ಕನ್ನಡ ಕಿರುತೆರೆ ನಟ ಸುರೇಶ್ ರೈ ತಮ್ಮ ಪುತ್ರನ ಜೊತೆ ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಬಂದಿದ್ದಾರೆ. ಗಂಡ ಮತ್ತು ಮಗನ ಶಬರಿಮಲೆ ಯಾತ್ರೆಯ ಕುರಿತು ನಟಿ ಭವ್ಯಶ್ರೀ ರೈ ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ನಟಿಸುತ್ತಾ, ಇಂದಿಗೂ ಸೀರಿಯಲ್ ಗಳಲ್ಲಿ ಆಕ್ಟಿವ್ ಆಗಿರುವ ನಟಿ ಭವಶ್ರೀ ರೈ. ಅವರ ಪತಿ ಕೂಡ ನಟರೇ ಅನ್ನೋದು ನಿಮಗೂ ಗೊತ್ತಿರಬಹುದು ಅಲ್ವಾ? ಹೌದು, ಭವ್ಯಶ್ರೀ ರೈ ಅವರ ಪತಿ ನಟ ಸುರೇಶ್ ರೈ.
28
ಶಬರಿಮಲೆ ಯಾತ್ರೆ
ಇದೀಗ ಭವ್ಯಶ್ರೀ ರೈ ಅವರ ಪತಿ ಸುರೇಶ್ ರೈ ಹಾಗೂ ಮಗ ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದು, ಕಟ್ಟ ಕಟ್ಟುವುದರಿಂದ ಹಿಡಿದು, ಪೂಜೆ, ಭಜನೆ, ಯಾತ್ರೆ ಎಲ್ಲಾ ಸುಂದರ ದೈವೀಕ ಕ್ಷಣಗಳನ್ನು ನಟಿ ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
38
ಸ್ವಾಮಿಯೇ ಶರಣಂ ಅಯ್ಯಪ್ಪ
ಈ ಕುರಿತು ನಟಿ ತಮ್ಮ ಇನ್’ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದಿದ್ದು, ಎಂತಹ ಅದ್ಭುತ ಅನುಭವ, ಕುಟುಂಬವಾಗಿ ಎಲ್ಲಾ ಆಚರಣೆಗಳು, ಭಜನೆಗಳು ಮತ್ತು ದೈನಂದಿನ ದಿನಚರಿಯನ್ನು ಅನುಸರಿಸುವುದು, ಸಾತ್ವಿಕ ಆಹಾರ, ಇತ್ಯಾದಿ.. ನನ್ನ ಮಗ, ಕನ್ನಿಸ್ವಾಮಿ, ಹಿಂತಿರುಗಿದ ನಂತರ ಮಾಲೆಯನ್ನು ಇಟ್ಟುಕೊಳ್ಳಲು ಬಯಸಿದನು ಮತ್ತು ಅದಕ್ಕಾಗಿ ಅತ್ತಿದ್ದಾನೆ... ನನಗೆ ಭಕ್ತಿಯ ಪ್ರಭಾವದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ .. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಬರೆದುಕೊಂಡಿದ್ದಾರೆ.
48
ಶಬರಿಮಲೆ ಯಾತ್ರೆ ಶುರು
ಜನವರಿ ತಿಂಗಳಲ್ಲಿ ಮಕರಸಂಕ್ರಮಣವಿದ್ದು, ಈಗಾಗಲೇ ಶಬರಿಮಲೆ ಬಗೈಲು ತೆರೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬರುತ್ತಾರೆ. ನಟ ಸುರೇಶ್ ರೈ ಮತ್ತು ಮಗ ಕೂಡ ಮಾಲೆ ಧರಿಸಿ, ವ್ರತಗಳನ್ನು ಪಾಲಿಸಿ ಶಬರಿಮಲೆ ಯಾತ್ರೆ ಮಾಡಿದ್ದಾರೆ.
58
ಕಿರುತೆರೆಯ ಬೆಸ್ಟ್ ಜೋಡಿ
ಭವ್ಯಶ್ರೀ ರೈ ಮತ್ತು ಸುರೇಶ್ ರೈ ಹಲವು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು. ಭವ್ಯಶ್ರೀ ಸದ್ಯ ಭಾಗ್ಯಲಕ್ಷ್ಮೀಯಲ್ಲಿ ನಟಿಸುತ್ತಿದ್ದರೆ, ಸುರೇಶ್ ರೈ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
68
15 ವರ್ಷಗಳ ಹಿಂದೆ ದಾಂಪತ್ಯ ಜೀವನ ಶುರು
2010ರಲ್ಲಿ ನಟ ಸುರೇಶ್ ರೈ ಹಾಗೂ ನಟಿ ಭವ್ಯಶ್ರೀ ರೈ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇಬ್ಬರು ಒಟ್ಟಿಗೆ ಧಾರಾವಾಹಿಯಲ್ಲಿ ನಟಿಸಿದ್ದರೂ ಕೂಡ, ಇವರದ್ದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರು ನಿಶ್ಚಯಿಸಿದ ಹುಡುಗನನ್ನು ಭವ್ಯಶ್ರೀ ಮದುವೆಯಾಗಿದ್ದರು. ಮದುವೆಯ ದಿನದವರೆಗೂ ನಟಿಗೆ ತಾನು ಮದುವೆಯಾಗುತ್ತಿರುವುದು ಸುರೇಶ್ ರೈ ಅವರನ್ನು ಎಂದು ಗೊತ್ತಿರಲಿಲ್ಲವಂತೆ.
78
ಭವ್ಯಶ್ರೀ ಅಭಿನಯಿಸಿದ ಸೀರಿಯಲ್ -ಸಿನಿಮಾಗಳು
ಕಮಲಿ, ಭಾಗ್ಯಲಕ್ಷ್ಮೀ, ಕಾವ್ಯಾಂಜಲಿ, ಕುಂಕುಮ ಭಾಗ್ಯ, ಮನೆಯೊಂದು ಮೂರು ಬಾಗಿಲು, ಅಭಿಮಾನ, ಅರುಂಧತಿ ಮುಂತಾದ ಸೀರಿಯಲ್‌ಗಳಲ್ಲಿ ಭವ್ಯಶ್ರೀ ರೈ ನಟಿಸಿದ್ದಾರೆ. ಮುತ್ತಣ್ಣ, ಕುರಿಗಳು ಸಾರ್ ಕುರಿಗಳು, ಹಗಲುವೇಷ, ಬೆಳದಿಂಗಳ ಬಾಲೆ, ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ, ಚೆಲುವ ಮುಂತಾದ ಸಿನಿಮಾಗಳಲ್ಲಿ ಭವ್ಯಶ್ರೀ ರೈ ಅಭಿನಯಿಸಿದ್ದಾರೆ.
88
ಸುರೇಶ್ ರೈ ನಟಿಸಿದ
ಬ್ರಹ್ಮಗಂಟು, ಲಕ್ಷ್ಮೀ ಬಾರಮ್ಮ, ಜೋಕಾಲಿ, ಕುಂಕುಮ ಭಾಗ್ಯ, ಕಾದಂಬರಿ, ಜೋಗುಳ, ರಂಗೋಲಿ ಮುಂತಾದ ಧಾರಾವಾಹಿಗಳಲ್ಲಿ ಸುರೇಶ್ ರೈ ನಟಿಸಿದ್ದಾರೆ. ಜೊತೆಗೆ ಸುರೇಶ್ ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ.