ಕರ್ಣ ಸೀರಿಯಲ್ನಲ್ಲಿ ಮಹತ್ವದ ತಿರುವು ಸಿಕ್ಕಿದೆ. ನಿತ್ಯಾಳ ಮಗುವಿನ ತಂದೆ ತಾನೇ ಎಂದು ಕರ್ಣ ಹೇಳಿದ್ದನ್ನು ಕೇಳಿ ನಿಧಿ ಆಘಾತಕ್ಕೊಳಗಾಗಿದ್ದಾಳೆ. ಇನ್ನೊಂದೆಡೆ, ನಿಧಿ ಎಂದು ಭಾವಿಸಿ ನಿತ್ಯಾಳ ಬಳಿ ಕರ್ಣ ತನ್ನ ಪ್ರೀತಿಯ ಸತ್ಯವನ್ನು ಹೇಳಿಕೊಂಡಿದ್ದಾನೆ.
ಕರ್ಣ ಸೀರಿಯಲ್ (Karna Serial) ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ನಿತ್ಯಾಳನ್ನು ಕರೆದುಕೊಂಡು ಕರ್ಣ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ಮಗುವಿನ ತಂದೆ ನೀವೇನಾ ಎಂದು ಡಾಕ್ಟರ್ ಕೇಳಿದಾಗ ಕರ್ಣ ಹೌದು ಎಂದಿದ್ದಾನೆ. ಇದನ್ನು ನಿಧಿ ಕೇಳಿಸಿಕೊಂಡಿದ್ದಾಳೆ.
26
ನಿಧಿಗೆ ಶಾಕ್
ನಿಧಿಗೆ ಈಗ ಸಿಕ್ಕಾಪಟ್ಟೆ ಶಾಕ್ ಆಗಿದೆ. ಕರ್ಣ ತನ್ನನ್ನು ಮೋಸ ಮಾಡಿದ ಎಂದು ಅನ್ನಿಸುತ್ತಿದೆ. ಪ್ರೀತಿಯ ನಾಟಕವಾಡಿದ್ದಾನೆ ಎಂದು ಆಕೆಗೆ ಅನ್ನಿಸಿದೆ.
36
ಕರ್ಣನ ಮೇಲೆ ಸಿಡಿಮಿಡಿ
ಇದೇ ಕಾರಣಕ್ಕೆ ಕರ್ಣನನ್ನು ದೂಷಿಸಿದ್ದಾಳೆ ನಿಧಿ. ನನ್ನ ಜೀವನದಲ್ಲಿ ಆಟ ಆಡಬೇಡಿ, ನನಗೆ ಮೋಸ ಮಾಡಿದ್ರಿ. ನಿಮಗೆ ಮತ್ತೊಂದು ಛಾನ್ಸ್ ಕೊಡಲ್ಲ ಎಂದಿದ್ದಾಳೆ.
ಅವಳು ಏಕೆ ಹಾಗೆ ಹೇಳುತ್ತಾಳೆ ಎಂದು ಕರ್ಣನಿಗೆ ತಿಳಿಯಲಿಲ್ಲ. ಅವನು ಮಾತನಾಡುವುದಕ್ಕೂ ಅವಕಾಶ ಕೊಡದೇ ಅಲ್ಲಿಂದ ನಿಧಿ ಹೊರಟು ಹೋಗಿದ್ದಾಳೆ.
56
ನಿತ್ಯಾಳನ್ನು ನಿಧಿ ಎಂದು ತಿಳಿದ ಕರ್ಣ
ನಿತ್ಯಾ ಸೋಫಾದ ಮೇಲೆ ಕುಳಿತಿದಿದ್ದಾಳೆ. ಹಿಂಬದಿಯಿಂದ ಆಕೆ ನಿಧಿ ಎಂದು ತಿಳಿದು ನಿಮ್ಮನ್ನು ಮೋಸ ಮಾಡುವ ಉದ್ದೇಶ ಇರಲಿಲ್ಲ ಎಂದು ಸತ್ಯ ಹೇಳಿದ ಕರ್ಣ ನಿಧಿ ಎಂದು ಹೇಳಿದಾಗ ಅದನ್ನು ಕೇಳಿ ನಿತ್ಯಾಗೆ ಶಾಕ್ ಆಗಿದೆ.
66
ಗೊತ್ತಾಗತ್ತಾ ಸತ್ಯ?
ಹಾಗಿದ್ದರೆ ನಿತ್ಯಾಗೆ ಸತ್ಯ ಗೊತ್ತಾಗತ್ತಾ? ನಿಧಿಯನ್ನೇ ಕರ್ಣ ಲವ್ ಮಾಡ್ತಿರೋದು ಎಂದು ತಿಳಿಯತ್ತಾ? ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ತೇಜಸ್ದು ಎನ್ನುವ ಸತ್ಯ ನಿಧಿಗೆ ತಿಳಿಯತ್ತಾ?