ಕರ್ಣ ಧಾರಾವಾಹಿಯಲ್ಲಿ ಹೊಸ ಪ್ರೋಮೋವೊಂದು ರಿಲೀಸ್ ಆಗಿದ್ದು, ನಿತ್ಯಾ ಹಾಗೂ ತೇಜಸ್ ಮದುವೆ ಮುರಿದಿರೋದು ವೀಕ್ಷಕರಿಗೆ ಬೇಸರ ತಂದಿದೆ. ಈ ಹಿಂದೆ ಕರ್ಣ ಹಾಗೂ ನಿತ್ಯಾ ಮದುವೆ ಆಗುವ ವಿಡಿಯೋ ಟೆಲಿಕಾಸ್ಟ್ ಆದಾಗಲೂ ಕೂಡ ವೀಕ್ಷಕರಿಗೆ ಬೇಸರ ಆಗಿದ್ದರೂ ಕೂಡ, ಇದು ಕನಸು ಇರಬಹುದು ಎಂದು ಸಣ್ಣ ಆಶಯ ಇತ್ತು.
ಇನ್ನೇನು ನಿತ್ಯಾ ಹಾಗೂ ತೇಜಸ್ ಹಸೆಮಣೆ ಮೇಲೆ ಕೂರಬೇಕು ಎನ್ನುವಷ್ಟರಲ್ಲಿ ತೇಜಸ್ ಹಾಗೂ ಅವನ ಅಪ್ಪ-ಅಮ್ಮ ಕಾಣೆಯಾಗಿದ್ದಾರೆ. ಎಲ್ಲರೂ ಹುಡುಕಿದರೂ ಕೂಡ ಅವರ ಸುಳಿವೇ ಇಲ್ಲ. ಇನ್ನೊಂದು ಕಡೆ ನಿತ್ಯಾ ಅಜ್ಜಿಗೆ ದಿಕ್ಕು ತೋಚದ ಹಾಗೆ ಆಗಿದೆ.
29
ಅಂಗಲಾಚಿ ಬೇಡಿದ ಅಜ್ಜಿ
ತೇಜಸ್ ಅಂತೂ ಮೋಸ ಮಾಡಿ ಹೋದ, ಈಗ ಬೇರೆಯವರಲ್ಲಿ ಯಾರಾದರೂ ನನ್ನ ಮೊಮ್ಮಗಳನ್ನು ಮದುವೆ ಆಗಲಿ ಎಂದು ಅವಳು ಎಲ್ಲರ ಮುಂದೆ ಅಂಗಲಾಚಿ ಬೇಡಿದ್ದಾಳೆ. ಆದರೂ ಕೂಡ ಯಾರೂ ಅವಳ ಮಾತನ್ನು ಕೇಳಲೇ ಇಲ್ಲ.
39
ಶಾಂತಿ ಮೊಮ್ಮಗಳ ಜೀವನ ಹಾಳಾಯ್ತು
ಇನ್ನೊಂದು ಕಡೆ ಹಸೆಮಣೆ ಏರಿದಮೇಲೆ, ಮದುವೆ ನಿಕ್ಕಿ ಆದ್ಮೇಲೆ ಆ ಮದುವೆ ನಿಂತರೆ, ಹುಡುಗಿಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಜನರು ಮಾತಾಡಿಕೊಳ್ತಾರೆ, ಬೇರೆ ಯಾರೂ ಕೂಡ ಮದುವೆ ಆಗೋಕೆ ಮುಂದೆ ಬರೋದಿಲ್ಲ ಎಂದು ಅಜ್ಜಿ ಅಂದುಕೊಂಡಿದ್ದಳು. ಹೀಗಾಗಿ ಮೊಮ್ಮಗಳ ಜೀವನ ಹಾಳಾಯ್ತು ಎಂದು ಅವಳು ಅತ್ತಿದ್ದಳು.
ಇದೆಲ್ಲ ಸರಿ, ಪ್ರೀತಿಸಿದ್ದ ತೇಜಸ್ ಯಾಕೆ ಹಾಗೆ ಮಾಡಿದ ಎನ್ನುವ ಡೌಟ್ ಬರುವುದು. ಆರಂಭದಲ್ಲಿ ನಿತ್ಯಾಳನ್ನು ಅವನ ತಂದೆ-ತಾಯಿ ಕೂಡ ಸೊಸೆ ಮಾಡಿಕೊಳ್ಳಲು ಒಪ್ಪಿರಲಿಲ್ಲ, ಆಮೇಲೆ ಮಗನಿಗಿಂತ ಸೊಸೆಯೇ ಬೆಸ್ಟ್, ಫೇವರಿಟ್ ಎಂದರು. ಎಲ್ಲ ಶಾಸ್ತ್ರ ಆಗುವವರೆಗೂ ಚೆನ್ನಾಗಿದ್ದ ಅವರು ತಕ್ಷಣ ಮಾಯ ಆಗಿದ್ದು ಹೇಗೆ?
59
ಆ ನೀಚ ಯಾರು?
ತೇಜಸ್ ಒಳ್ಳೆಯವನೇ ಇರಬಹುದು. ಆದರೆ ಕರ್ಣನ ತಂದೆ ರಮೇಶ್ ಕುತಂತ್ರದಿಂದ ಈ ಮದುವೆ ಮುರಿದಿರಬಹುದು. ಕರ್ಣ ಹಾಗೂ ನಿಧಿ ಪ್ರೀತಿ ವಿಷಯ ತಿಳಿದ ರಮೇಶ್‌ಗೆ ಇವರಿಬ್ಬರಿಗೂ ಬ್ರೇಕಪ್ ಮಾಡಿಸಿ, ಕರ್ಣನಿಗೆ ಇನ್ನಷ್ಟು ನೋವು ಕೊಡುವ ಆಸೆ ಇತ್ತು. ನಿತ್ಯಾ, ಕರ್ಣನನ್ನು ಇಷ್ಟಪಡೋದಿಲ್ಲ, ನಮ್ಮ ದಾರಿಗೂ ಅಡ್ಡ ಬರೋದಿಲ್ಲ ಎಂದು ಅವನು ಲೆಕ್ಕಾಚಾರ ಹಾಕಿದ್ದನು.
69
ರಮೇಶ್ ಏನು ಮಾಡಿರ್ತಾನೆ?
ಬಹುಶಃ ಮದುವೆ ಮನೆಯಲ್ಲಿ ನೀನು ನಿತ್ಯಾಳನ್ನು ಮದುವೆ ಆದರೆ ನಿನ್ನ ಅಥವಾ ನಿಮ್ಮ ತಂದೆ-ತಾಯಿ ಜೀವ ತೆಗೆಯುತ್ತೇನೆ ಎಂದು ತೇಜಸ್‌ಗೆ ರಮೇಶ್ ಧಮ್ಕಿ ಹಾಕಿರಬಹುದು. ಅಥವಾ ೀ ಮದುವೆ ನಡೆದರೆ, ತೇಜಸ್‌ನನ್ನು ಜೀವ ಸಮೇತ ಉಳಿಸೋದಿಲ್ಲ ಎಂದು ಅವನ ತಂದೆ-ತಾಯಿಯನ್ನು ಹೆದರಿಸಿರಬಹುದು. ಇಲ್ಲವೇ ಆ ಮೂವರನ್ನು ಕಿಡ್ನ್ಯಾಪ್ ಮಾಡಿರಬಹುದು.
79
ತೇಜಸ್ ಕೆಲಸದಿಂದ ಕೊರಗ್ತಿರುವ ಅಜ್ಜಿ
ನಿತ್ಯಾ ಹಾಗೂ ತೇಜಸ್ ಮದುವೆ ನಿಲ್ಲತ್ತೆ, ಆದರೆ ನಿತ್ಯಾ ಮದುವೆ ಆಗದೆ ಹಾಗೆ ಅಲ್ಲಿಂದ ಹೋದರೆ ಮತ್ತೆ ಅವಳಿಗೆ ಮದುವೆ ಆಗೋದು ಕಷ್ಟ ಅಂತ ಅಜ್ಜಿ ಕೊರಗುತ್ತಿದ್ದಾಳೆ. ಶಾಂತಿ ತನ್ನ ಗೆಳತಿಯೂ ಆದ ಕರ್ಣನ ಅಜ್ಜಿ ಬಳಿ ಗೋಳು ಹೇಳಿಕೊಂಡು ಅಳಬಹುದು. ನನ್ನ ಮೊಮ್ಮಗನಿಗೂ ಮದುವೆ ಮಾಡಿಸಬೇಕು ಎಂದುಕೊಂಡಿದ್ದ ಆ ಅಜ್ಜಿ, ಕರ್ಣನ ಬಳಿ ನಿತ್ಯಾಳನ್ನು ಮದುವೆ ಆಗು, ಆಗಿಲ್ಲ ಅಂದ್ರೆ ನಾನು ಸಾಯ್ತೀನಿ ಅಂತ ಇವಳು ಧಮ್ಕಿ ಹಾಕಿರಬಹುದು. ಧರ್ಮ ಸಂಕಟಕ್ಕೆ ಬಿದ್ದು ಕರ್ಣ ನಿತ್ಯಾಳನ್ನು ಮದುವೆ ಆಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಚೆನ್ನಾಗಿವೆ.
89
ಕರ್ಣ ಹಾಗೂ ನಿತ್ಯಾ ಮದುವೆ ಆದರೆ?
ಯಾವುದಾದರೂ ಕಾರಣಕ್ಕೆ ಕರ್ಣನನ್ನು ಕಂಡರೆ ನಿತ್ಯಾ ದ್ವೇಷ ಮಾಡ್ತಾಳೆ, ಅವನು ಮಾಡುವ ನೂರು ಒಳ್ಳೆಯ ಕೆಲಸದ ಬದಲು ಒಂದು ಕೆಲಸ ನೋವು ಕೊಡುತ್ತದೆ ಎಂದು ಭಾವಿಸಿದ್ದಳು. ನಿತ್ಯಾಳಿಂದ ಬೈಸಿಕೊಳ್ಳುವ ಕರ್ಣ ಸದಾ ಅವನಿಂದ ದೂರ ಇರಲು ಇಷ್ಟಪಡ್ತಾನೆ. ಈಗ ಇವರಿಬ್ಬರು ಮದುವೆ ಆದರೆ ಮುಂದೆ ಕಥೆ ಏನು?