Lakshmi Nivasa Jayanth: 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ಪಾತ್ರಧಾರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದನ್ನು ನೋಡಿ ವೀಕ್ಷಕರು ಫುಲ್ ಕನ್‌ಫ್ಯೂಸ್ ಆಗಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ...
ಸೀರಿಯಲ್ ಪ್ರೇಕ್ಷಕರಲ್ಲಿ ಗೊಂದಲ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಲಕ್ಷ್ಮೀ ನಿವಾಸ'ದಲ್ಲಿ ಜಯಂತ್ ಪಾತ್ರ ಎಲ್ಲರ ಗಮನ ಸೆಳೆದಿದೆ. ಸೈಕೋ ರೀತಿಯಲ್ಲಿ ವರ್ತಿಸುತ್ತಾ ಜಾಹ್ನವಿ (ಜಾನು) ಮೇಲೆ ಜಯಂತ್ ತೋರಿಸುವ ಹುಚ್ಚು ಪ್ರೀತಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಹೀಗಿರುವಾಗ, ಜಯಂತ್ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸೀರಿಯಲ್ ಪ್ರೇಕ್ಷಕರಲ್ಲಿ ಭಾರೀ ಗೊಂದಲ ಉಂಟುಮಾಡಿದೆ.
24
ವೈರಲ್ ವಿಡಿಯೋದ ಅಸಲಿ ಕಥೆಯೇನು?
ವೈರಲ್ ವಿಡಿಯೋದ ಅಸಲಿ ಕಥೆಯೇನು? ಜಯಂತ್ ಜಾನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದ್ರಾ? ಅಥವಾ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ತಾ? ಎಂದು ತಲೆಕೆಡಿಸಿಕೊಂಡವರಿಗೆ ಇಲ್ಲಿದೆ ಉತ್ತರ. ವಾಸ್ತವವಾಗಿ ಇದು 'ಲಕ್ಷ್ಮೀ ನಿವಾಸ' ಧಾರಾವಾಹಿಯ ದೃಶ್ಯವೇ ಅಲ್ಲ! ಬದಲಿಗೆ, ಕಿರು-ನಾಟಕಗಳನ್ನು (Micro-drama) ಒದಗಿಸುವ 'ಬುಲೆಟ್' (Bullet) ಎಂಬ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿರುವ 'ಲವ್ ಫಾರ್ ಸೇಲ್' (Love for Sale) ಎಂಬ ಸರಣಿಯ ವಿಡಿಯೋ.
34
ಕಥೆ ಏನು?
ಕಥೆ ಏನು? ಈ ಮೈಕ್ರೋ-ಡ್ರಾಮಾದಲ್ಲೂ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಅವರು ದೊಡ್ಡ ಕಂಪನಿಯ ಸಿಇಒ ಪಾತ್ರದಲ್ಲಿ ಮಿಂಚಿದ್ದಾರೆ. ಕಥೆಯ ಪ್ರಕಾರ, ತಾತನ ಬಲವಂತಕ್ಕೆ ಒಂದು ಹುಡುಗಿಯನ್ನು ಮದುವೆಯಾಗುತ್ತಾರೆ. ಆದರೆ, ಆಕೆ ತನ್ನನ್ನು ಪ್ರೀತಿಸಿ ಮದುವೆಯಾಗಿದ್ದಾಳೋ ಅಥವಾ ತನ್ನ ಆಸ್ತಿ ಮತ್ತು ದುಡ್ಡಿಗಾಗಿ ಮದುವೆಯಾಗಿದ್ದಾಳೋ ಎಂಬ ಅನುಮಾನದಲ್ಲಿ ಸತ್ಯ ಹುಡುಕಲು ಹೊರಡುವ ಕಥಾಹಂದರ ಇದಕ್ಕಿದೆ.
ದೀಪಕ್ - ಸಾರಾ ಅಣ್ಣಯ್ಯ ಹೊಸ ಜೋಡಿ! ವಿಶೇಷವೆಂದರೆ, ಈ ಸರಣಿಯಲ್ಲಿ ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ 'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ನಟಿಸಿದ್ದಾರೆ. ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಸರಣಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಮುಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂದು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಜಾನು ಬಿಟ್ಟು ಜಯಂತ್ ಇನ್ನೊಂದು ಮದುವೆಯಾದ ಎಂಬ ಗೊಂದಲಕ್ಕೆ ಈಗ ಸ್ಪಷ್ಟ ತೆರೆ ಬಿದ್ದಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.