ಜಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್‌ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕರ್ಣ ಉರೂಪ್ ಕಿರಣ್ ರಾಜ್ ಅವರಿಗೆ ಲೇಡಿಸ್ ಫ್ಯಾನ್ಸ್ ತುಂಬಾನೆ ಇದ್ದಾರೆ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತಾಡಿದ್ದಾರೆ.
ತಮ್ಮ ಮನೋಜ್ಞ ನಟನೆಯ ಮೂಲಕವೇ ಕನ್ನಡಿಗರ ಮನೆ ಮಾತಾಗಿರುವ ಕಿರಣ್ ರಾಜ್, ಕರ್ಣ ಸೀರಿಯಲ್‌ನಲ್ಲಿ ಹೆಂಗಳೆಯರ ಮನಗೆದ್ದಿದ್ದಾರೆ. ಇತ್ತೀಚೆಗೆ ಕಿರಣ್ ರಾಜ್, ಅಭಿಮಾನಿಗಳ ಬಳಿ ಒಂದು ಹೆಲ್ಪ್ ಕೇಳಿ ಸುದ್ದಿಯಾಗಿದ್ದರು.
26
ಏನದು ಮನವಿ?
ಎಲ್ಲಿಗೋ ಹೋದಾಗ ಈ ನಟನಿಗೆ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ. ಅವರಿಗೆ ತಮ್ಮ ಪ್ರೀತಿಯ ನಟನ ಜೊತೆಯೊಂದು ಸೆಲ್ಫೀ ತೆಗೆದುಕೊಳ್ಳಲು ಆಸೆಯಾಗಿದೆ. ಆದರೆ ಅವರು ಮೊಬೈಲ್ ಬಿಟ್ಟು ಬಂದಿದ್ದರು. ತಮ್ಮ ಮೊಬೈಲ್‌ನಲ್ಲಿ ಸೆಲ್ಫಿಯೊಂದನ್ನು ತೆಗೆದುಕೊಂಡ ಕಿರಣ್, ತಮ್ಮ ಇನ್‌ಸ್ಟಾಗ್ರಾಂ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಮಹಿಳೆಗಿದ್ದಆಸೆಯ ವಿಷಯವನ್ನು ಹಂಚಿಕೊಂಡಿದ್ದಾರೆ. ಯಾರಾದ್ರೂ ಫಾಲೋಯರ್ಸ್‌ನಲ್ಲಿ ಈ ಮಹಿಳೆಯ ಗೊತ್ತಿದ್ದರೆ ಅವರೊಟ್ಟಿಗೆ ಆ ಫೋಟೋ ಶೇರ್ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಈ ಪೋಸ್ಟ್ ಅಭಿಮಾನಿಗಳ ಹೃದಯ ಗೆದ್ದಿತ್ತು.
36
ಕಿರಣ್ ರಾಜ್‌ಗಿದ್ದಾರೆ ಸಿಕ್ಕಾಪಟ್ಟೆ ಲೇಡಿಸ್ ಫ್ಯಾನ್ಸ್
ಮೊದಲೇ ಹೇಳಿದಂತೆ ಕಿರಣ್ ರಾಜ್‌ಗೆ ಸಿಕ್ಕಾಪಟ್ಟೆ ಹುಡುಗಿಯರು ಫ್ಯಾನ್ಸ್ ಇದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಕಿರಣ್ ರಾಜ್ ಅವರಿಗೆ ನೀವು ರಿಲೇಷನ್‌ಶಿಪ್ ಹೇಗೆ ಹ್ಯಾಂಡಲ್ ಮಾಡ್ತೀರಾ? ನೀವೇ ಬೇಕು ಎಂದು ಬಿದ್ದೂ ಬಿದ್ದೂ ಪ್ರಪೋಸ್ ಮಾಡೋರಿಗೆ ಏನ್ ರಿಪ್ಲೇ ಮಾಡ್ತೀರಾ ಎಂದು ಕೇಳುತ್ತಾರೆ.
ಅದಕ್ಕೆ ಕಿರಣ್ ರಾಜ್, ಅದರಲ್ಲಿ ಹ್ಯಾಂಡಲ್ ಮಾಡುವಂತದ್ದು ಏನೂ ಇಲ್ಲ, ರೆಸ್ಪಾನ್ಸ್ ಮಾಡದೇ ಇದ್ರೆ ಮುಗೀತು. ಕೆಲವು ಮೆಸೇಜ್ ಪಾಪ್ ಅಪ್ ಆಗೋವನ್ನು ನೋಡ್ತೀನಿ, ಸ್ಮೈಲ್ ಮಾಡ್ತೀನಿ. ಸುಮ್ಮನಾಗುತ್ತೇನೆ ಎಂದು ಹೇಳಿದ್ದಾರೆ.
56
ಕ್ರೇಜಿ ಪ್ರಪೋಸ್ ಬಗ್ಗೆ ಮಾತಾಡಿದ ಕಿರಣ್ ರಾಜ್!
ಇನ್ನು ಕಿರಣ್ ರಾಜ್ ಅವರ ಬದುಕಿನಲ್ಲಿ ಬಂದ ಕ್ರೇಜಿಯಾಗಿ ಬಂದ ಲವ್ ಪ್ರಪೋಸ್ ಯಾವುದು? ಅದಕ್ಕೆ ಹೇಗೆ ರಿಪ್ಲೆ ಮಾಡಿದ್ರಿ ಎನ್ನುವ ಪ್ರಶ್ನೆಗೂ ಕರ್ಣ ಸೀರಿಯಲ್ ಹೀರೋ ಮನಬಿಚ್ಚಿ ಉತ್ತರ ನೀಡಿದ್ದಾರೆ.
66
ಮದುವೆ ಮಂಟಪದಲ್ಲಿದ್ದಾಗಲೂ ಪ್ರಪೋಸ್
ತುಂಬಾ ಕ್ರೇಜಿ ಅಂದ್ರೆ ಮದುವೆ ಮಂಟಪದಲ್ಲಿ, ಮದುವೆಗೆ ಅರ್ಧ ಗಂಟೆ ಬಾಕಿ ಇರುವಾಗ ಮೆಸೇಜ್ ಮಾಡಿದ್ರು. ನಾನು ತುಂಬಾ ಹೆವಿ ಹಾರ್ಟ್‌ನಿಂದ ಮದುವೆಯಾಗ್ತಾ ಇದ್ದೇನೆ. ಆದ್ರೆ ನೀವು ನನ್ನ ಲವ್ ಫಾರ್ ಎವರ್ ಎಂದು ಮೆಸೇಜ್ ಮಾಡಿದ್ರು. ಅದಕ್ಕೆ ನಾನು ರಿಪ್ಲೆ ಮಾಡಲು ಹೋಗಲಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.