Published : Oct 14, 2025, 01:03 AM ISTUpdated : Oct 14, 2025, 01:08 AM IST
Karna Serial Episode: ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ತೇಜಸ್ ಹಾಗೂ ನಿತ್ಯಾ ಮದುವೆ ಶಾಸ್ತ್ರವೆಲ್ಲ ನಡೆದಿದೆ. ಕಾಶಿಯಾತ್ರೆಯೂ ಆಗಿದೆ. ನಿತ್ಯಾ ಅಂತೂ ಬಂಗಾರದ ಬಣ್ಣದ ಸೀರೆ ಉಟ್ಟು ಗೊಂಬೆ ಥರ ಕಂಗೊಳಿಸುತ್ತಿದ್ದಳು. ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕಿದ್ದ ನಿತ್ಯಾ ಮದುವೆಯು ಮುರಿದು ಬಿದ್ದಿದೆ.
ಹುಡುಗ ಕಾಶೀಯಾತ್ರೆ ಮುಗಿಸಿದ್ದಾನೆ. ಅಲ್ಲಿಯವರೆಗೆ ಎಲ್ಲ ಶಾಸ್ತ್ರವೂ ಆಗಿದೆ. ಇನ್ನೇನು ಮದುವೆ ಮಂಟಪಕ್ಕೆ ಬರಬೇಕು ಎನ್ನುವಷ್ಟರಲ್ಲಿ ತೇಜಸ್ ಹಾಗೂ ಅವನ ತಂದೆ-ತಾಯಿ ಇಬ್ಬರೂ ಕಾಣಿಸುತ್ತಿಲ್ಲ. ಎಲ್ಲ ಕಡೆ ಹುಡುಕಿದರೂ ಕೂಡ ಅವನ ಸುಳಿವಿಲ್ಲ. ಆಗ ಕರ್ಣನ ತಂದೆ ಎನಿಸಿಕೊಂಡವನು ಕುಹಕ ನಗೆ ಆಡಿದ್ದಾನೆ.
27
ನಿತ್ಯಾ ಬಗ್ಗೆ ಕೊಂಕುನುಡಿದ ಹೀನಾಯ ಮನಸ್ಥಿತಿಯುಳ್ಳವರು
ಮದುವೆ ಮಂಟಪಕ್ಕೆ ಬಂದಾಗ, ಹಸೆಮಣೆಯಲ್ಲಿ ಕೂತಾಗ ಮದುವೆ ಮುರಿದರೆ ಹುಡುಗನಿಗಿಂತ ಜಾಸ್ತಿ ಹುಡುಗಿಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಕಾಶೀಯಾತ್ರೆ ಮುಗಿಸಿದ ಬಳಿಕ ಹುಡುಗ ಕಾಣೆ ಆಗಿದ್ದಾನೆ ಎಂದು ನಿತ್ಯಾ ಬಗ್ಗೆ ಎಲ್ಲರೂ ಬಾಯಿಗೆ ಬಂದಹಾಗೆ ಮಾತನಾಡಿದರು. ಇದು ನಿತ್ಯಾ ಅಜ್ಜಿಗೆ ಸಿಕ್ಕಾಪಟ್ಟೆ ಬೇಸರ ತಂದಿತು.
37
ನಿತ್ಯಾ ಮದುವೆ ಮುರಿದು ಬಿತ್ತು
ಮಗಳ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಜ್ಜಿಗೆ ಈಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ, ಭೂಮಿ ಕುಸಿದಿದೆ. ಮಗ-ಸೊಸೆ ಬೇಗ ಇಹಲೋಕ ತ್ಯಜಿಸಿದರೂ ಕೂಡ, ಕಷ್ಟಪಟ್ಟು ಅವಳು ಇಬ್ಬರು ಮೊಮ್ಮಕ್ಕಳನ್ನು ಸಾಕಿದ್ದಳು. ಈಗ ಅವರನ್ನು ಮದುವೆ ಮಾಡಿಕೊಟ್ಟರೆ ನನ್ನ ಜವಾಬ್ದಾರಿ ಮುಗಿಯಿತು, ಆಮೇಲೆ ಸತ್ತರೂ ತೊಂದರೆ ಇಲ್ಲ ಎಂದು ಭಾವಿಸಿದ್ದಳು. ಆದರೆ ಈಗ ನಿತ್ಯಾ ಮದುವೆ ಮುರಿದು ಹೋಯಿತು. ನಿತ್ಯಾ ಪ್ರೀತಿಸಿದ್ದ ಹುಡುಗನೇ ಮೋಸ ಮಾಡಿದ್ದನು.
ಜನರು ಬಾಯಿಗೆ ಬಂದಂತೆ ಮಾತಾಡಿದ್ದು ಕೇಳಿ ಕಣ್ಣೀರು ಹಾಕಿದ ಅಜ್ಜಿ
ಆಮೇಲೆ ಅಜ್ಜಿ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದಾರೆ. ಅಲ್ಲಿದ್ದವರ ಬಳಿ ಹೋಗಿ, “ನಿತ್ಯಾ ನನ್ನ ಮೊಮ್ಮಗಳು, ಸುಂದರವಾದ ಹುಡುಗಿ, ಓದಿಕೊಂಡಿದ್ದಾಳೆ, ತುಂಬ ಚೆನ್ನಾಗಿ ದುಡಿಯುತ್ತಿದ್ದಾಳೆ, ನಿಮ್ಮ ಮನೆಗೆ ಸೊಸೆಯನ್ನು ಮಾಡಿಕೊಳ್ಳಿ” ಎಂದು ಗೋಳಿಟ್ಟಿದ್ದಾಳೆ. ಅವಳ ಮಾತು ಕೇಳಿದವರು, “ಕಾಶಿಯಾತ್ರೆ ಮುಗಿಸಿ ಹುಡುಗ ನಾಪತ್ತೆ ಅಂದರೆ ದೊಡ್ಡ ಸಮಸ್ಯೆ ಆಗಿರಬೇಕು, ನಮಗೆ ನಿಮ್ಮ ಮೊಮ್ಮಗಳು ಬೇಡ” ಎಂದು ಕಡ್ಡಿ ಮುರಿದಂತೆ ಹೇಳಿದ್ದರು.
57
ಪೆಟ್ರೋಲ್ ಹಾಕಿದ ಅಜ್ಜಿ
ಮದುವೆಗೆ ಬಂದವರು ಬಾಯಿಗೆ ಬಂದಹಾಗೆ ಬೈತಿದ್ದಾರೆ, ನಿಂದನೆ ಮಾಡುತ್ತಿದ್ದಾರೆ, ಮೊದಲೇ ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡೋದು ಕಷ್ಟ, ಅಂಥದರಲ್ಲಿ ಈ ರೀತಿ ಮಾತಾಡಿದರೆ ಮತ್ತೆ ನನ್ನ ಮೊಮ್ಮಗಳನ್ನು ಯಾರು ಮದುವೆ ಆಗ್ತಾರೆ ಎಂದು ಶಾಂತಿ ಪೆಟ್ರೋಲ್ ತಂದು ನಿತ್ಯಾ ಮೈಮೇಲೆ ಸುರಿದಿದ್ದಾಳೆ, ನಾನು ಸಾಯ್ತೀನಿ ಎಂದು ತನ್ನ ಮೈಮೇಲೂ ಸುರಿದುಕೊಂಡಿದ್ದಾಳೆ. ಅವಳ ಹುಚ್ಚಾಟವನ್ನು ನಿಧಿ ಹಾಗೂ ಕರ್ಣ ಬಿಡಿಸಲು ನೋಡಿದ್ದಾರೆ.
67
ಸಮಾಧಾನ ಮಾಡಿದ ಕರ್ಣ, ನಿಧಿ
“ನೀವು ದುಡುಕಿ ನಿರ್ಧಾರ ತಗೋಬೇಡಿ, ಆ ರೀತಿ ಮಾಡಬೇಡಿ” ಎಂದು ಕರ್ಣ, ನಿಧಿ ಹೇಳಿದರೂ ಕೂಡ ಇವರು ಕೇಳಲು ರೆಡಿ ಇಲ್ಲ. ಒಟ್ಟಿನಲ್ಲಿ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
77
ಬೇಸರದ ಎಪಿಸೋಡ್
ಒಂದು ಮದುವೆ ಮಾಡುವುದು ಎಷ್ಟು ಕಷ್ಟ? ಅಂಥಹದರಲ್ಲಿ ನಿತ್ಯಾ ತಾನು ಪ್ರೀತಿಸಿದ್ದ ಹುಡುಗನ ಜೊತೆ ಮದುವೆ ಆಗುವ ಕನಸು ಕಂಡಿದ್ದಳು. ಎಲ್ಲ ಶಾಸ್ತ್ರವೂ ಪರ್ಫೆಕ್ಟ್ ಆಗಿ ನಡೆದಿತ್ತು. ಹಿರಿ ಮೊಮ್ಮಗಳು ಮದುವೆ ಆದರೆ, ಆಮೇಲೆ ಕಿರಿಯವಳು, ನನ್ನ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವಾಗಲೇ ಹೀಗೆ ಆಗಿದೆ.