ತ್ಯಾಗದಲ್ಲಿ ಕರ್ಣನನ್ನೂ ಮೀರಿಸಿದ ನಿಧಿ; ಅಕ್ಕ ನಿತ್ಯಾಳ ಸೆಕೆಂಡ್ ಹ್ಯಾಂಡ್ ಪ್ರೀತಿಗೆ ಕರ್ಣ ಬಲಿಯಾಗ್ತಾನಾ?

Published : May 18, 2026, 09:53 PM IST

ಕರ್ಣ ಮತ್ತು ನಿಧಿ ಮದುವೆಗೆ ಸಿದ್ಧರಾಗುತ್ತಾರೆ. ಆದರೆ, ತನ್ನ ಅಕ್ಕ ನಿತ್ಯಾಗೂ ಕರ್ಣನ ಮೇಲೆ ಪ್ರೀತಿ ಇದೆ ಎಂದು ತಿಳಿದ ನಿಧಿ, ಅಕ್ಕನ ಪ್ರೀತಿಗಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಿ ಮದುವೆ ಮಂಟಪದಿಂದ ಎದ್ದು ಹೋಗುತ್ತಾಳೆ. ಈ ತ್ಯಾಗದಿಂದಾಗಿ ಕರ್ಣನ ಮದುವೆಯಲ್ಲಿ ಮತ್ತೊಂದು ದೊಡ್ಡ ತಿರುವು ಉಂಟಾಗಿದೆ.

PREV
18

ಕರ್ಣ ಧಾರಾವಾಹಿಯಲ್ಲಿ ಪ್ರತಿಬಾರಿಯೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಇನ್ನೇನು ಧಾರಾವಾಹಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎನ್ನುವಾಗ ಅಲ್ಲಿ ವಿಲನ್ ಎಂಟ್ರಿ ಕೊಟ್ಟಿರುತ್ತಾರೆ. ಇನ್ನು ವಿಲನ್‌ಗಳ ಎಲ್ಲ ಕುತಂತ್ರವೂ ವಿಫಲವಾಗಿ ಶುಭ ಕಾರ್ಯ ನಡೆದೇ ಬಿಡ್ತು ಅನ್ನೋವಾಗ ಇದೀಗ ಧಾರಾವಾಹಿ ನಾಯಕ-ನಾಯಕಿಯೇ ಮಾಯ ಆಗಿಬಿಡುತ್ತಾರೆ. ಅಂತಹದೇ ಟ್ವಿಸ್ಟ್ ಇದೀಗ ಕರ್ಣ ಧಾರಾವಾಹಿಯಲ್ಲೂ ಮರುಕಳಿಸಿದೆ.

28

ತ್ಯಾಗಮಯಿ ಕರ್ಣನ ಹೆಸರನ್ನ ಈ ಕರ್ಣ ಧಾರಾವಾಹಿ ನಾಯಕನಿಗೂ ಇಡಲಾಗಿದೆ. ಹೆಸರಿಗೆ ತಕ್ಕಂತೆ ಇಲ್ಲಿ ನಾಯಕನೂ ತ್ಯಾಗಮಯಿ ಆಗಿದ್ದರೂ ತನ್ನ ಪ್ರೀತಿಯನ್ನು ಮಾತ್ರ ತ್ಯಾಗ ಮಾಡುವುದಕ್ಕೆ ಸಿದ್ಧನಾಗಿರಲಿಲ್ಲ. ಹೀಗಾಗಿ, ಕರ್ಣ ತಾನು ಪ್ರೀತಿಸಿದ ಹುಡುಗಿ ನಿಧಿಯನ್ನು ಮದುವೆ ಮಾಡುವುದಕ್ಕೆ ಮಾಡದ ಕಸರತ್ತುಗಳು ಇಲ್ಲವೇ ಇಲ್ಲ ಎನ್ನಬಹುದು.

38

ಈ ಹಿಂದೆ ನಿಧಿಯ ಅಕ್ಕ ನಿತ್ಯಾ ಪ್ರೀತಿಸಿದ ಹುಡುಗ ತೇಜಸ್ ಆಕೆಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದನು. ತಾನೇ ಮದುವೆ ಆಗುವ ಹುಡುಗಿ ಎಂದು ನಿತ್ಯಾಳನ್ನು ದೈಹಿಕವಾಗಿ ಬಳಸಿಕೊಂಡು, ಮದುವೆ ಹಿಂದಿನ ದಿನ ಕುತಂತ್ರಕ್ಕೆ ಬಲಿಯಾಗಿ ನಿತ್ಯಾಳನ್ನು ಬಿಟ್ಟು ಓಡಿ ಹೋಗಿದ್ದನು. ಆದರೆ, ನಿತ್ಯಾಳ ಮದುವೆ ನಿಂತು ಹೋಗುವುದನ್ನು ತಡೆಯಲು ಸ್ವತಃ ಕರ್ಣ ತಾನು ಪ್ರೀತಿ ಮಾಡಿದ ಹುಡುಗಿಯ ಅಕ್ಕನನ್ನು ಮದುವೆ ಮಾಡಿಕೊಳ್ಳುತ್ತಾನೆ.

48

ಆದರೆ, ತೇಜಸ್‌ನ ಪ್ರೀತಿಯ ಫಲ ನಿತ್ಯಾಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ನಿತ್ಯಾ ಪ್ರಗ್ನೆಂಟ್ ಆಗಿದ್ದು, ತೇಜಸ್‌ನನ್ನು ಸೇರಲು ಹಾತೊರೆಯುತ್ತಾಳೆ. ಆಗ ನಿತ್ಯಾಳನ್ನು ಆಕೆಯ ಪ್ರೇಮಿ ತೇಜಸ್‌ನೊಂದಿಗೆ ಒಂದು ಮಾಡುವ ಕೆಲಸಕ್ಕೆ ಕರ್ಣ ಹಾಗೂ ನಿಧಿ ಕೈ ಹಾಕಿದರೂ ಅದು ಫಲ ಕೊಡಲಿಲ್ಲ. ನಿತ್ಯಾಳ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಬಿಟ್ಟು ಹೋಗುತ್ತಾನೆ.

58

ಇತ್ತ ನಿತ್ಯಾಳ ತಂಗಿ ನಿಧಿ ಸ್ವತಃ ತನ್ನ ಮದುವೆಯಾದ ಗಂಡ ಕರ್ಣನನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿಯುತ್ತದೆ. ಆಗ ತನ್ನ ಮಗುವಿಗೆ ಕರ್ಣ ಅಪ್ಪನಲ್ಲ, ನಾವಿಬ್ಬರೂ ಮದುವೆ ಮಾಡಿಕೊಂಡಿಲ್ಲ ಎಂಬ ಸತ್ಯವನ್ನು ಮನೆಯವರಿಗೆ ಹೇಳುತ್ತಾಳೆ. ನಂತರ ತಂಗಿಯನ್ನು ಬೇರೆಯವರಿಗೆ ಮದುವೆ ಮಾಡಿಕೊಡುವುದನ್ನ ತಡೆದು ಕರ್ಣನ ಜೊತೆ ಮದುವೆ ಮಾಡಿಸಲು ಮುಂದಾಗುತ್ತಾಳೆ.

68

ಇದರ ನಡುವೆ ನಿಧಿಗೆ ತನ್ನ ಅಕ್ಕನ ಬಾಳು ಹೀಗಾಯಿತಲ್ಲಾ ಎಂಬ ನೋವು ಒಂದೆಡೆಯಾದರೂ, ತಾನು ಪ್ರೀತಿಸಿದವನ ಮದುವೆ ಆಗುತ್ತಿದ್ದೇನೆ ಎಂಬ ನೆಮ್ಮದಿ ಒಂದು ಕಡೆಗಿತ್ತು. ಆದರೆ, ನಿತ್ಯಾಳ ಬಗ್ಗೆ ಕರ್ಣ ಕಾಳಜಿ ವಹಿಸುವುದು ಹಾಗೂ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ನೋಡಿ ನಿತ್ಯಾಳಿಗೆ ಕರ್ಣನ ಮೇಲೆ ಪ್ರೀತಿ ಹುಟ್ಟುತ್ತದೆ.

78

ಅತ್ತ ತೇಜಸ್‌ನ ಪ್ರೀತಿಯ ಕುರುಹು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗ ಇತ್ತ ಕರ್ಣನ ಮೇಲೆ ನಿತ್ಯಾಗೆ ಲವ್ ಆಗುತ್ತದೆ. ಇದನ್ನು ನಿತ್ಯಾ ಕೂಡ ಒಂದೆಡೆ ಹೇಳಿಕೊಂಡಿದ್ದು, ಅದನ್ನು ವಿಡಿಯೋ ಮಾಡಿಕೊಂಡಿರುವ ಕುತಂತ್ರಿಗಳು ನಿಧಿಗೆ ತೋರಿಸಿದ್ದಾರೆ.

88

ಇದೀಗ ಅಕ್ಕ ನಿತ್ಯಾಳ ಸೆಕೆಂಡ್ ಹ್ಯಾಂಡ್ ಲವ್‌ಗಾಗಿ ತನ್ನ ಪ್ರೇಮಿ ಕರ್ಣನನ್ನೇ ತ್ಯಾಗ ಮಾಡಲು ಮುಂದಾಗಿದ್ದಾಳೆ.ಇಷ್ಟು ದಿನ ಕರ್ಣ ಪ್ರೀತಿ ಉಳಿಸಿಕೊಳ್ಳಲು ಮಾಡಿದ ಕಸರತ್ತನ್ನು ಲೆಕ್ಕಿಸದೇ, ನಿಧಿ ಇದೀಗ ಅಕ್ಕನಿಗಾಗಿ ತ್ಯಾಗ ಮಾಡಿ ಮದುವೆ ಮಂಟಪದಿಂದ ಎದ್ದು ಹೋಗಿದ್ದಾಳೆ. ಮದುವೆಯಲ್ಲಿ ಮತ್ತೇನು ಟ್ವಿಸ್ಟ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories