Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?

Published : Dec 17, 2025, 05:37 PM IST

ರಮೇಶ್ ಕುತಂತ್ರದಿಂದ ಕರ್ಣ ಮತ್ತು ನಿತ್ಯಾ ನಿಜವಾಗಿಯೂ ಮದುವೆಯಾಗುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ, ಕರ್ಣನ ಮೇಲೆ ತಪ್ಪು ತಿಳಿದು ತಪ್ಪಿಸಿಕೊಂಡು ಬಂದಿರುವ ತೇಜಸ್, ಮದುವೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಾನೆ. ತೇಜಸ್ ಬರುವಷ್ಟರಲ್ಲಿ ಮದುವೆ ನಡೆದುಹೋಗುತ್ತದೆಯೇ ಎಂಬ ಕುತೂಹಲ ಇದೀಗ ಮನೆಮಾಡಿದೆ

PREV
18
ರೋಚಕ ಹಂತ

ಕರ್ಣ ಸೀರಿಯಲ್​ (Karna Serial) ಇದೀಗ ರೋಚಕ ಹಂತ ತಲುಪಿದೆ. ರಮೇಶ್​ ಮತ್ತು ಸಂಜಯ್​ ಕುತಂತ್ರದಿಂದ ಕರ್ಣ ಮತ್ತು ನಿತ್ಯಾ ಮದುವೆಯಾಗಲೇಬೇಕಿದೆ. ಮೊದಲು ಇವರಿಬ್ಬರೂ ಮದುವೆಯಾದಂತೆ ನಾಟಕವಾಡಿದ್ದರು. ನಿತ್ಯಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಮಾನ ಕಾಪಾಡಲು ಕರ್ಣ ಮದುವೆಯ ನಾಟಕವಾಡಿದ್ದ.

28
ಜೀವನ ಹಾಳು

ಆದರೆ ಅದು ನಾಟಕ ಎನ್ನುವುದು ರಮೇಶ್​ಗೆ ತಿಳಿದಿರುವ ಹಿನ್ನೆಲೆಯಲ್ಲಿ, ನಿತ್ಯಾ, ನಿಧಿ ಮತ್ತು ಕರ್ಣ ಮೂವರ ಜೀವನವನ್ನು ಹಾಳು ಮಾಡುವ ಪ್ಲ್ಯಾನ್ ಮಾಡಿ ನಿತ್ಯಾಳ ಕುತ್ತಿಗೆಯಲ್ಲಿದ್ದ ತಾಳಿಯನ್ನು ತುಂಡು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾನೆ.

38
ನಿಜವಾದ ಮದುವೆ

ಇದೀಗ ಕಳ್ಳ ಜ್ಯೋತಿಷಿಗಳನ್ನು ಕರೆಸಿ, ಇವರಿಬ್ಬರೂ ನಿಜವಾಗಿಯೂ ಮತ್ತೆ ಮದುವೆಯಾಗುವ ಹಾಗೆ ಮಾಡಲಾಗಿದೆ. ಇವರಿಬ್ಬರ ಸತ್ಯ ಮನೆಯಲ್ಲಿ ಬೇರೆ ಯಾರಿಗೂ ತಿಳಿಯದೇ ಇರುವ ಕಾರಣ, ಎಲ್ಲರೂ ಮದುವೆಗೆ ಖುಷಿಯಾಗಿಯೇ ಇದ್ದಾರೆ.

48
ರಮೇಶ್​ ಕುತಂತ್ರ

ರಮೇಶ್​, ತಾಳಿಯನ್ನು ಕರ್ಣನ ಕೈಗೆ ಕೊಟ್ಟು ನಿತ್ಯಾಳಿಗೆ ಕಟ್ಟು ಎನ್ನುತ್ತಿದ್ದಾನೆ. ಇದೀಗ ನಿತ್ಯಾ ಮತ್ತು ಕರ್ಣನಿಗೆ ಸಂಕಟ. ಮೊದಲು ಹೇಗೆ ತಾಳಿ ಕಟ್ಟುವಂತೆ ನಾಟಕ ಮಾಡಿದ್ದ. ಆದರೆ ಈ ಬಾರಿ ಅದ್ಯಾವುದೂ ವರ್ಕ್​ಔಟ್​ ಆಗುವ ಹಾಗೆ ಕಾಣಿಸುವುದಿಲ್ಲ.

58
ತಪ್ಪಿಸಿಕೊಂಡ ತೇಜಸ್​

ಅದೇ ಇನ್ನೊಂದೆಡೆ, ದುಷ್ಟರ ಕೈಯಿಂದ ತೇಜಸ್​ ತಪ್ಪಿಸಿಕೊಂಡು ಬಂದಿದ್ದಾನೆ. ಬೆಂಗಳೂರಿಗೆ ಹೋಗಿ ನಿತ್ಯಾಳನ್ನು ಮೀಟ್​ ಆಗಿ ಕರ್ಣ ಮೋಸ ಮಾಡಿರುವುದನ್ನು ಹೇಳುತ್ತೇನೆ ಎಂದಿದ್ದಾನೆ. ತನ್ನನ್ನು ಕಿಡ್​ನ್ಯಾಪ್​​ ಮಾಡಿಸಿದ್ದು ಕರ್ಣ ಎನ್ನುವ ತಪ್ಪು ಕಲ್ಪನೆ ಅವನದ್ದಾಗಿದೆ.

68
ಕರ್ಣನ ಕೈಯಲ್ಲಿ ತಾಳಿ

ಆದರೆ, ಅದೇ ವೇಳೆ ಕರ್ಣನ ಕೈಯಲ್ಲಿ ತಾಳಿ ಬಂದಾಗಿದೆ. ತೇಜಸ್​ ಮನೆಗೆ ಎಂಟ್ರಿ ಕೊಡುವಷ್ಟರಲ್ಲಿಯೇ ಇವರಿಬ್ಬರ ಮದುವೆ ನಡೆದು ಹೋಗುತ್ತಾ? ಇವರ ಮದುವೆಗೆ ತೇಜಸ್​ ಸಾಕ್ಷಿಯಾಗ್ತಾನಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

78
ಗರ್ಭಿಣಿ ಎನ್ನೋದು ಗೊತ್ತಿಲ್ಲ

ತೇಜಸ್​ಗೆ ನಿತ್ಯಾ ಗರ್ಭಿಣಿ ಎನ್ನುವ ವಿಷಯ ಗೊತ್ತಿಲ್ಲ. ಅದು ತಿಳಿದ ಮೇಲೆ ಕರ್ಣನೇ ಇದಕ್ಕೆ ಕಾರಣ ಎಂದರೂ ಎನ್ನಬಹುದು. ಸದ್ಯ ಕರ್ಣ ಮತ್ತು ನಿತ್ಯಾಳ ಜೊತೆಗೆ ನಿಧಿಯ ಬಾಳಲ್ಲಿ ಬಿರುಗಾಳಿ ಬರುತ್ತಿದೆ.

88
ರೋಚಕ ಟ್ವಿಸ್ಟ್​

ತೇಜಸ್​ ಆಗಿದ್ದನ್ನೆಲ್ಲ ಒಪ್ಪಿಕೊಂಡು, ಕರ್ಣ ಮತ್ತು ನಿತ್ಯಾಳ ನಿಜವಾದ ಸಂಬಂಧ ತಿಳಿದು ನಿತ್ಯಾಳನ್ನು ಒಪ್ಪಿಕೊಂಡರೆ ಸೀರಿಯಲ್​ ಅಲ್ಲಿಗೇ ಮುಗಿದಂತೆ. ಇದೇ ಕಾರಣಕ್ಕೆ ರೋಚಕ ಟ್ವಿಸ್ಟ್​ ಅಂತೂ ಇದ್ದೇ ಇದೆ.

Read more Photos on
click me!

Recommended Stories