ನಟಿಯಾಗಿ, ಲೇಖಕಿಯಾಗಿ, ಸೀರಿಯಲ್ ಕಥೆಗಾರ್ತಿಯಾಗಿ ಗುರುತಿಸಿಕೊಂಡಿದ್ದ ರಂಜನಿ ರಾಘವನ್ ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಇದೀಗ ನಟಿ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ಕೊಡದೆ ಸಿಕ್ಕಿಂಗೆ ತೆರಳಿ ಅಲ್ಲಿ ಎಂಜಾಯ್ ಮಾಡ್ತಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪುಟ್ಟ ಗೌರಿಯ ಮದುವೆ ಮೂಲಕ ನಟನೆಗೆ ಎಂಟ್ರಿ ಕೊಟ್ಟರೂ ಸಹ ರಂಜನಿ ರಾಘವನ್ ಜನರಿಗೆ ಹೆಚ್ಚು ಪರಿಚಿತರಾಗಿದ್ದು, ಹೆಚ್ಚು ಹತ್ತಿರವಾಗಿದ್ದು ಕನ್ನಡತಿ ಧಾರಾವಾಹಿಯ ಭುವಿ ಪಾತ್ರದ ಮೂಲಕ. ಇತ್ತೀಚೆಗೆ ನಿರ್ದೇಶನಕ್ಕೆ ಕೈ ಹಾಕಿದ ರಂಜನಿ ಇದೀಗ ಯಾವುದೇ ಅಪ್ ಡೇಟ್ ನೀಡದೆ ಕಾಣೆಯಾಗಿದ್ದಾರಲ್ಲ ಎಂದುಕೊಳ್ಳುವಾಗಲೇ ರಂಜನಿ ದೂರದ ಸಿಕ್ಕಿಂ ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
25
ಸಿಕ್ಕಿಂನಲ್ಲಿ ರಂಜನಿ
ರಂಜನಿ ರಾಘವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ತಾವು ಸಿಕ್ಕಿಂನಲ್ಲಿ ಮಾನೆಸ್ಟ್ರಿ ರನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬೌದ್ಧ ಮಂದಿರದಲ್ಲಿ ಹಾಗೂ ಬೌದ್ಧ ಪುಟ್ಟ ಸನ್ಯಾಸಿಗಳ ಜೊತೆಗೆ ಸಮಯ ಕಳೆದಿರುವ ರಂಜನಿ, ಬುದ್ಧನ ಮುಂದೆ ಕೈ ಮುಗಿದು ನಿಂತಿರುವ ಫೋಟೋಗಳನ್ನು ಶೇರ್ ಮಾಡಿ. ಬುದ್ಧಿಸಂ ಅಂದ್ರೆ ಧರ್ಮ ಅಲ್ಲ, ಅದು ಜೀವನದ ಫಿಲಾಸಫಿ ಎಂದು ಹೇಳಿರುವ ಕ್ವೋಟ್ಸ್ ಶೇರ್ ಮಾಡಿದ್ದಾರೆ.
35
ಸಿನಿಮಾ ಬಗ್ಗೆ ಅಪ್ ಡೇಟ್ಸ್ ಇಲ್ಲ
ರಂಜನಿ ರಾಘವನ್ ಅವರು ‘ಡಿ ಡಿ ಢಿಕ್ಕಿ’ ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ರಂಜನಿ ಕೂಡ ಸಿನಿಮಾ ಆರಂಭವಾಗುವಾಗ ಒಂದಷ್ಟು ಅಪ್ ಡೇಟ್ ಕೊಟ್ಟಿದ್ದರು. ಆದರೆ ಇದೀಗ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೆ ನಟಿ ಸಿಕ್ಕಿಂ ಹೋಗಿ ಕುಳಿತಿದ್ದಾರೆ. ಇದು ಶೂಟಿಂಗ್ ಭಾಗವೇ ಅನ್ನೋದು ಗೊತ್ತಿಲ್ಲ.
ರಂಜನಿ ರಾಘವನ್ ಪುಟ್ಟ ಗೌರಿಯ ಮದುವೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ಕನ್ನಡತಿ ಧಾರಾವಾಹಿ (Kannadathi serial) ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದರು. ಇಂದಿಗೂ ಜನರು ಅವರನ್ನು ಭುವಿ ಅಂತಾನೆ ಕರೆಯುತ್ತಾರೆ. ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ. ರಾಜಹಂಸ ಸೇರಿ ಕನ್ನಡದ ಒಂದೆರಡು ಸಿನಿಮಾದಲ್ಲೂ ರಂಜನಿ ಮಿಂಚಿದ್ದಾರೆ. ಕನ್ನಡತಿ ಬಳಿಕ ನಟನೆಯಿಂದ ದೂರ ಉಳಿದಿರುವ ರಂಜನಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
55
ಲೇಖಕಿ ರಂಜನಿ
ರಂಜನಿ ರಾಘವನ್ ಕೇವಲ ನಟಿ ಮಾತ್ರ ಅಲ್ಲ ಇವರೊಬ್ಬ ಬರಹಗಾರ್ತಿ, ಲೇಖಕಿ ಕೂಡ ಹೌದು. ಈಗಾಗಲೇ ರಂಜನಿ ಬರೆದ ಕಥೆ ಡಬ್ಬಿ ಮತ್ತು ಸ್ವೈಪ್ ಲೆಫ್ಟ್(swipe left) ಬಿಡುಗಡೆಯಾಗಿದೆ. ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಮಾತ್ರ ಇದುವರೆಗೆ ಸಿಕ್ಕಿಲ್ಲ.