ಕರ್ಣ ಧಾರಾವಾಹಿಯಲ್ಲಿ ರಮೇಶ್ ಬಯಸಿದಂತೆ, ಕರ್ಣ ಹಾಗೂ ನಿತ್ಯಾ ಲೋಕದ ಕಣ್ಣಿಗೆ ಮದುವೆ ನಾಟಕ ಮಾಡಿದ್ದಾರೆ. ಈ ಮದುವೆ ನಡೆದಿಲ್ಲ ಅಂದ್ರೆ ಅಜ್ಜಿ ಸಾಯ್ತೀನಿ ಎಂದಿದ್ದಳು. ಹೀಗಾಗಿ ಅವನು ಭಯಕ್ಕೆ ಬಿದ್ದು, ನಿತ್ಯಾಳನ್ನು ಮದುವೆ ಆಗ್ತೀನಿ ಎಂದಿದ್ದನು. ಅದರಂತೆ ಅವನು ನಾಟಕ ಮಾಡಿದ್ದಾನೆ.
ನಿತ್ಯಾ ತನಗೆ ತಾನೇ ತಾಳಿ ಕಟ್ಟಿಕೊಂಡಿದ್ದಾಳೆ. ತೇಜಸ್ ಜೊತೆ ಮದುವೆ ಆಗುವ ಕನಸು ಹೊತ್ತ ನಿತ್ಯಾಗೆ ಅವಳಿಗೆ ಅವಳೇ ತಾಳಿ ಕಟ್ಟಿಕೊಳ್ಳುವ ಸಮಯ ಬಂದಿದೆ. ಇಂಥ ಕಷ್ಟ ಯಾವ ಹೆಣ್ಣಿಗೂ ಬರಬಾರದಪ್ಪಾ..! ಆಮೇಲೆ ನಿತ್ಯಾ, ಕರ್ಣ ಎಲ್ಲರ ಮುಂದೆ ಸಪ್ತಪದಿ ತುಳಿದಿದ್ದಾರೆ.
25
ಗೋಳಿಟ್ಟ ನಿಧಿ
ಕರ್ಣ ಹಾಗೂ ನಿತ್ಯಾ ಮದುವೆ ಆದರು, ಒಂದು ಕಡೆ ಅಕ್ಕನ ಜೀವನ, ಇನ್ನೊಂದು ಕಡೆ ಪ್ರೀತಿಸಿದ ಹುಡುಗ ಎಂದು ನಿಧಿ ಕಣ್ಣೀರು ಹಾಕಿದ್ದಾಳೆ. ಇಷ್ಟುದಿನ ಅವಳು ಕಂಡಿದ್ದ ಕನಸು ಎಲ್ಲವೂ ನುಚ್ಚು ನೂರಾಗಿದೆ. ಅವಳ ರೋಧನೆ ಮಾತ್ರ ಎಲ್ಲರ ಕರುಳು ಕಿವುಚಿದ ಹಾಗೆ ಆಗುವುದು.
35
ನಿತ್ಯಾ ಮನೆಗೆ ಬೆಂಕಿ ಬಿತ್ತು
ಕರ್ಣ ಹಾಗೂ ನಿತ್ಯಾ ಲೋಕದ ಕಣ್ಣಿಗೆ ಮದುವೆ ನಾಟಕ ಮಾಡಿದ್ದಾರೆ ಅಷ್ಟೇ. ಇನ್ನು ಒಂದೇ ಮನೆಯಲ್ಲಿ ಅವರು ಹೇಗೆ ಬದುಕ್ತಾರೋ ಏನೋ! ಇನ್ನೊಂದು ಕಡೆ ಮದುವೆ ನಾಟಕ ಮುಗಿಯುತ್ತಿದ್ದಂತೆ ಮನೆಗೆ ಬೆಂಕಿ ಬಿದ್ದಿದೆ. ಇದು ರಮೇಶ್ ಮಾಡಿದ್ದಾ ಎಂಬ ಪ್ರಶ್ನೆ ಕೂಡ ಮಾಡಿದೆ. ಕರ್ಣ ಹಾಗೂ ನಿತ್ಯಾ ಮದುವೆ ಆದ್ಮೇಲೆ, ಕರ್ಣನ ಖುಷಿಯವನ್ನು ಅವನು ಕಿತ್ಕೊಂಡ ಮೇಲೆ ಮತ್ತೆ ಅವನು ಮನೆಗೆ ಬೆಂಕಿ ಹಾಕುವ ಕೆಲಸ ಮಾಡ್ತಾನಾ ಎಂಬ ಡೌಟ್ ಕೂಡ ಇದೆ.
ಮನೆ ಹೊತ್ತಿ ಉರಿಯುತ್ತಿತ್ತು. ಆಗ ನಿಧಿ ಒಳಗಡೆ ಹೋಗಿ ತನ್ನ ಟೆಡ್ಡಿ ಬೇರ್‌ನ್ನು ತಗೊಳ್ಳಲು ಒಳಗಡೆ ಹೋದಳು. ಕರ್ಣ ಅವಳನ್ನು ಕಾಪಾಡಲು ಹೋಗಿದ್ದಾನೆ. “ನನಗೆ ಈ ಟೆಡ್ಡಿ ಬೇರ್ ತುಂಬ ಮುಖ್ಯ” ಎಂದು ಅವಳು ಹೇಳಿದ್ದಾಳೆ. ಇದರ ಹಿಂದಿನ ಅರ್ಥ ಏನು ಎಂದು ಅವನಿಗೆ ಗೊತ್ತೇ ಇರಲಿಕ್ಕಿಲ್ಲ. ಟೆಡ್ಡಿ ಬೇರ್‌ನ್ನು ತನ್ನ ಹುಡುಗ ಎಂದು ನಿಧಿ ಇಷ್ಟು ದಿನಗಳಿಂದ ಅದರ ಜೊತೆ ಮಾತನಾಡುತ್ತ, ಮುದ್ದು ಮಾಡುತ್ತಿದ್ದಳು. ಈಗ ಇನ್ಮುಂದೆ ಕೂಡ ಇದೇ ಥರ ಇರಬೇಕಿದೆ.
55
ಮುಂದೆ ಏನಾಗುತ್ತದೆ?
ನಿತ್ಯಾ ಹೊಟ್ಟೆಯಲ್ಲಿ ಮಗು ಇರೋದು ಕರ್ಣನಿಗೆ ಗೊತ್ತಾಗಿದೆ. ಅವನು ಮುಂದಿನ ದಿನಗಳಲ್ಲಿ ಈ ವಿಚಾರವನ್ನು ನಿತ್ಯಾಗೆ ಹೇಳಬಹುದು ಅಥವಾ ಅವಳಿಗೆ ಗೊತ್ತಾಗಬಹುದು. ಮೊದಲೇ ಹಸೆಮಣೆಯಲ್ಲಿದ್ದ ನಿತ್ಯಾಳನ್ನು ತೇಜಸ್ ಬಿಟ್ಟು ಹೋಗಿದ್ದಾನೆ, ಇದರಿಂದಲೇ ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಈಗ ಪ್ರಗ್ನೆಂಟ್ ನಿತ್ಯಾಳನ್ನು ಬಿಟ್ಟು ಹೋಗಿದ್ದಾನೆ ಎಂದರೆ ಎಲ್ಲರೂ ಇನ್ನಷ್ಟು ಸಿಟ್ಟಾಗ್ತಾರೆ. ಹೀಗಾಗಿ ಕರ್ಣ ಸುಮ್ಮನೆ ಇರಬಹುದು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಕುತೂಹಲ ಕಾಡುತ್ತಿದೆ, ಒಟ್ಟಿನಲ್ಲಿ ಎಪಿಸೋಡ್‌ಗಳು ಭಾರೀ ಕುತೂಹಲಭರಿತವಾಗಿ ಪ್ರಸಾರ ಆಗ್ತಿವೆ.