ಡಬಲ್ ಮನರಂಜನೆ ನೀಡೋದಕ್ಕೆ ರೆಡಿಯಾದ್ರು ಕರ್ನಾಟಕದ ಜನ ಮೆಚ್ಚಿದ ಸೊಸೆ ಮೀನಾ

Published : May 18, 2026, 09:40 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ‘ಕ್ವಾಟ್ಲೆ ಕಿಚನ್’ ಸೀಸನ್ 2ರಲ್ಲಿ ಭಾಗವಹಿಸಲಿದ್ದಾರೆ ಕರ್ನಾಟಕದ ಜನಮೆಚ್ಚಿದ ಸೊಸೆ ‘ನಂದಗೋಕುಲ’ದ ಮೀನಾ ಖ್ಯಾತಿಯ ನಟಿ ಮೇಘಾ. ಇನ್ನು ಮುಂದೆ ಮೀನಮ್ಮ ಕೊಡಲಿದ್ದಾರೆ ಡಬಲ್ ಮನರಂಜನೆ.

PREV
16
ನಂದಗೋಕುಲ ಸೀರಿಯಲ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ತುಂಬು ಕುಟುಂಬದ ಕಥೆಯೊಂದಿಗೆ ಬಂದಿರುವ ಜನಪ್ರಿಯ ಧಾರಾವಾಹಿ ‘ನಂದಗೋಕುಲ’. ಈ ಧಾರಾವಾಹಿಯಲ್ಲಿ ಸೊಸೆ ಮೀನಾ ಪಾತ್ರದ ಮೂಲಕ ಕರ್ನಾಟಕದ ಜನ ಮೆಚ್ಚಿದ ಸೊಸೆಯಾಗಿದ್ದಾರೆ ನಟಿ ಮೇಘಾ.

26
ಜನಮೆಚ್ಚಿದ ಸೊಸೆಯಿಂದ ಡಬಲ್ ಧಮಾಕ

ತಮ್ಮ ಮುದ್ದಾದ ಅಭಿನಯ ಹಾಗೂ ಅತ್ತೆ ಮಾವಂದಿರ ಮುದ್ದಿನ ಸೊಸೆಯಾಗಿರುವ, ತನ್ನ ಗಂಡನ ಮನೆಗೆ ಯಾವುದೇ ತೊಂದರೆಯಾದರೂ ಅದನ್ನು ಸರಿಪಡಿಸೋಕೆ ಸದಾ ಮುಂದೆ ನಿಲ್ಲುವ, ಆ ಮೂಲಕ ಇಡೀ ಕರ್ನಾಟಕದ ಮನ ಗೆದ್ದಿರುವ ಸೊಸೆಯಾಗಿದ್ದಾರೆ ಮೀನಾ.

36
ಮೀನಾ ಕೊಡ್ತಿದ್ದಾರೆ ಡಬಲ್ ಧಮಾಕ

ಇದೀಗ ಮೀನಾ ಖ್ಯಾತಿಯ ಮೇಘಾ ಡಬಲ್ ಧಮಾಕ ಅಂದರೆ, ಕಲರ್ಸ್ ಕನ್ನಡದಲ್ಲಿ ಡಬಲ್ ಮನರಂಜನೆ ಕೊಡೋದಕ್ಕೆ ರೆಡಿಯಾಗಿದ್ದಾರೆ. ಅಂದರೆ ಸೀರಿಯಲ್ ಜೊತೆಗೆ ಕುಕ್ಕಿಂಗ್ ಮಾಡೋದಕ್ಕೂ ಸಖತ್ ಆಗಿ ಪ್ಲ್ಯಾನ್ ಮಾಡುತ್ತಿದ್ದಾರೆ ಮೇಘಾ.

46
ಕ್ವಾಟ್ಲೆ ಕಿಚನ್ ನಲ್ಲಿ ಮೇಘಾ

ಹೌದು ನಂದಗೋಕುಲದ ಮೀನಾ ಖ್ಯಾತಿಯ ಮೇಘಾ ಅವರು ಶೀಘ್ರದಲ್ಲೇ ಶುರುವಾಗಲಿರುವ ಕುಕ್ಕಿಂಗ್ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ರಲ್ಲಿ ಕುಕ್ಕ್ ಆಗಿ ಭಾಗವಹಿಸಿದ್ದಾರೆ. ಇದರ ಪ್ರೊಮೋ ಕೂಡ ಈಗಾಗಲೆ ರಿಲೀಸ್ ಆಗಿದೆ.

56
ರಕ್ಷಿತಾ, ಸೂರಜ್ ಜೊತೆ ಮೇಘಾ

ನಟಿ ಮೇಘಾ ಅವರು ಈ ರಿಯಾಲಿಟಿ ಶೋದಲ್ಲಿ ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್, ಓಂ ಪ್ರಕಾಶ್ ರಾವ್, ಕಾವ್ಯಶ್ರೀ ಗೌಡ ಜೊತೆ ಸ್ಪರ್ಧಿಸಲಿದ್ದಾರೆ. ರಿಯಾಲಿಟಿ ಶೋ ಯಾವಾಗ ಆರಂಭ ಎನ್ನುವ ಮಾಹಿತಿ ಇಲ್ಲ. ಆದರೆ ಮೀನಮ್ಮನನ್ನು ನೋಡಿ ಮಾತ್ರ ಜನ ಡಬಲ್ ಧಮಾಕ ಎಂದು ಸಂಭ್ರಮಿಸುತ್ತಿದ್ದಾರೆ.

66
ಮೇಘಾ ಕರಿಯರ್

ಮೇಘಾ ಎಸ್ ವಿ ಈ ಹಿಂದೆ ‘ಜೀವ ಹೂವಾಗಿದೆ’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಸಹ ನಟರಾಗಿದ್ದ ಸಂಜಯ್ ಗೌಡ ಜೊತೆ ಪ್ರೀತಿಸಿ ಮದುವೆಯಾದರು. ಸಂಜು ಜೊತೆ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಕೂಡ ಆಗಿದ್ದರು ಮೇಘಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories