ತಮಿಳು ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರು ಗೋಡೆ ಹಾರಿ ಪಲಾಯನ ಮಾಡಲು ಯತ್ನಿಸಿರುವುದು ಭಾರೀ ಸದ್ದು ಮಾಡುತ್ತಿದೆ. 'ಕುಕ್ ವಿತ್ ಕೋಮಾಲಿ' ಖ್ಯಾತಿಯ ಅನ್ಸಾರ್ ಈ ರೀತಿ ಮಾಡಿದ್ದು, ಇದು ಟಿಆರ್ಪಿಗಾಗಿ ಮಾಡಿದ ಸ್ಕ್ರಿಪ್ಟೆಡ್ ನಾಟಕವೇ ಎಂಬ ಚರ್ಚೆ ಶುರುವಾಗಿದೆ.
ಈಗ ಆರು ಭಾಷೆಗಳಲ್ಲಿ ಬಿಗ್ಬಾಸ್ (Bigg Boss) ಶುರುವಾಗಿದೆ. ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಮೊದಲ ದಿನವೇ ಜಟಾಪಟಿ ಶುರುವಾಗಿದೆ. ಇಂಥ ಸನ್ನಿವೇಶವನ್ನು ಬಿಗ್ಬಾಸ್ ಕ್ರಿಯೇಟ್ ಮಾಡುವುದು ಸಹಜ. ಕಿರುಚಾಟ, ಕೂಗಾಟ, ಹಾರಾಟವೇ ಈ ಷೋನ ಹೈಲೈಟ್ ಆಗಿದ್ದು, ಜನರಿಗೂ ಇದೇ ಬೇಕಿರುವ ಕಾರಣದಿಂದಾಗಿ, ಇಂಥ ದೃಶ್ಯಗಳನ್ನು ಕ್ರಿಯೇಟ್ ಮಾಡುವುದು ಮಾಮೂಲು. ಅದೇ ರೀತಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಸ್ಪರ್ಧಿಗಳ ನಡುವೆ ಜಟಾಪಟಿ ಶುರುವಾಗಿದೆ.
26
ಗೋಡೆ ಹಾರಿದ ಸ್ಪರ್ಧಿ
ಇದೀಗ ತಮಿಳಿನ ಬಿಗ್ಬಾಸ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಸ್ಪರ್ಧಿಯೊಬ್ಬರು Bigg Boss ಗೋಡೆ ಹಾರಿ ಹೋಗಲು ಪ್ರಯತ್ನಿಸಿರುವುದು. ವಿಜಯ್ ಸೇತುಪತಿ ನಿರೂಪಣೆಯ ಈ ಕಾರ್ಯಕ್ರಮದಲ್ಲಿ 19 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ್ದಾರೆ. ಇವರಲ್ಲಿ 'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದ ಅನ್ಸಾರ್ ಕೂಡ ಒಬ್ಬರು.
36
ಹಿಂದೆಯೂ ಆಗಿತ್ತು!
ಎರಡನೆಯ ದಿನವೇ ಅನ್ಸಾರ್ , ಮನೆಯಿಂದ ಹೊರಹೋಗಲು ಪ್ರಯತ್ನಿಸಿದರು. ಇದಕ್ಕಾಗಿ ಗೋಡೆ ಹಾರಲು ಪ್ರಯತ್ನಿಸಿರುವ ವಿಡಿಯೋಗಳು ಸೋಷಿಷಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹಿಂದೆ ತಮಿಳು ಬಿಗ್ ಬಾಸ್ ಸೀಸನ್ 1 ರಲ್ಲಿ ನಟ ಭರಣಿ ಅವರು ಗೋಡೆ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಅದೇ ಮಾದರಿಯಲ್ಲಿ ಅನ್ಸಾರ್ ಕೂಡ ಮನೆಯಿಂದ ಓಡಿಹೋಗಲು ಯತ್ನಿಸಿದ್ದಾರೆ.
ಅನ್ಸಾರ್ ಈ ರೀತಿ ಹಠಾತ್ತನೆ ಈ ರೀತಿ ಮಾಡಲು ಕಾರಣ ಇನ್ನೂ ತಿಳಿದಿಲ್ಲ. ಆದರೆ, ಇವೆಲ್ಲವೂ ಉದ್ದೇಶಪೂರ್ವಕವಾಗಿ ನಡೆದದ್ದು, ಷೋಗೆ ಟಿಆರ್ಪಿ ಬರುವುದಕ್ಕಾಗಿ ಇಂಥವುಗಳನ್ನು ಸ್ಕ್ರಿಪ್ಟೆಡ್ ಮಾಡಲಾಗುತ್ತದೆ. ಇವುಗಳನ್ನು ನೋಡಿ ಜನರು ನಿಜ ಎಂದು ನಂಬಿ ಬಾಯಿಬಿಟ್ಟು ನೋಡುತ್ತಾರೆ. ಈ ಮೂಲಕ, ಎಲ್ಲೆಡೆ ಷೋ ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂದೆಲ್ಲಾ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
56
ನಾಯಕತ್ವದ ಅಸಮಾಧಾನನಾ?
'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅನ್ಸಾರ್ ಬಹಳ ಪ್ರಸಿದ್ಧರಾದರು. ಇದಲ್ಲದೇ, ಅನ್ಸಾರ್ ಅನೇಕ ಟಿವಿ ಕಾರ್ಯಕ್ರಮಗಳೊಂದಿಗೆ ಉತ್ತಮ ಮನ್ನಣೆ ಗಳಿಸಿದ್ದಾರೆ. ಅದೇ ಕ್ರೇಜ್‌ನೊಂದಿಗೆ, ಅವರು ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸಹ ಸ್ಪರ್ಧಿ ಜೇಸನ್ ಜೊತೆಗಿನ ಜಗಳಗಳು ಮತ್ತು ನಾಯಕತ್ವದ ಬಗ್ಗೆ ಚರ್ಚೆಗಳಿಂದಾಗಿ ಅನ್ಸಾರ್ ಅಸಮಾಧಾನಗೊಂಡಿದ್ದಾರೆ ಎಂದು ತೋರುತ್ತದೆ.
66
ಏನಿದು ಕುಕ್ ವಿತ್ ಕೋಮಾಲಿ'
ಅಂದಹಾಗೆ, ಕುಕ್ ವಿತ್ ಕೋಮಾಲಿ' (Cooku with Comali / CWC) ಎಂಬುದು ತಮಿಳು ಭಾಷೆಯ ಅತ್ಯಂತ ಜನಪ್ರಿಯ ಹಾಸ್ಯ ಆಧರಿತ ಅಡುಗೆ ರಿಯಾಲಿಟಿ ಶೋ ಆಗಿದೆ. ಇದೊಂದು ರೀತಿಯಲ್ಲಿ ಕಲರ್ಸ್ ಕನ್ನಡದಲ್ಲಿ ಬರುವ ಕ್ವಾಟ್ಲೆ ಕಿಚನ್ ರಿಯಾಲಿಟಿ ಷೋ ರೀತಿ. ಈ ಷೋ ಮೂಲಕ ಪ್ರಸಿದ್ಧಿ ಪಡೆದವರು ಅನ್ಸಾರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.