ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ತನ್ನನ್ನು ಬಿಟ್ಟು ದಿಯಾಳನ್ನು ಮದುವೆ ಆದ್ಮೇಲೆ ಮಲ್ಲಿ ತನ್ನ ತಂದೆ ಆಸ್ತಿಯನ್ನು ಏನು ಮಾಡಿದಳು ಎನ್ನೋದು ರಿವೀಲ್ ಆಗಲಿಲ್ಲ. ಆ ಬಳಿಕ ಅವಳು ಭೂಮಿಕಾ ಜೊತೆ ಇದ್ದಾಳೆ, ಐಎಎಸ್ ಓದುತ್ತಿರುವ ಅವಳು 2ನೇ ಮದುವೆ ಕೂಡ ಆಗ್ತಿಲ್ಲ. ಈಗ ಅವಳ ಮಹದಾಸೆ ಏನು ಏನು?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ಒಂದಾಗಬೇಕು, ಆಕಾಶ್‌ಗೆ ಅವನ ಅಜ್ಜ-ಅಜ್ಜಿ, ಅತ್ತೆ-ಮಾವ ಎಲ್ಲರ ಪ್ರೀತಿಯೂ ಸಿಗಬೇಕು, ಅವನಿಗೂ ದೊಡ್ಡ ಕುಟುಂಬ ಇದೆ ಎನ್ನೋದು ಗೊತ್ತಾಗಬೇಕು ಎಂದು ಮಲ್ಲಿ ಬಯಸುತ್ತಿದ್ದಾಳೆ. ಇದಕ್ಕಾಗಿ ಅವಳಿಗೆ ಕಾವೇರಿ ಸಹಾಯ ಮಾಡುತ್ತಿದ್ದಾಳೆ.
26
ಮಲ್ಲಿಗೆ ಎಚ್ಚರಿಕೆ ಕೊಟ್ಟಿದ್ದ ಭೂಮಿಕಾ
ಕುಟುಂಬದಿಂದ ದೂರ ಇರಬೇಕು, ಯಾರಿಗೂ ನಾವು ಇಲ್ಲಿರೋದು ಗೊತ್ತಾಗಿಲ್ಲ ಎಂದು ಭೂಮಿ, ಮಲ್ಲಿಗೆ ಎಚ್ಚರಿಕೆ ಕೊಟ್ಟಿದ್ದಳು. ಭೂಮಿ ತಂದೆ-ತಾಯಿ ಬಳಿ ಆಕಾಶ್‌ನನ್ನು ಬಿಟ್ಟು ಬಂದಿದ್ದಳು. ಆಕಾಶ್‌ಗೆ ಅವರು ಯಾರು ಅಂತ ಗೊತ್ತಿರಲಿಲ್ಲ, ಇತ್ತ ಅಪ್ಪ ಅಮ್ಮನಿಗೂ ಕೂಡ ಇವನು ತನ್ನ ಸ್ವಂತ ಮೊಮ್ಮಗ ಇವನೇ ಅಂತ ಗೊತ್ತಾಗದೆ ಒಟ್ಟಿಗೆ ಒಂದಿಷ್ಟು ಹೊತ್ತು ಆಡಿದ್ದರು.
36
ಕಾವೇರಿ ವಠಾರದಲ್ಲಿ ಗೌತಮ್ ಇದ್ದಾನೆ
ಭೂಮಿ ಕೋಪ ಕರಗಿ, ಗೌತಮ್ ಬಾವನ ಜೊತೆ ಒಂದಾಗಬೇಕು ಎಂದು ಮಲ್ಲಿ ಅಂದುಕೊಂಡಿದ್ದಾಳೆ. ಇದೇ ಅವಳ ಜೀವನದ ಮಹದಾಸೆ, ಧ್ಯೇಯ ಆಗಿದೆ. ಅಕ್ಕ ಬಾವ ದೂರ ಆಗಿದ್ದಾರೆ ಎಂದು ಮಲ್ಲಿ ಬೇಸರ ಮಾಡಿಕೊಂಡಿದ್ದಳು. ಅದೇ ಸಮಯಕ್ಕೆ ಅವಳಿಗೆ ಭೂಮಿ ಗೆಳತಿ ಕಾವೇರಿಯ ಪರಿಚಯ ಆಗಿದ್ದು, ಭೇಟಿಯೂ ಆಗಿದೆ. ಆಗ ಕಾವೇರಿಯು ನಮ್ಮ ವಠಾರದಲ್ಲಿ ಗೌತಮ್ ಇದ್ದಾರೆ ಎಂದು ಹೇಳಿದ್ದಾಳೆ.
“ಗೌತಮ್ ಕೆಲ ವರ್ಷಗಳಿಂದ ನಮ್ಮ ವಠಾರದಲ್ಲಿದ್ದಾರೆ. ಎಲ್ಲರಿಗೂ ಇವರನ್ನು ಕಂಡರೆ ತುಂಬ ಇಷ್ಟ” ಎಂದು ಕಾವೇರಿ ಹೇಳಿದ್ದಳು. ಭೂಮಿಕಾ ಹಾಗೂ ಗೌತಮ್ ಯಾಕೆ ದೂರ ಇದ್ದಾರೆ ಎಂದು ಕಾವೇರಿಗೆ ಪ್ರಶ್ನೆ ಬಂದಿದೆ, ಆದರೂ ಅವಳಿಗೆ ಮಲ್ಲಿಯಿಂದ ಸಂಪೂರ್ಣವಾದ ಉತ್ತರ ಸಿಕ್ಕಿಲ್ಲ.
56
ಅಕ್ಕ-ಬಾವ ಒಂದೇ ಕಡೆ ಇರಬೇಕು
“ನಿಮ್ಮ ವಠಾರದಲ್ಲಿ ನಮ್ಮ ಅಕ್ಕ ಇದ್ದರೆ ಅವನ ಮನಸ್ಸು ಕರಗಿ ಒಂದಾಗುತ್ತಿದ್ದರು. ನಿಮ್ಮ ವಠಾರದಲ್ಲಿ ಮನೆ ಇದ್ರೆ ಹೇಳಿ, ನಾವು ಬರ್ತೀವಿ” ಎಂದು ಮಲ್ಲಿ ಹೇಳಿದ್ದಳು. ಇನ್ನು ನಾವು ಶಿಫ್ಟ್ ಆಗಿರೋ ಬಾಡಿಗೆ ಮನೆಗೆ ಅಗ್ರಿಮೆಂಟ್ ಆಗಿಲ್ಲ, ಹೀಗಾಗಿ ಮನೆ ಖಾಲಿ ಮಾಡಿ ಅಡ್ವಾನ್ಸ್ ತಗೊಂಡು ಬರ್ತೀನಿ" ಎಂದು ಮಲ್ಲಿ ಹೇಳಿದ್ದಾಳೆ.
66
ಹೆಸರು ಬದಲಾಯಿಸಿಕೊಳ್ತೀನಿ ಎಂದ ಮಲ್ಲಿ
ಹೀಗಾಗಿ ಮನೆ ಓನರ್ ಬಳಿ, ನೀರು ಖಾಲಾಗಿದೆ ಎಂದು ಜಗಳ ಆಡಿ ಮಲ್ಲಿ ಆ ಮನೆಯಿಂದ ವಠಾರಕ್ಕೆ ಶಿಪ್ಟ್ ಆಗಿದ್ದಾಳೆ. ಒಂದೇ ಕಡೆ ಇದ್ದರೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಳ್ಳಬೇಕು, ಆಗ ಎರಡು ಜೀವ ಒಂದಾಗುತ್ತದೆ, ಇವರಿಬ್ಬರು ಒಂದಾಗಲಿಲ್ಲ ಅಂದರೆ ಮಲ್ಲಿ ಅಲ್ಲ ಪಲ್ಲಿ ಅಂತ ಹೆಸರು ಚೇಂಜ್ ಮಾಡಿಕೊಳ್ತೀನಿ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿದಂತೆ ನಾನು ಸಾವಿರ ಸುಳ್ಳು ಹೇಳಿ ಈ ಜೋಡಿಯನ್ನು ಒಂದು ಮಾಡ್ತೀನಿ ಎಂದು ಮಲ್ಲಿ ಹೇಳಿದ್ದಾಳೆ.