Kavitha Gowda: ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಲಚ್ಚಿ ಪಾತ್ರದ ಮೂಲಕ ಕನ್ನಡಿಗರ ಮನೆಮಗಳಾಗಿ ಜನಪ್ರಿಯತೆ ಪಡೆದ ನಟಿ ಕವಿತಾ ಗೌಡ, ಇದೀಗ ತಾಯಿಯಾದ ಬಳಿಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಶೀಘ್ರದಲ್ಲಿ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ?
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ, ವಿದ್ಯಾ ವಿನಾಯಕದ ಮೂಲಕ ಜನಕ್ಕೆ ಮತ್ತಷ್ಟು ಹತ್ತಿರವಾದರು. ಧಾರಾವಾಹಿಗಳಲ್ಲಿ ಗೆಸ್ಟ್ ಎಪಿಯರೆನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಮಗುವಾದ ಬಳಿಕ ನಟನೆಯಿಂದ ದೂರ ಸರಿದರು.
26
ಮುದ್ದಾದ ಮಗುವಿನ ಅಮ್ಮ
ಕವಿತಾ ಗೌಡ 2024ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾದರು. ಆದಾದ ಬಳಿಕ ಮಗುವಿನ ಲಾಲನೆ ಪಾಲನೆಯಲ್ಲಿಯೇ ನಟಿ ಬ್ಯುಸಿಯಾಗಿದ್ದರು. ಅಮ್ಮನಾಗಿ ಮಗನ ಜೊತೆ ಸದಾ ಕಾಲ ಇದ್ದು ನೋಡಿಕೊಳ್ಳುತ್ತಿದ್ದರು. ಇದೀಗ ಮಗುವಿಗೆ ಒಂದೂವರೆ ತಿಂಗಳು ಕಳೆದಿದೆ.
36
ಮತ್ತೆ ಸೀರಿಯಲ್ ಗೆ ಕವಿತಾ ಗೌಡ
ಮಗು ಕೊಂಚ ದೊಡ್ಡವನಾದಂತೆ, ಕವಿತಾ ಗೌಡ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕವಿತಾ ಸೀರಿಯಲ್ ಮೂಲಕವೋ ಅಥವಾ ರಿಯಾಲಿಟಿ ಶೋನಲ್ಲಿ ನಟಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಅಂದ ಹಾಗೆ ಇದೀಗ ಕಿರುತೆರೆಯಲ್ಲಿ ಸಾಕಷ್ಟು ಹೊಸ ಸೀರಿಯಲ್ ಗಳು ಪ್ರಸಾರವಾಗಲಿದೆ. ಹಾಗಾಗಿ ಕವಿತಾ ಗೌಡ ಕೂಡ ಹೊಚ್ಚ ಹೊಸ ಕನ್ನಡ ಧಾರಾವಾಹಿಯಲ್ಲಿ ನಾಯಕಿಯಾಗಿ ಮತ್ತೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ಸತ್ಯ ಎನ್ನುವ ಬಗ್ಗೆ ಮಾಹಿತಿ ಇಲ್ಲ.
56
ತೂಕ ಇಳಿಸಿಕೊಂಡ ಕವಿತಾ ಗೌಡ
ಮಗುವಾದ ಮೇಲೆ ತೂಕ ಹೆಚ್ಚಿಸಿಕೊಂಡಿದ್ದ ಕವಿತಾ ಗೌಡ, ಕಳೆದ ಎಂಟು ತಿಂಗಳಿನಿಂದ ಡಯೆಟ್, ಫಿಟ್‌ನೆಸ್ ಕಡೆಗೆ ಇನ್ನಷ್ಟು ಗಮನ ಕೊಡುತ್ತಿದ್ದಾರೆ. ಈ ವೇಳೆ ಅವರು 8kg ತೂಕ ಇಳಿಸಿಕೊಂಡಿದ್ದಾರಂತೆ. ಸೋಶಿಯಲ್ ಮೀಡೀಯಾದಲ್ಲೂ ಕವಿತಾ ಗೌಡ ವರ್ಕೌಟ್ ವಿಡಿಯೋಗಳು ವೈರಲ್ ಆಗುತ್ತಿವೆ.
66
ಅಭಿಮಾನಿಗಳು ಖುಷ್
ಬಹಳ ವರ್ಷಗಳ ಬಳಿಕ ಕವಿತಾ ಗೌಡ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿರುವ ಬಗ್ಗೆ ಕೇಳಿ ಅಭಿಮಾನಿಗಳಂತೂ ಸಖತ್ ಖುಷಿಪಟ್ಟಿದ್ದಾರೆ. ಕೆಲವರು ಹೇಳುವಂತೆ ಕವಿತಾ ಗೌಡ ಜಗದ್ಧಾತ್ರಿ ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ನಟಿಸುತ್ತಾರಂತೆ. ಅದು ಪಾಸಿಟಿವ್ ಆಗಿರಲಿ ನೆಗೆಟಿವ್ ಆಗಿರಲಿ ಒಟ್ಟಲ್ಲಿ ಕವಿತಾ ಗೌಡ ತೆರೆ ಮೇಲೆ ಬಂದರೆ ಖುಷಿ ಎಂದಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.