Ranjani ನಿಮಗೆ ಗೊತ್ತಿರಬಹುದು, Raghavan ಗೊತ್ತಾ? … ಅಪ್ಪನನ್ನು ಪರಿಚಯಿಸಿದ ಕನ್ನಡತಿ

Published : Jan 28, 2026, 04:01 PM IST

ಕನ್ನಡ ಕಿರುತೆರೆ ನಟಿ, ಲೇಖಕಿ, ನಿರ್ದೇಶಕಿ ರಂಜನಿ ರಾಘವನ್ ಎಲ್ಲರಿಗೂ ಗೊತ್ತೇ ಇದೆ. ಆದರೆ ನಿಮಗೆ ಅವರ ತಂದೆಯ ಪರಿಚಯ ಇದೆಯೇ? ಇಲ್ಲಿದೆ ನೋಡಿ ರಂಜನಿ ರಾಘವನ್ ತಮ್ಮ ತಂದೆ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿ, ಅಪ್ಪನನ್ನು ಪರಿಚಯಿಸಿದ್ದಾರೆ.

PREV
16
ರಂಜನಿ ರಾಘವನ್

ಕನ್ನಡ ಕಿರುತೆರೆಯಲ್ಲಿ ಗೌರಿಯಾಗಿ, ಭುವಿಯಾಗಿ ಮಿಂಚಿದ ಚೆಲುವೆ ರಂಜನಿ ರಾಘವನ್. ಇವರು ಕೇವಲ ನಟಿಯಾಗಿ ಮಾತ್ರವಲ್ಲ, ಕಥೆಗಾರ್ತಿಯಾಗಿ, ಲೇಖಕಿಯಾಗಿ ಹಾಗೂ ಸಿನಿಮಾ ನಿರ್ದೇಶಕಿಯಾಗಿ ಗುರುತಿಸಿಕೊಂಡವರು. ಎಲ್ಲರಿಗೂ ರಂಜನಿ ಗೊತ್ತು, ಆದರೆ ಅವರ ಹೆಸರಿನ ಜೊತೆ ಸೇರಿರುವ ರಾಘವನ್ ಯಾರು ಗೊತ್ತಾ?

26
ರಂಜನಿ ನಿಮಗೆ ಗೊತ್ತಿರಬಹುದು, ರಾಘವನ್ ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಂಜನಿ ರಾಘವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಪನ ಜೊತೆಗಿನ ಫೋಟೊ ಶೇರ್ ಮಾಡಿ, ರಂಜನಿ ನಿಮಗೆ ಗೊತ್ತಿರಬಹುದು, ರಾಘವನ್ ಗೊತ್ತಾ? ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಅಪ್ಪನ ಪರಿಚಯವನ್ನು ಕೂಡ ಮಾಡಿದ್ದಾರೆ.

36
ಅಪ್ಪ ರಾಘವನ್ ಅವರನ್ನು ಪರಿಚಯಿಸಿದ್ದು ಹೀಗೆ

ನಂಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟೋದಕ್ಕೆ ಮೂಲ ಕಾರಣ ಅಪ್ಪ.ಕಲ್ಲನ್ನೂ ಮಾತನಾಡಿಸೋ ವ್ಯಕ್ತಿತ್ವ ಅವ್ರದು. ಸಾವಿರಾರು ಶ್ಲೋಕಗಳಿರೋ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮದಿಂದ ಹಿಡಿದು ಯಾವುದೋ ಕಾಲದಲ್ಲಿ ಸಿಕ್ಕವರ ಹೆಸ್ರನ್ನ ಕೂಡ ಮರೀದೇ ನೆನಪಿಟ್ಟುಕೊಳ್ಳೋ ಹಾರ್ಡ್ ಡಿಸ್ಕ್ ಅವರ ಬ್ರೈನ್. ಸೀರಿಯಸ್ ವಿಷ್ಯಾನ ವಕ್ರ ಮಾಡಿ ಹಾಸ್ಯ ಹುಡುಕೋದು ಅವರ ಸ್ಪೆಷಲ್ ಟ್ಯಾಲೆಂಟ್!

46
ಅಪ್ಪನ ಜೊತೆ ಡೇ ಔಟ್

ಸುಮಾರು ದಿನಗಳ ನಂತರ ಅಪ್ಪನನ್ನ ನಾನು ಹೊರಗೆ ಕರೆದುಕೊಂಡು ಬಂದಿದ್ದು, ಚಿಕ್ಕವಳಿದ್ದಾಗ ಅವರು ನನ್ನನ್ನ ದೂರದೂರದ ಊರಿಗೆ ಕರೆದುಕೊಂಡು ಹೋಗ್ತಿದ್ದನ್ನ ನೆನಪಿಸಿತು. ಆಗ ನಾನ್ ನಿಧಾನವಾಗಿ ನಡೀತಿದ್ದೆ, ಈಗ ಅವ್ರು ನಿಧಾನವಾಗಿ ನಡೀತಾರೆ ಎಂದು ಅಪ್ಪನ ಜೊತೆಗೆ ರಂಗಶಂಕರಕ್ಕೆ ತೆರಳಿ ‘ಮೈಸೂರು ಮಲ್ಲಿಗೆ’ ನಾಟಕ ನೋಡಿ ಬಂದುದನ್ನು ನೆನಪಿಸಿಕೊಂಡಿದ್ದಾರೆ.

56
ನಿಮ್ಮ ಪೋಷಕರ ಜೊತೆ ಸಮಯ ಕಳೆಯಿರಿ

ಅಪ್ಪನ ಬಗ್ಗೆ ಹೇಳಿಕೊಳ್ಳುವುದರ ಜೊತೆಗೆ ರಂಜನಿ, ತಮ್ಮ ಅಭಿಮಾನಿಗಳಿಗೆ ಕಿವಿ ಮಾತು ಕೂಡ ಹೇಳಿದ್ದಾರೆ. ಅಪ್ಪ ಅಮ್ಮನಿಗೆ ಯಾವಾಗ ವಯಸ್ಸಾಯ್ತು ಅನ್ನೋದೇ ಗೊತ್ತಾಗಲ್ಲ ನಮ್ ಲೈಫ್ ಅಷ್ಟು ಬ್ಯುಸಿ ಆಗಿಬಿಟ್ಟಿರ್ತೀವಿ! So, Try to spend time with your parents ಎಂದು ರಂಜನಿ ಬರೆದುಕೊಂಡಿದ್ದಾರೆ.

66
ಏನು ಮಾಡ್ತಿದ್ದಾರೆ ರಂಜನಿ

ರಂಜನಿ ರಾಘವನ್ ಸದ್ಯ ನಟನೆಯಿಂದ ದೂರ ಸರಿದು, ಇದೀಗ ಸಿನಿಮಾ ನಿರ್ದೇಶನ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನೆನಪಿರಲಿ ಪ್ರೇಮ್ ಜೊತೆ ‘ಡಿ ಢೀ ಡಿಕ್ಕಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories