ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ ಈ ವಿಷಯವನ್ನು ನಿತ್ಯಾ ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್ ಸಿಗೋದು ಡೌಟೇ. ಮುಂದೇನು?
ಕರ್ಣದ ಲೈಫ್ನಲ್ಲಿ ಅಪ್ಪ ರಮೇಶ್ ಆಟವಾಡುತ್ತಿದ್ದಾನೆ. ನಿತ್ಯಾ ಮತ್ತು ತೇಜಸ್ ಮದುವೆಯ ದಿನವೇ ತೇಜಸ್ ಅನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ. ವಿಧಿಯ ಆಟಕ್ಕೆ ಕರ್ಣ ನಿತ್ಯಾಳನ್ನು ಮದುವೆಯಾಗುವ ಹಾಗೆ ಮಾಡಿದ್ದಾನೆ.
26
ಪ್ಲ್ಯಾನ್ ಸಕ್ಸಸ್
ಅಲ್ಲಿಗೆ ಅವನ ಪ್ಲ್ಯಾನ್ ಸಕ್ಸಸ್ ಆಗಿದೆ. ಇತ್ತ ಕರ್ಣ, ನಿಧಿ ಮತ್ತು ನಿತ್ಯಾ ಮೂವರ ಲೈಫ್ನಲ್ಲಿಯೂ ಈಗ ಏರುಪೇರು. ಎಲ್ಲರೂ ಮನಸ್ಸಿನಲ್ಲಿಯೇ ಸಂಕಟ ಪಡುತ್ತಿದ್ದಾರೆ. ಇದನ್ನು ನೋಡಿ ರಮೇಶ್ ಒಳಗೊಳಗೇ ಖುಷಿಪಡುತ್ತಿದ್ದಾನೆ.
36
ತೇಜಸ್ ಸುಳಿವು
ಇದರ ನಡುವೆಯೇ, ಈಗ ತೇಜಸ್ ಎಲ್ಲಿದ್ದಾನೆ ಎನ್ನುವ ಸುಳಿವು ಸಿಕ್ಕಿದೆ. ಇದರಿಂದ ಕರ್ಣ ತುಂಬಾ ಖುಷಿಯಾಗಿದ್ದಾನೆ. ಇನ್ನು ಎಲ್ಲವೂ ಸರಿ ಹೋಗುತ್ತದೆ ಎನ್ನುವ ಭರವಸೆಯಲ್ಲಿಯೇ, ಈ ವಿಷಯವನ್ನು ನಿತ್ಯಾಗೆ ತಿಳಿಸಿದ್ದಾನೆ. ಇದನ್ನು ಕೇಳಿ ನಿತ್ಯಾ ಹಿರಿಹಿರಿ ಹಿಗ್ಗಿದ್ದಾಳೆ.
ಚಿಕ್ಕಮಗಳೂರಿಗೆ ಹೋಗುವ ಪ್ಲ್ಯಾನ್ ಮಾಡುತ್ತಿರುವಾಗಲೇ ರಮೇಶ್ ಎಂಟ್ರಿಯಾಗಿದೆ. ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳಿದಾಗ, ಸುಮ್ಮನಿರದ ನಿತ್ಯಾ ಚಿಕ್ಕಮಗಳೂರು ಎಂದುಬಿಟ್ಟಿದ್ದಾಳೆ.
56
ರಮೇಶ್ಗೆ ಶಾಕ್
ಇದನ್ನು ಕೇಳಿ ರಮೇಶ್ಗೆ ಶಾಕ್ ಆಗಿದೆ. ಏಕೆ ಎಂದಾಗ ನಿತ್ಯಾ ಅಸಲಿ ವಿಷಯ ಹೇಳುವಷ್ಟರಲ್ಲಿಯೇ ಕರ್ಣ ಹನಿಮೂನ್ಗೆ ಎಂದಿದ್ದಾನೆ. ಆದರೆ ಅವನು ರಮೇಶ. ಡೌಟ್ ಬರದೇ ಇರತ್ತಾ?
66
ಬೇರೆ ಕಡೆ ಶಿಫ್ಟ್?
ಇನ್ನು ಅವನಿಗೆ ಡೌಟ್ ಬಂದಿದ್ದೇ ಹೌದಾದರೆ ತೇಜಸ್ ಅನ್ನು ಅಲ್ಲಿಂದ ಬೇರೆ ಕಡೆ ಶಿಫ್ಟ್ ಮಾಡುವುದು ಖಂಡಿತ. ಕೈಗೆ ಬಂದ ತುತ್ತನ್ನು ನಿತ್ಯಾ ಅರಿವಿಲ್ಲದೇ ತಾನೇ ಖುದ್ದಾಗಿ ಬಾಯಿಗೆ ಇಲ್ಲದಂತೆ ಮಾಡಿಕೊಂಡಿದ್ದಾಳೆ. ಇನ್ನು ಅವರಿಬ್ಬರೂ ಸಿಗೋದು ಡೌಟೇ ಬಿಡಿ!