ಕಿರುತೆರೆಯಿಂದ ಮಿಸ್ಸಿಂಗ್… ‘ನಂಬಿರುವ ಶಕ್ತಿ ದೇವತೆಯೊಂದಿಗೆ’ Shwetha Chengappa ಟೆಂಪಲ್ ರನ್

Published : Dec 17, 2025, 05:06 PM IST

Shwetha Chengappa: ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಜನಪ್ರಿಯತೆ ಪಡೆದ ನಟಿ ಶ್ವೇತಾ ಚೆಂಗಪ್ಪ ಇದೀಗ ಕಿರುತೆರೆಯಿಂದ ದೂರ ಉಳಿದಿದ್ದಾರೆ. ಆದರೆ ಸದ್ಯ ತಮ್ಮ ಪತಿ ಹಾಗೂ ಮಗನ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ ನಟಿ.

PREV
16
ಶ್ವೇತಾ ಚೆಂಗಪ್ಪ

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಸುಮಾರು 15 ವರ್ಷಗಳಿಂದ ಗುರುತಿಸಿಕೊಂಡಿರುವ ಶ್ವೇತಾ ಚೆಂಗಪ್ಪ. ಇದೀಗ ನಟನೆಯಿಂದಲೂ ಜೊತೆಗೆ ನಿರೂಪಣೆಯಿಂದಲೂ ದೂರ ಉಳಿದಿದ್ದಾರೆ. ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ ನಟಿ.

26
ನಟಿಯ ಟೆಂಪಲ್ ರನ್

ನಟಿ ಹೆಚ್ಚಾಗಿ ವಿವಿಧ ದೇಗುಲಗಳನ್ನು ಫ್ಯಾಮಿಲಿ ಜೊತೆ ಭೇಟಿ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಂಗಳೂರಿನ ವಿವಿಧ ಕ್ಷೇತ್ರಗಳಿಗೆ ನಟಿ ಭೇಟಿ ಕೊಟ್ಟಿದ್ದರು. ಇದೀಗ ಬನಶಂಕರಿ ದೇಗುಲಕ್ಕೆ ನಟಿ ತಮ್ಮ ಪತಿ, ಮಗುವಿನ ಜೊತೆಗೆ ಭೇಟಿ ಕೊಟ್ಟಿದ್ದಾರೆ.

36
ಶಕ್ತಿ ದೇವತೆ ಜೊತೆ ಪಯಣ

ಸೋಶಿಯಲ್ ಮೀಡಿಯಾದಲ್ಲಿ ದೇವಸ್ಥಾನದಲ್ಲಿನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿರುವ ಶ್ವೇತಾ, ‘ನಾನು ನಂಬಿರುವ ಶಕ್ತಿ ದೇವತೆಯೊಂದಿಗೆ ನನ್ನ ಒಂದು ಪಯಣ" ನನ್ನ ನಂಬಿಕೆ, ನನ್ನ ಬಲ. Stay grounded. Stay true to yourself’. ಎಂದು ಬರೆದುಕೊಂಡಿದ್ದಾರೆ.

46
ಅರುಂಧತಿಯನ್ನು ನೆನಪಿಸಿದ ಜನ

ಶ್ವೇತಾ ಚೆಂಗಪ್ಪ ದೇವಸ್ಥಾನದ ಈ ಸೀರೆ ಲುಕ್ ನೋಡಿ ಅಭಿಮಾನಿಗಳು ಅರುಂಧತಿ ಸೀರಿಯಲ್ ನೆನಪಿಸಿಕೊಂಡಿದ್ದಾರೆ. ನೀವು ಕೂಡ ದೇವಿಯಂತೆ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ ಜನ. ಜೊತೆ ಮತ್ತೆ ಕಿರುತೆರೆಗೆ ಬನ್ನಿ ಆದಷ್ಟು ಬೇಗ ಎಂದು ಹಾರೈಸಿದ್ದಾರೆ.

56
ನಟನೆಯಿಂದ ದೂರ

ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ಸಿನಿಮಾಗಳಲ್ಲೂ ನಟಿಸಿದ್ದ ಶ್ವೇತಾ ಚೆಂಗಪ್ಪ ನಟನೆಯಿಂದ ದೂರ ಉಳಿದು ತುಂಬಾ ಸಮಯವೇ ಆಗಿತ್ತು. ನಂತರದ ದಿನಗಳಲ್ಲಿ ನಿರೂಪಕಿಯಾಗಿ ಹಲವಾರು ಕಾರ್ಯಕ್ರಮಗಳನ್ನು ನಟಿ ಹೋಸ್ಟ್ ಮಾಡಿದ್ದರು, ಇದೀಗ ನಿರೂಪಕಿಯಾಗಿರೂ ಕಾಣಿಸುತ್ತಿಲ್ಲ.

66
ಧ್ರುವ ದಸರಾದಲ್ಲಿ ಶ್ವೇತಾ

ಜೋಡಿ ನಂ 1, ಸೂಪರ್ ಕ್ವೀನ್, ಚೋಟಾ ಚಾಂಪಿಯನ್, ಜೋಡಿ ನಂ 1 ಸೀಸನ್ 2 ಹೋಸ್ಟ್ ಮಾಡಿದ್ದ ಶ್ವೇತಾ ಚೆಂಗಪ್ಪ, ಈ ವರ್ಷ ಯಾವುದೇ ನಿರೂಪಣೆ ಮಾಡಿಲ್ಲ. ಕೊನೆಯದಾಗಿ ಧ್ರುವ ದಸರಾದಲ್ಲಿ ನಿರೂಪಣೆ ಮತ್ತು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. ಆದರೆ ಶ್ವೇತಾರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಜನ ಕಾಯುತ್ತಿದ್ದಾರೆ.

Read more Photos on
click me!

Recommended Stories