ್‌ ಶ್ರೀಕಾಂತ್‌, ಗಿಲ್ಲಿ ನಟ ಜಿದ್ದಿಗೆ ಬಿದ್ದರು. ನನ್ನ ವಯಸ್ಸು 21 ಎಂದು ಚಂದ್ರಪ್ರಭ ಹೇಳಿದ್ದಾರೆ. ಲೈನ್‌ ಹೊಡೆಯಬಹುದು ಎಂದು ಸೂರಜ್‌ ಫುಲ್‌ ರಾಶಿಕಾ ಹಿಂದೆ ಬಿದ್ದಿದ್ದಾರೆ. ರಾಶಿಕಾ ಹಾಗೂ ಸೂರಜ್‌ ಬಿಹೇವಿಯರ್‌ ನೋಡಿದವರು, ಅಯ್ಯಯ್ಯೋ ಇದೆಲ್ಲ ಟಾಸ್ಕ್‌ನಲ್ಲಿ ಇಲ್ವೇ ಇಲ್ಲ ಎಂದು ಹೇಳಿದ್ದಾರೆ.

36
ಈ ಬಾರಿ ಏನ್‌ ಮಾಡ್ತಾರೆ?

ಈ ಹಿಂದಿನ ಸೀಸನ್‌ನಲ್ಲಿ ಸ್ಕೂಲ್‌ ಟಾಸ್ಕ್‌ ಕೊಟ್ಟಾಗ ಸ್ಪರ್ಧಿಗಳು ಸಖತ್‌ ಆಗಿ ಮನರಂಜನೆ ಕೊಟ್ಟಿದ್ದರು. ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಶೋನಲ್ಲಿ ಕುರಿ ಪ್ರತಾಪ್‌, ಶೈನ್‌ ಶೆಟ್ಟಿ, ಕಿಶನ್‌ ಬಿಳಗಲಿ, ಭೂಮಿ ಶೆಟ್ಟಿ, ಪ್ರಿಯಾಂಕಾ ಶಿವಣ್ಣ, ವಾಸುಕಿ ವೈಭವ್‌ ಸಿಕ್ಕಾಪಟ್ಟೆ ಮನರಂಜನೆ ಕೊಟ್ಟಿದ್ದರು. ಅದಾದ ಬಳಿಕ ಸೀಸನ್‌ 10 ಶೋನಲ್ಲಿ ತುಕಾಲಿ ಸ್ಟಾರ್‌ ಸಂತು, ಕಾರ್ತಿಕ್‌ ಮಹೇಶ್‌ ಕೂಡ ಭರ್ಜರಿ ಎಂಟರ್‌ಟೇನ್‌ಮೆಂಟ್‌ ಕೊಟ್ಟಿದ್ದರು. ಈ ಬಾರಿ ಏನು ಮಾಡ್ತಾರೋ ಏನೋ

46
ವೀಕ್ಷಕರಿಗೆ ಬೇಸರ

ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರ ಈ ಸ್ನೇಹ ಸಂಬಂಧವೋ ಅಥವಾ ಲವ್‌ ಇದು ವೀಕ್ಷಕರಿಗೆ ಬೇಸರ ತಂದಿದೆ. ಕಲರ್ಸ್‌ ಕನ್ನಡದ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿಯೇ ಹೊರಗಡೆ ಕಳಿಸಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

56
ರಾಶಿಕಾ ಶೆಟ್ಟಿ ಹೊರಗಡೆ ಬರ್ತಾರಾ?

ಬರೀ ಸೂರಜ್‌ ಜೊತೆಗೆ ಇದ್ದರೆ ರಾಶಿಕಾ ಶೆಟ್ಟಿ ಆದಷ್ಟು ಬೇಗ ಹೊರಗಡೆ ಬರ್ತಾರೆ ಎಂದು ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಮುಂದಿನ ವಾರ ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

66
ಸೂರಜ್‌ ಜೊತೆ ರಾಶಿಕಾ ಇರಬಾರದಂತೆ

ರಾಶಿಕಾ ಜೊತೆಗಿದ್ದರೆ ಸೂರಜ್‌ ಆಟ ಆಡೋದಿಲ್ಲ ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಸೂರಜ್‌ ಹಾಗೂ ರಾಶಿಕಾ ಶೆಟ್ಟಿ ಬೇರೆ ಬೇರೆ ಆಗಬೇಕು ಎಂ ಅಭಿಪ್ರಾಯ ಕೇಳಿ ಬರುತ್ತಿದೆ. 

Read more Photos on
click me!

Recommended Stories