ಕರ್ಣ ಸೀರಿಯಲ್ ನಲ್ಲಿ ನಿತ್ಯಾ ಮದುವೆ ಸಂಭ್ರಮ ಮನೆ ಮಾಡಿದೆ. ನಿತ್ಯಾಗೆ ಅರಿಶಿನ ಶಾಸ್ತ್ರ ನಡೆಯುತ್ತಿದೆ. ಮೊದಲೇ ಮದುವೆ ಪ್ರೋಮೋ ನೋಡಿದ ಫ್ಯಾನ್ಸ್ ಗೆ ಯಾಕೋ ಮುಂದಿನ ಸತ್ಯ ಅರಗಿಸಿಕೊಳ್ಳೋಕಾಗ್ತಿಲ್ಲ.
ಗುರುವಾರ ಬರ್ತಿದ್ದಂತೆ ಕರ್ಣ ಸೀರಿಯಲ್ (Karna Serial) ವೀಕ್ಷಕರ ಕೋಪ ಯಾಕೋ ನೆತ್ತಿಗೇರಿದೆ. ಸೀರಿಯಲ್ ಪ್ರೋಮೋ ವೀಕ್ಷಕರ ಕೋಪವನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಜೀ ಕನ್ನಡದಲ್ಲಿ ಪ್ರೋಮೋ ಮೂಲಕ ಧೂಳೆಬ್ಬಿಸಿದ್ದ ಕರ್ಣ ಸೀರಿಯಲ್ ಜನರಿಗೆ ಬಹಳ ಆಪ್ತವಾಗಿದೆ. ಕರ್ಣ – ನಿಧಿ ರೋಮ್ಯಾನ್ಸ್ ಜನರನ್ನು ಸೆಳೆದಿದೆ. ನಿಧಿ ಹಾಗೂ ಅಕ್ಕ ನಿತ್ಯಾ ಬಾಂಡಿಂಗ್ ಕೂಡ ಜನರ ಮೆಚ್ಚುಗೆ ಗಳಿಸಿದೆ. ಆದ್ರೆ ಒಂದೇ ಒಂದು ಪ್ರೋಮೋ ಜನರ ಕೋಪಕ್ಕೆ ಕಾರಣವಾಗಿದೆ. ವಾರದ ಹಿಂದೆ ಜೀ ಕನ್ನಡ ಪ್ರಸಾರ ಮಾಡಿದ್ದ ಕರ್ಣನ ಮದುವೆ ಪ್ರೋಮೋ ನೋಡಿದ ಜನರು ಬೇಸರಗೊಂಡಿದ್ದಾರೆ. ಏನು ಅಂದ್ಕೊಂಡಿದ್ವೋ ಅದೇ ಆಗ್ತಿದೆ ಎನ್ನುವ ಬೇಸರದಲ್ಲಿ ವೀಕ್ಷಕರಿದ್ದಾರೆ.
ಯಾರನ್ನು ಮದುವೆ ಆಗ್ತಾನೆ ಕರ್ಣ? :
ಕರ್ಣ ಸೀರಿಯಲ್ ನಲ್ಲಿ ಸದ್ಯ ನಿತ್ಯನ ಮದುವೆ ಸಂಭ್ರಮ. ಅನೇಕ ಗೊಂದಲಗಳ ನಂತ್ರ ನಿತ್ಯಾಗೆ ಮದುವೆ ಆಗ್ತಿದೆ. ಪ್ರೇಮಿ ಸೂರಜ್ ಕೈ ಹಿಡಿಯಲಿದ್ದಾಳೆ ನಿತ್ಯ. ಮದುವೆಯ ಎಲ್ಲ ಶಾಸ್ತ್ರಗಳನ್ನು ಮನೆಯವರು ಸಡಗರ- ಸಂಭ್ರಮದಿಂದ ಮಾಡ್ತಿದ್ದಾರೆ. ಅಕ್ಕನ ಮದುವೆಯನ್ನು ನಿಧಿ ಎಂಜಾಯ್ ಮಾಡ್ತಿದ್ದಾಳೆ. ಕರ್ಣ ಕೂಡ ನಿಧಿ ಪ್ರೀತಿಯಲ್ಲಿ ತೇಲ್ತಾ, ಮದುವೆ ಕನಸು ಕಾಣ್ತಿದ್ದಾನೆ. ಸದ್ಯ ಕಲರ್ಸ್ ಕನ್ನಡ ಪ್ರಸಾರ ಮಾಡಿರುವ ಪ್ರೋಮೋದಲ್ಲಿ ನಿತ್ಯನಿಗೆ ಅರಿಶಿನ ಶಾಸ್ತ್ರ ನಡೆಯುತ್ತಿದೆ. ಮೊಮ್ಮಗಳಿಗೆ ಅರಿಶಿನ ಹಚ್ಚಿದ ಅಜ್ಜಿ, ನೂರು ಕಾಲ ಸುಖವಾಗಿ ಬಾಳು ಅಂತ ಹರಸಿದ್ದಾರೆ. ಅರಿಶಿನ ಹಚ್ಚಿಕೊಳ್ಳದೆ, ಹುಡುಗನಿಗಾಗಿ ಕಾಯ್ತಿದ್ದ ನಿಧಿ ಕೆನ್ನೆಗೆ ಕರ್ಣನ ಅರಿಶಿನ ಬಿದ್ದಿದೆ. ಈ ಮಧ್ಯೆ ಕರ್ಣನ ಅಮ್ಮ ಪತ್ರವನ್ನು ಬರೆದು, ಸತ್ಯವೊಂದನ್ನು ಹೇಳುವ ಪ್ರಯತ್ನ ಮಾಡಿದ್ದಾಳೆ. ಕರ್ಣನ ಕೈಗೆ ಅಮ್ಮನ ಪತ್ರ ಸಿಕ್ಕಿದೆ. ಮುಂದೇನು? ಈ ಪ್ರಶ್ನೆಗೆ ವೀಕ್ಷಕರು ಕಾಯ್ಲೇಬೇಕು. ಕರ್ಣ ಯಾರನ್ನು ಮದುವೆ ಆಗ್ತಾನೆ ಎಂಬುದು ಸೀರಿಯಲ್ ನೋಡಿದ್ಮೇಲೆ ತಿಳಿಯಲಿದೆ.
ರುಚಿ ರುಚಿ ಅಡುಗೆ ಮಾಡಿ, ಅನುಶ್ರೀಗೆ ಮುತ್ತಿಟ್ಟು ತುತ್ತು ನೀಡಿದ ಪತಿ
ಏನಂತಾರೆ ವೀಕ್ಷಕರು? :
ಪ್ರೋಮೋ ನೋಡಿದ ಫ್ಯಾನ್ಸ್ ಕರ್ಣ ಸೀರಿಯಲ್ ಮೇಲೆ ಸ್ವಲ್ಪ ಮುನಿಸಿಕೊಂಡಿದ್ದಾರೆ. ಕರ್ಣ, ನಿಧಿ ಬಿಟ್ಟು ನಿತ್ಯಾಳನ್ನು ಮದುವೆ ಆಗ್ತಾನೆ ಅನ್ನೋದೇ ಅವರ ಅಸಮಾಧಾನಕ್ಕೆ ಕಾರಣ. ಜನರು ಕರ್ಣ ಹಾಗೂ ನಿಧಿ ಜೋಡಿಯನ್ನು ಇಷ್ಟಪಡ್ತಾರೆ. ನಿತ್ಯ ಜೊತೆ ಕರ್ಣನ ಮದುವೆ ಆದ್ರೆ ಯಾರೂ ಸೀರಿಯಲ್ ನೋಡೋದಿಲ್ಲ ಎನ್ನುತ್ತಿದ್ದಾರೆ ವೀಕ್ಷಕರು. ಈ ವಿಷ್ಯಕ್ಕೆ ವೀಕ್ಷಕರಲ್ಲಿಯೇ ಭಿನ್ನಾಭಿಪ್ರಾಯವಿದೆ. ಕರ್ಣ ಹಾಗೂ ನಿಧಿ ಇಬ್ರೇ ಸೀರಿಯಲ್ ನಲ್ಲಿದ್ರೆ ಜನಕ್ಕೆ ಸೀರಿಯಲ್ ನೋಡೋ ಆಸಕ್ತಿ ಇರ್ತಿರಲಿಲ್ಲ. ಬರೀ ಲವ್ ಸ್ಟೋರಿ ಯಾರು ನೋಡ್ತಾರೆ. ಟ್ವಿಸ್ಟ್ ಇದೆ, ಕರ್ಣ – ನಿಧಿ ಮಧ್ಯೆ ನಿತ್ಯಾ ಬಂದಿದ್ದಾಳೆ. ಮುಂದೆ ಏನಾಗುತ್ತೆ ಕಾದು ನೋಡಿ ಎನ್ನುವ ವೀಕ್ಷಕರ ಸಂಖ್ಯೆಯೂ ಸಾಕಷ್ಟಿದೆ. ಶ್ರೀಮಂತ ಕುಟುಂಬದ ಬಡ ಹುಡುಗ ಕರ್ಣನ ಕಥೆಯನ್ನು ಜನರು ಇಷ್ಟಪಟ್ಟಿದ್ದಾರೆ. ಕಲಾವಿದರ ನಟನೆಯನ್ನು ಮೆಚ್ಚಿದ್ದಾರೆ. ಆದ್ರೆ ಎಡಿಟಿಂಗ್ ಇಷ್ಟವಾಗ್ತಿಲ್ಲ ಎನ್ನುವ ಕಮೆಂಟ್ ಜನರಿಂದ ಬರ್ತಿದೆ.
Bigg Boss Kannada 12: ಮತ್ತೆ ಶುರುವಾಯ್ಟು ಬಿಗ್ ಬಾಸ್ ಆಟ, ಡಿಕೆಶಿಗೆ ಥ್ಯಾಂಕ್ಸ್ ಎಂದ ಕಿಚ್ಚು ಸುದೀಪ್
ವೀಕ್ಷಕರೇ ಕರ್ಣ ಸೀರಿಯಲ್ ಕಥೆ ಹೆಣೆಯಲು ಶುರು ಮಾಡಿದ್ದಾರೆ. ಪ್ರೇಕ್ಷಕರಿಂದ ಕರ್ಣ – ನಿತ್ಯಾ ಮದುವೆಗೆ ವಿರೋಧ ಬರ್ತಿದೆ, ಕಥೆ ಬದಲಿಸಿ ಎನ್ನುವ ಮಾತುಗಳನ್ನೂ ಜನರು ಆಡ್ತಿದ್ದಾರೆ. ಈ ಮಧ್ಯೆ ಕರ್ಣನಿಗೆ ಯಾರು ಇಷ್ಟ ಎನ್ನುವ ಪ್ರಶ್ನೆಗೆ ಕಿರಣ್ ರಾಜ್ ಜಾಣತನದ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಕರ್ಣ ಕೊನೆಯಲ್ಲಿ ಯಾರನ್ನು ಮದುವೆ ಆಗ್ತಾನೆ ಎಂಬುದನ್ನು ತಿಳಿಯಲು ವೀಕ್ಷಕರು ಕಾಯ್ಲೇಬೇಕು.
