ಕರ್ಣ ಸೀರಿಯಲ್‌ನಲ್ಲಿ ಕಥೆ ರೋಚಕ ತಿರುವು ಪಡೆದಿದೆ. ತನ್ನ ವಿರೋಧಿಗಳಾದ ರಮೇಶ್ ಮತ್ತು ಅತ್ತೆಗೆ ಕರ್ಣ ಸರಿಯಾಗಿಯೇ ತಿರುಗೇಟು ನೀಡುತ್ತಿದ್ದಾನೆ. ತನ್ನ ಪತ್ನಿ ನಿತ್ಯಾಳನ್ನು ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಿಸಿ, ತನ್ನ ಅಧಿಕಾರವನ್ನು ಚಲಾಯಿಸಿ ಅತ್ತೆಗೆ ಶಾಕ್ ನೀಡಿದ್ದಾನೆ.
ಕರ್ಣ ಸೀರಿಯಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ವಿಲನ್ಗಳ ಉಲ್ಟಾ ದಿನಗಳು ಬಂದೇ ಬಿಟ್ಟಿವೆ. ತೀರಾ ಒಳ್ಳೆಯವನಾದ್ರೆ ಈ ಸಮಾಜದಲ್ಲಿ ಬೆಲೆ ಇಲ್ಲ, ಯಾವಾಗ ಕೆಟ್ಟವನಾಗಬೇಕೋ ಆಗ ಆಗಲೇಬೇಕು ಎನ್ನುವ ಸಂದೇಹವನ್ನು ಹೊತ್ತು ತಂದಿದ್ದಾನೆ ಕರ್ಣ.
26
ರಮೇಶ್ಗೆ ನರಕ
ಇದಾಗಲೇ ರಮೇಶ್ನ ಜೀವನವನ್ನು ನರಕ ಮಾಡ್ತಿದ್ದಾನೆ ಕರ್ಣ. ರಮೇಶ್ಗೆ ಏನಾಗ್ತಿದೆ ಎನ್ನುವ ಅರಿವೇ ಇಲ್ಲದಂತೆ, ಮಾತಿನ ವರಸೆಯಿಂದಲೇ ಏನು ಬೇಕೋ ಅದೆಲ್ಲಾಮಾಡುತ್ತಿದ್ದಾನೆ. ಮನೆಯ ಹೆಂಗಸರಿಗೆಲ್ಲಾ ರೆಸ್ಟ್ ಕೊಟ್ಟು ಕೆಲಸವನ್ನೆಲ್ಲಾ ರಮೇಶ್ ಕೈಯಲ್ಲಿ ಮಾಡಿಸುತ್ತಿದ್ದಾನೆ. ರಮೇಶ ಸುಸ್ತೋ ಸುಸ್ತು ಹೊಡೆದು ಹೋಗಿದ್ದಾನೆ.
36
ಅತ್ತೆ ವಿಲವಿಲ
ಇದೀಗ ವಿಲನ್ ಅತ್ತೆ ಪಾಳಿ. ನಿತ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರೋ ಕರ್ಣ ಅತ್ತೆಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾನೆ. ನಿತ್ಯಾ ಬಂದಾಗ ಆಕೆಯನ್ನು ಒಳ್ಳೆಯವಳಂತೆ ವಿಚಾರಿಸಿಕೊಂಡಿದ್ದಾಳೆ ಅತ್ತೆ.
ಕೊನೆಗೆ ಕರ್ಣ ಹೇಳಿದ ಸತ್ಯ ಕೇಳಿ ತಲೆತಿರುಗಿಬಿಟ್ಟಿದೆ. ನಿತ್ಯಾ ಇನ್ನು ಮುಂದೆ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ಗಳಲ್ಲಿ ಒಬ್ಬರು ಎಂದಿದ್ದಾರೆ. ಇದನ್ನು ಕೇಳಿ ನಿತ್ಯಾಗೂ ಶಾಕ್ ಆಗಿದೆ, ಇನ್ನು ಅತ್ತೆ ಅಲ್ಲೋಲ ಕಲ್ಲೋಲ ಆಗಿದ್ದಾಳೆ.
56
ಕ್ವಾಲಿಫಿಕೇಷನ್ ತೋರಿಸಿದ ಕರ್ಣ
ಇದೇನಿದು? ನಿತ್ಯಾಗೆ ಯಾವ ಕ್ವಾಲಿಫಿಕೇಷನ್ ಇದೆ? ಮೀಟಿಂಗ್ನಲ್ಲಿ ಈ ವಿಷಯ ಪ್ರಸ್ತಾಪ ಮಾಡದೇ ಏಕಾಏಕಿ ನೀನೊಬ್ಬನೇ ಹೇಗೆ ನಿರ್ಧಾರ ತೆಗೆದುಕೊಂಡೆ ಎಂದು ಪ್ರಶ್ನಿಸಿದ್ದಾಳೆ ಅತ್ತೆ. ಆಗ ಕರ್ಣ ಇನ್ನೊಂದು ಏನೂ ಮಾತನಾಡದೇ, ನಿತ್ಯಾಳ ಸರ್ಟಿಫಿಕೇಟ್ ಅತ್ತೆಯ ಕೈಯಲ್ಲಿ ಇಟ್ಟು, ನಿತ್ಯಾಗೆ ಎಲ್ಲಾ ಕ್ವಾಲಿಫಿಕೇಷನ್ ಇದೆ ಎಂದು ತೋರಿಸಿದ್ದಾನೆ.
66
ನನಗೆ ಇದೆ ಅಧಿಕಾರ
ಬಳಿಕ ಖುರ್ಚಿಯ ಮೇಲೆ ನಿತ್ಯಾಳನ್ನು ಕುಳ್ಳರಿಸಿ, ಬೋರ್ಡ್ ಆಫ್ ಡೈರೆಕ್ಟರ್ ಪತ್ರಕ್ಕೆ ಸಹಿ ಹಾಕಿದ್ದಾನೆ. ಈ ಆಸ್ಪತ್ರೆಯ ಮಾಲೀಕನಾಗಿ ಯಾರನ್ನು ಅಪಾಯಿಂಟ್ ಮಾಡಿಕೊಳ್ಳಬೇಕು ಎನ್ನುವುದು ನನಗೆ ಗೊತ್ತಿದೆ, ಆ ಅಧಿಕಾರ ನನಗೆ ಇದೆ ಎಂದು ತಿರುಗೇಟು ನೀಡಿದ್ದಾನೆ. ಒಟ್ಟಿನಲ್ಲಿ ವೀಕ್ಷಕರಂತೂ ಫುಲ್ ಖುಷ್. ಇದು ಬೇಕಿತ್ತು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.