Karna Kannada Serial Episode Update: ಕರ್ಣ ಧಾರಾವಾಹಿಯಲ್ಲಿ ಕೊನೆಗೂ ನಿಧಿ, ಕರ್ಣ ಮದುವೆಯಾಗಿದೆ. ಎಲ್ಲರಿಗೂ ಎಲ್ಲ ವಿಷಯ ಗೊತ್ತಾಗಿದೆ. ಈಗಾಗಲೇ ಹೊಸ ವಿಲನ್ ಎಂಟ್ರಿಯಾಗಿದೆ. ಇದರ ಜೊತೆಗೆ ತೇಜಸ್ ಕೂಡ ಬಂದಿದ್ದಾನೆ.
Karna Serial Today Episode: ನಿತ್ಯಾ ಹಾಗೂ ತೇಜಸ್ ಪ್ರೀತಿ ಮಾಡುತ್ತಿದ್ದರು. ಮದುವೆಗೆ ಮುಂಚೆ ನಿತ್ಯಾ ಗರ್ಭಿಣಿಯಾಗಿದ್ದಳು. ಆದರೆ ರಮೇಶ್ ಮಾಡಿದ ಕುತಂತ್ರಕ್ಕ ತೇಜಸ್ ಅನುಮಾನಪಟ್ಟು, ನಿತ್ಯಾಳನ್ನು ದೂರ ಮಾಡಿದ. ಮನೆಯವರಿಗೆ ಈ ವಿಷಯ ಗೊತ್ತಾದರೆ ಸಮಸ್ಯೆ ಆಗುತ್ತದೆ ಎಂದು ಕರ್ಣ, ನಿತ್ಯಾ ಮದುವೆ ನಾಟಕ ಮಾಡಿದರು.
25
ಲೇಡಿ ವಿಲನ್ ಯಾರು?
ಈಗ ಎಲ್ಲ ವಿಷಯ ಎಲ್ಲರಿಗೂ ಗೊತ್ತಾಗಿದೆ. ಎಲ್ಲರೂ ಸೇರಿ ಕರ್ಣ-ನಿಧಿ ಮದುವೆಗೆ ಒಪ್ಪಿದ್ದರು. ಈಗ ಇವರಿಬ್ಬರೂ ಮದುವೆ ಆಗಿದ್ದಾರೆ. ಆದರೆ ಹೊಸ ಲೇಡಿ ವಿಲನ್ ಬಂದಾಗಿದೆ. ಆ ಲೇಡಿ ಯಾರು? ಎಂಬುದೇ ಈಗ ಇರುವ ಯೋಚನೆಯಾಗಿದೆ.
35
ಅರ್ಜುನ್‌ಗೆ ಎಲ್ಲರಿಂದ ಮೆಚ್ಚುಗೆ
ಇದರ ಮಧ್ಯೆ ಕರ್ಣ-ನಿಧಿ ಲವ್ ವಿಷಯ ಗೊತ್ತಾಗುತ್ತಿದ್ದಂತೆ, ಅರ್ಜುನ್ ಏನೂ ಹೇಳದೆ, ಯಾರಿಗೂ ಬೈಯ್ಯದೆ ಅಲ್ಲಿಂದ ಹೋಗಿದ್ದಾನೆ. ಅರ್ಜುನ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಕಥೆ ಬೇರೆ ಆಗುತ್ತಿತ್ತು. ಆದರೆ ಅರ್ಜುನ್ ಮಾತ್ರ ನಿಜಕ್ಕೂ ಜೆಂಟಲ್‌ಮ್ಯಾನ್. ಒಟ್ಟಿನಲ್ಲಿ ಇವನನ್ನು ನೋಡಿ ಎಲ್ಲರಿಗೂ ಖುಷಿಯಾಗಿದೆ.
ಹೊಸ ಪ್ರೋಮೋ ರಿಲೀಸ್ ಆಗಿದ್ದು, ಅದರಲ್ಲಿ ತೇಜಸ್ ಬಂದಿರೋದು ಗೊತ್ತಾಗಿದೆ. ನಿತ್ಯಾ-ತೇಜಸ್ ಮದುವೆ ದಿನವೇ ತೇಜಸ್‌ನನ್ನು ರಮೇಶ್ ಕಿಡ್ನ್ಯಾಪ್ ಮಾಡಿಸಿದ್ದು, ಆಮೇಲೆ ಕರ್ಣನ ಮೇಲೆ ಆರೋಪ ಮಾಡಿದ್ದು, ಎಲ್ಲ ವಿಷಯಕ್ಕೆ ರಮೇಶ್ ಕಾರಣ ಎಂದು ಕರ್ಣ ಈಗ ಎಲ್ಲರ ಮುಂದೆ ಬಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ತೇಜಸ್, ಈಗ ಮನೆಗೆ ಎಂಟ್ರಿ ಕೊಟ್ಟು ನಾನು ನಿತ್ಯಾಳಿಂದ ದೂರ ಆಗೋದಿಕ್ಕೆ ರಮೇಶ್ ಕಾರಣ ಎಂದು ಹೇಳಿದ್ದಾನೆ. ಅಲ್ಲಿಗೆ ರಮೇಶ್ ಮುಖವಾಡ ಬಯಲು ಆಯತು.
55
ಮುಂದೆ ಏನಾಗುತ್ತದೆ?
ಲೇಡಿ ವಿಲನ್ ಯಾರು? ಲೇಡಿ ವಿಲನ್‌ಗೆ ಕರ್ಣನ ಕುಟುಂಬ ಕಂಡರೆ ಯಾಕೆ ಆಗೋದಿಲ್ಲ ಎಂದೆಲ್ಲ ಕಂಡುಹಿಡಿಯಬೇಕಿದೆ. ಲೇಡಿ ವಿಲನ್ ಬಹುಶಃ ತಾತನ ಎರಡನೇ ಪತ್ನಿ ಇರಬಹುದಾ? ತಾತನ ಇನ್ನೊಬ್ಬ ಮಗಳಾಗಿರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯ ಆ ಲೇಡಿ ವಿಲನ್ ಮುಖವನ್ನು ತೋರಿಸಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿರಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.