Karna Serial: ತೇಜಸ್‌ ಮರಳಿ ಬಂದ್ರೂ ಕರ್ಣ-ನಿಧಿಗೆ ನೆಮ್ಮದಿಯಿಲ್ಲ; ತಿರುಗಿಬೀಳ್ತಾಳಾ ನಿತ್ಯಾ?

Published : Oct 25, 2025, 09:39 PM IST

Karna Serial Episode: ಪ್ರತಿ ಬಾರಿಯೂ ಕರ್ಣ ಏನೇ ಸಹಾಯ ಮಾಡಿದರೂ ಕೂಡ, ಯಾರೋ ಮಾಡಿದ ತಪ್ಪನ್ನು ಕರ್ಣನೇ ಮಾಡಿದ್ದಾನೆ ಎಂದುಕೊಂಡು ನಿತ್ಯಾ ಬೈಯ್ಯುತ್ತಿದ್ದಳು. ಮದುವೆಯಾಗುವ ಹುಡುಗ ತೇಜಸ್‌ ಮದುವೆ ಮನೆಯಿಂದ ಕಾಣೆಯಾದ, ಅಜ್ಜಿ ಪ್ರಾಣ ಕಳೆದುಕೊಳ್ಳುತ್ತಿದ್ದಳು. ಇದಕ್ಕೆಲ್ಲ ಕರ್ಣ ಮದ್ದು ಕೊಟ್ಟಿದ್ದಾನೆ. 

PREV
16
ನಿತ್ಯಾಗೆ ಚಿಂತೆ ಶುರುವಾಗಿದೆ

ಕರ್ಣ ಹಾಗೂ ನಿತ್ಯಾ ಮದುವೆ ನಾಟಕ ಆಡುತ್ತಿದ್ದಾರೆ. ಕರ್ಣನಿಗೆ ಬೇರೆ ಹುಡುಗಿ ಇದ್ದಾಳಾ? ಬೇರೆ ಹುಡುಗಿಯನ್ನು ಮದುವೆ ಆಗುವ ಆಸೆ ಹೊಂದಿದ್ದಾನಾ? ನಿಮ್ಮ ಆಸೆ ಆಕಾಂಕ್ಷೆಗಳು ಏನು ಎಂದು ಕರ್ಣನ ಬಳಿ ಯಾರೂ ಕೇಳಿರಲಿಲ್ಲ. ಕರ್ಣ, ನಿತ್ಯಾಗೆ ತಾಳಿ ಕಟ್ಟಬೇಕು ಎಂದು ಹೇಳಿದರು. ಇದೀಗ ನಿತ್ಯಾ ಮನಸ್ಸಿನಲ್ಲಿ ಇದೇ ವಿಷಯ ಕೊರೆಯುತ್ತಿದೆ.

26
ಮೂರು ತಿಂಗಳು ಟೈಮ್‌ ಬೇಕು

ಕರ್ಣ ಹಾಗೂ ನಿತ್ಯಾ ಪ್ರಪಂಚದ ಕಣ್ಣಿಗೆ ಪತಿ-ಪತ್ನಿ. ನಿತ್ಯಾ ಈಗ ಆದಷ್ಟು ಬೇಗ ತೇಜಸ್‌ನನ್ನು ಹುಡುಕ್ತೀನಿ, ನನ್ನ ದಾರಿ ನಾನು ನೋಡ್ಕೋತಿನಿ, ನನಗೆ ಮೂರು ತಿಂಗಳು ಟೈಮ್‌ ಕೊಡಿ ಎಂದು ಕರ್ಣನ ಬಳಿ ಗಡುವು ಕೇಳಿದ್ದಾಳೆ. ಇನ್ನೊಂದು ಕಡೆ ನಿಧಿಗೆ ಮದುವೆ ಸತ್ಯ ಹೇಳೋಣ ಅಂತ ಕರ್ಣ ಮನಸ್ಸು ಮಾಡಿದರೂ ಕೂಡ, ಅವನ ಅಮ್ಮ ಅದಕ್ಕೆ ಕಲ್ಲು ಹಾಕಿದ್ದಾಳೆ.

36
ತಪ್ಪು ತಿಳಿದುಕೊಂಡಿರೋ ತೇಜಸ್‌

ಈಗ ತೇಜಸ್‌ ಕಿಡ್ನ್ಯಾಪ್‌ ಆಗಿರೋದು ಬಯಲಾಗಿದೆ. ಕರ್ಣನೇ ತನ್ನನ್ನು ಕಿಡ್ನ್ಯಾಪ್‌ ಮಾಡಿದ್ದಾನೆ ಅಂತ ತೇಜಸ್‌ ನಂಬಿದ್ದಾನೆ. ಇದು ನಯನತಾರಾ ಪ್ಲ್ಯಾನ್.‌ ಕರ್ಣ, ನಿಧಿ, ನಿತ್ಯಾ ಗೋಳಿಡಬೇಕು ಅಂತ ರಮೇಶ್‌ ಬಯಸಿದ್ದನು. ಇದನ್ನು ನಯನತಾರಾ ಕಾರ್ಯರೂಪಕ್ಕೆ ತಂದಿದ್ದಳು.

46
ತೇಜಸ್‌ ಮರಳಿ ಬಂದ್ರೆ ನಿತ್ಯಾ ಏನು ಮಾಡ್ತಾಳೆ?

ತೇಜಸ್‌ ಮತ್ತೆ ಮರಳಿ ಬಂದರೆ ಏನಾಗುವುದು? ತೇಜಸ್‌ ಪ್ರಕಾರ ಇದಕ್ಕೆಲ್ಲ ಕರ್ಣ ಕಾರಣ. ತೇಜಸ್‌ ಮರಳಿ ಬಂದು, ಕರ್ಣನೇ ಕಾರಣ ಎಂದು ಹೇಳಿದರೆ ಅದನ್ನು ನಿತ್ಯಾ ನಂಬುತ್ತಾಳಾ? ತೇಜಸ್‌ ಬರುವಷ್ಟರಲ್ಲಿ ಕರ್ಣನ ಮೇಲೆ ನಿತ್ಯಾಗೆ ಲವ್‌ ಆಗುವುದೇ? ನಿತ್ಯಾ ಮೇಲೆ ಕರ್ಣನಿಗೆ ಲವ್‌ ಹುಟ್ಟುವುದಾ ಎಂಬ ಅನುಮಾನ ಶುರುವಾಗಿದೆ. ತೇಜಸ್‌ ಮಾತನ್ನು ನಂಬಿಕೊಂಡು, ನಾನು ಪ್ರೀತಿಸಿದ ಹುಡುಗನಿಂದ ದೂರ ಆಗುವ ಹಾಗೆ ಮಾಡಿದ ಅಂತ ಕರ್ಣನಿಗೆ ನಿತ್ಯಾ ತೊಂದರೆ ಕೊಡುತ್ತಾಳಾ ಎಂಬ ಪ್ರಶ್ನೆ ಎದುರಾಗಿದೆ.

56
ಇಬ್ಬರ ಜೊತೆ ಕರ್ಣ ಜೀವನ ಮಾಡ್ತಾನಾ?

ನಿಧಿ, ನಿತ್ಯಾ, ತೇಜಸ್‌ ಈ ಮೂವರ ಜೀವನ ಏನಾಗಲಿದೆಯೋ ಏನೋ ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನೊಂದು ಕಡೆ ನಿಧಿ, ನಿತ್ಯಾ ಇಬ್ಬರ ಜೊತೆಯೂ ಕರ್ಣ ಬದುಕಬೇಕಾದ ಪರಿಸ್ಥಿತಿ ಬರಬಹುದಾ ಎಂಬ ಅನುಮಾನ ಕೂಡ ಶುರುವಾಲಿದೆ. ಹಾಗಾದರೆ ಮುಂದೆ ಏನಾಗಲಿದೆ?

66
ವೀಕ್ಷಕರ ಅಭಿಪ್ರಾಯ ಏನು?

ನಿತ್ಯಾ ಹಾಗೂ ಕರ್ಣ ಒಟ್ಟಿಗೆ ಜೀವನ ಮಾಡಲಿ, ಇವರಿಬ್ಬರ ಮಧ್ಯೆ ಪರಸ್ಪರ ಪ್ರೀತಿ ಹುಟ್ಟಲಿ ಎಂದು ವೀಕ್ಷಕರು ಅಂದುಕೊಂಡಿದ್ದಾರೆ.

ನಿತ್ಯಾ ಹಾಗೂ ನಿಧಿ ದೂರ ಆಗೋದು ಬೇಡ, ಇವರು ಒಂದಾಗಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. 

ರಮೇಶ್‌, ನಯನತಾರಾಗೆ ಪಾಠ ಕಲಿಸಿ ಎಂದು ಕೆಲವರು ಹೇಳಿದ್ದಾರೆ. 

Read more Photos on
click me!

Recommended Stories