Karna Serial: ಅಬ್ಬಬ್ಬಾ...ಕರ್ಣ, ನಿಧಿ ಮದುವೆ ಆಯ್ತು! ಕರ್ಣನ ಮೇಲೆ ಕೆರಳಿ ಕೆಂಡವಾದ ವೀಕ್ಷಕರು!

Published : May 19, 2026, 08:36 AM IST

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಮದುವೆ ಆಗ್ತಾರೋ ಇಲ್ಲವೋ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈಗ ಇವರಿಬ್ಬರು ಮದುವೆ ಆಗಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದೆ. ಹಾಗಾದರೆ ಮುಂದೆ ಏನಾಗುವುದು? ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.  

PREV
14
ಗೋಗರೆದ ಕರ್ಣ

ಹೌದು, ಎಲ್ಲರಿಗೂ ಎಲ್ಲ ವಿಷಯ ಗೊತ್ತಾಗಿತ್ತು. ಈಗ ನಿಧಿ ಮನೆ ಬಿಟ್ಟು ಹೋಗಿದ್ದಳು. ಕರ್ಣ ಅವಳನ್ನು ಕರೆದುಕೊಂಡು ಬರಲು ಹೋಗಿದ್ದನು. ಈಗ ಅವಳು ಸಿಕ್ಕಿದ್ದಾಳೆ. ತನ್ನ ಪ್ರೀತಿಗೆ ಮೋಸ ಮಾಡಬೇಡಿ ಎಂದು ಅವನು, ಅವಳನ್ನು ಗೋಗರೆದಿದ್ದಾನೆ. ಆಮೇಲೆ ನಿಧಿ ಬರಲು ಒಪ್ಪಿದ್ದಾಳೆ.

24
ನಿತ್ಯಾ ಗತಿ ಏನು?

ಈಗ ಎಲ್ಲರ ಮುಂದೆ ನಿಧಿ, ಕರ್ಣನ ಮದುವೆ ಆಗಿದೆ. ಆದರೆ ನಿತ್ಯಾ ಗತಿ ಏನು ಎಂಬ ಪ್ರಶ್ನೆ ಶುರು ಆಗಿದೆ. ನಿತ್ಯಾಗೆ ಈಗ ತೇಜಸ್‌ ಇಲ್ಲ, ಒಂದು ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಅವಳು ಏನು ಮಾಡುತ್ತಾಳೆ ಎಂಬ ಪ್ರಶ್ನೆ ಎದುರಾಗಿದೆ.

34
ಇದೆಲ್ಲ ಕನಸಾ?

ಇದೆಲ್ಲ ಕನಸಾ ಎಂಬ ಪ್ರಶ್ನೆ ಕಾಡುತ್ತಿದೆ. ಕರ್ಣ, ನಿಧಿ ಮದುವೆ ಆಯ್ತು ಎಂದು ಖುಷಿಯಿಂದ ಬಾಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಮುಂದೆ ಒಂದಿಷ್ಟು ಟ್ವಿಸ್ಟ್‌ಗಳು ಬರೋದಂತೂ ಸಹಜ. ಇನ್ನು ವೀಕ್ಷಕರಂತೂ ಇಲ್ಲಿ ಬೇರೆ ಟ್ವಿಸ್ಟ್‌ ಇದೆ ಎಂದು ಊಹಿಸಿದ್ದಾರೆ.

44
ಕರ್ಣ ಸ್ವಾರ್ಥಿ

ಇಷ್ಟುದಿನ ಬೇರೆಯವರ ಖುಷಿಗೋಸ್ಕರ ತ್ಯಾಗ ಮಾಡ್ತಿದ್ದ ಕರ್ಣ ಸ್ವಾರ್ಥಿ ಎಂದು ಕೆಲ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ತನ್ನ ಪ್ರೀತಿಗೋಸ್ಕರ ನಿತ್ಯಾಳನ್ನು ಈಗ ದೂರ ಮಾಡಿದ, ಅವಳ ಸತ್ಯ ಎಲ್ಲರಿಗೂ ಗೊತ್ತಾಗೋ ಹಾಗೆ ಮಾಡಿದ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories