ಬಂಗಾರದಂಥ ಚಾನ್ಸ್‌ ತ್ಯಾಗ ಮಾಡಿ ಚಿತ್ರರಂಗಕ್ಕೆ ಬಂದ್ರು; ಯಾರಿಗೂ ತಿಳಿಯದ Bigg Boss ಸ್ಪರ್ಧಿಗಳ ಸೀಕ್ರೆಟ್

Published : Nov 27, 2025, 03:35 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳು ಈ ಹಿಂದೆ ಚಿತ್ರರಂಗಕ್ಕೆ ಬರುವ ಮುನ್ನ ಬೇರೆ ಬೇರೆ ಕ್ಷೇತ್ರಗಳಲ್ಲಿ ಬ್ಯುಸಿ ಆಗಿದ್ದರು. ನಟನೆ ಮೇಲಿನ ಒಲವಿನಿಂದ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸುವರ್ಣಾವಕಾಶವನ್ನು ಕೂಡ ಬೇಡ ಎಂದಿದ್ದರು.

PREV
16
ಅಭಿಷೇಕ್‌ ಶ್ರೀಕಾಂತ್‌

ಅಭಿಷೇಕ್‌ ಶ್ರೀಕಾಂತ್‌ ಅವರು ಇಂಜಿನಿಯರಿಂಗ್‌ ಮಾಡಿದ್ದರು. ಎಂಎನ್‌ಸಿಯಲ್ಲಿ ಕೆಲಸ ಮಾಡೋದು ಬಿಟ್ಟು ಅವರು ಹೀರೋ ಆಗಬೇಕು, ನಟನಾಗಬೇಕು ಎಂದು ಚಿತ್ರರಂಗಕ್ಕೆ ಕಾಲಿಟ್ಟರು. ವಧು, ಲಕ್ಷಣ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

26
ಸ್ಪಂದನಾ ಸೋಮಣ್ಣ

ಸ್ಪಂದನಾ ಸೋಮಣ್ಣ ಅವರು ಬಿಗ್‌ ಬಾಸ್‌ ಮನೆಯಲ್ಲಿ ಅಷ್ಟಾಗಿ ಯಾರ ಬಳಿಯೂ ಜಗಳ ಆಡೋದಿಲ್ಲ. ಯಾವಾಗ ಬೇಕೋ ಅಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಈ ಹಿಂದೆ ಅವರು ಕೆಲ ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಲೋಕಕ್ಕೆ ಬರುವ ಮುನ್ನ ಅವರು ಇಂಜಿನಿಯರಿಂಗ್‌ ಮಾಡಿದ್ದರು. ಕಂಪೆನಿ ಕೆಲಸ ಮಾಡೋದನ್ನು ಬಿಟ್ಟು ಚಿತ್ರರಂಗಕ್ಕೆ ಕಾಲಿಟ್ಟರು.

36
ಧ್ರುವಂತ್‌

ಧ್ರುವಂತ್‌ ಅವರು ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದರೂ ಕೂಡ, ಅದನ್ನು ಬಿಟ್ಟು ನಟನೆಗೆ ಬಂದರು. ‘ಲವಲವಿಕೆ’ ಧಾರಾವಾಹಿ ಅವರಿಗೆ ಒಳ್ಳೆಯ ಹೆಸರು ಕೊಟ್ಟಿತು. ಅದಾದ ಬಳಿಕ ಅವರು ಸೀರಿಯಲ್‌ಗಳಲ್ಲಿ ಬ್ಯುಸಿ ಆದರು.

46
ರಘು

ರಘು ಅವರು ದಶಕಗಳ ಕಾಲ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಅವರು ಫಿಟ್‌ನೆಸ್‌ ಕಡೆಗೆ ಗಮನ ಕೊಟ್ಟರು. ಈಗ ಅವರದ್ದೇ ಆದ ಸ್ವಂತ ಜಿಮ್‌ ಕೂಡ ಇದೆ. ಈಗ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ

56
ಕಾವ್ಯ ಶೈವ

ಕಾವ್ಯ ಶೈವ ಅವರು ಡಿಪ್ಲೋಮಾ ಮಾಡಿದ್ದರು. ಅವರಿಗೆ ಕೇಂದ್ರ ಸರ್ಕಾರದ ಕೆಲಸ ಕೂಡ ಸಿಕ್ಕಿತ್ತು. ಆದರೆ ಅವರು ನಟನೆಯ ಮೇಲಿನ ಒಲಿವಿನಿಂದ ಚಿತ್ರರಂಗಕ್ಕೆ ಬಂದಿದ್ದರು. ಮನೆಯಲ್ಲಿ ಎಷ್ಟೇ ಹೇಳಿದರೂ ಕೂಡ ಅವರು ಸರ್ಕಾರಿ ಕೆಲಸಕ್ಕೆ ಹೋಗಲೇ ಇಲ್ಲ.

66
ಸೂರಜ್‌ ಸಿಂಗ್‌

ಕೆನಡಾದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಸೂರಜ್‌ ಸಿಂಗ್‌ ಅವರು ಐಟಿ ಉದ್ಯೋಗಿ. ಆ ಬಳಿಕ ಅವರು ಭಾರತಕ್ಕೆ ಬಂದು ತಾಯಿ ಜೊತೆ ನೆಲೆಸಿದರು. ಈಗ ಅವರು ಮಾಡೆಲಿಂಗ್‌ನಲ್ಲಿಯೂ ಬ್ಯುಸಿ ಆಗಿದ್ದಾರೆ. ಅಂದಹಾಗೆ ಇವರಿಗೆ ಈಗ 29 ವರ್ಷ ವಯಸ್ಸು.

Read more Photos on
click me!

Recommended Stories