ಕರ್ಣ ಸೀರಿಯಲ್ನಲ್ಲಿ ಅಪ್ಪ-ಮಗ ಒಂದಾದ ನಂತರ, ಇದೀಗ ಅಮ್ಮ-ಮಗನ ಮಿಲನದ ಕ್ಷಣ ಹತ್ತಿರವಾಗಿದೆ. ತನ್ನ ಮಗನಿಗಾಗಿ ಹಾತೊರೆಯುತ್ತಿರುವ ತಾಯಿ ಭುವನೇಶ್ವರಿಯ ಕಣ್ಣೆದುರೇ ಕರ್ಣ ಬಂದರೂ, ಅವರಿಬ್ಬರಿಗೂ ಸತ್ಯ ತಿಳಿದಿಲ್ಲ. ಕರುಳಿನ ಸಂಬಂಧದ ಈ ಸತ್ಯ ಯಾವಾಗ ಬಹಿರಂಗವಾಗುತ್ತದೆ ಎನ್ನುವುದೇ ಕಥೆಯ ತಿರುವು.
ಕರ್ಣ ಸೀರಿಯಲ್ನಲ್ಲಿ (Karna Serial) ರಮೇಶನೇ ತನ್ನ ಅಪ್ಪ ಎನ್ನುವ ಸತ್ಯ ಕರ್ಣನಿಗೆ ತಿಳಿದಿದೆ. ರಮೇಶನೇ ಈ ಸತ್ಯವನ್ನು ಹೇಳಿದ್ದು, ಇದರಿಂದ ಅಪ್ಪ-ಮಗ ಒಂದಾಗಿ ಆಗಿದೆ.
26
ಅಮ್ಮ-ಮಗ ಒಂದಾಗಬೇಕಿದೆ
ಈಗ ಏನಿದ್ದರೂ ಸೀತಾ ಉರ್ಫ್ ಭುವನೇಶ್ವರಿ ಮತ್ತು ಕರ್ಣ- ಅಮ್ಮ, ಮಗ ಒಂದಾಗಬೇಕಿದೆ. ಭುವನೇಶ್ವರಿಗೆ ಕರ್ಣನನ್ನು ನೋಡಿದಾಗ ಹೆತ್ತ ಕರುಳು ಚುರುಕ್ ಎನ್ನುತ್ತಿದೆ. ಕಣ್ಣು ಅರಿಯದಿದ್ದರೂ, ಕರುಳು ಅರಿಯುತ್ತೆ ಎನ್ನುವ ಸ್ಥಿತಿ ಆಕೆಯದ್ದು.
36
ಮಗನಿಗಾಗಿ ಭುವನೇಶ್ವರಿ ಹಾತೊರೆತ
ಇದೀಗ, ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಿಂದ ತನ್ನ ಮಗನಿಗಾಗಿ ಭುವನೇಶ್ವರಿ ಹಾತೊರೆದಿದ್ದಾಳೆ. ಮಕ್ಕಳಿಗೆ ಪ್ರಸಾದದ ರೂಪದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿಸಿ, ಮಗನಿಗಾಗಿ ಹಂಬಲಿಸಿದ್ದಾಳೆ.
ಅಲ್ಲಿಗೆ ಬಂದವನು ಕರ್ಣ. ಪೂಜೆಯ ದಿನ ನಿಮ್ಮನ್ನು ನೋಡಲು ಬಂದಿರುವೆ ಎಂದು ಕರ್ಣ ಹೇಳಿದ್ದಾನೆ. ಕೊನೆಗೆ ಊಟಕ್ಕೆ ಇಟ್ಟ ಬಾಳೆ ಎಲೆಯ ಎದುರಿಗೆ ಕುಳಿತಿದ್ದಾನೆ.
56
ಮಗನಿಗಾಗಿ ಇಟ್ಟ ಬಾಳೆಯಲ್ಲಿ ಕರ್ಣ
ಅಲ್ಲಿಗೆ ಬಂದ ಭುವನೇಶ್ವರಿಯ ಅಸಿಸ್ಟೆಂಟ್, ಏನು ತಪ್ಪು ಮಾಡಿದ್ರಿ? ಇದು ಭುವನೇಶ್ವರಿ ಅವರು ತಮ್ಮ ಮಗನಿಗಾಗಿ ಇಟ್ಟಿದ್ದು ಎಂದಾಗ ಏಳಲು ಕರ್ಣ ಮುಂದಾಗಿದ್ದಾನೆ.
66
ಕರ್ಣನ ನೋಡಿ ತಾಯಿಯ ವಾತ್ಸಲ್ಯ
ಆಗ ಭುವನೇಶ್ವರಿ, ಪರವಾಗಿಲ್ಲ. ಊಟಕ್ಕೆ ಕುಳಿತವರನ್ನು ಎಬ್ಬಿಸಬಾರದು. ಊಟ ಮಾಡು ಎಂದು ಕರ್ಣನ ಸಮೀಪ ಹೋದಾಗ, ಅವಳಿಗೆ ರೋಮಾಂಚನವಾಗಿದೆ. ಯಾವುದೋ ತಾಯಿಯ ಶಕ್ತಿ ತನ್ನನ್ನು ಸೆಳೆಯುತ್ತಿದೆ ಎಂದು ಎನ್ನಿಸಿದೆ. ಅಮ್ಮ- ಮಗ ಕಣ್ಣೆದುರೇ ಇದ್ದರೂ ಸತ್ಯ ತಿಳಿದಿಲ್ಲ. ತಿಳಿದರೆ ಮಾಲತಿಯ ಪಾಡು ಏನು ಎನ್ನೋದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.