Karna serial: ಮುಂದೆ ಧಾರಾವಾಹಿಯಲ್ಲಿ ಏನೇನೆಲ್ಲಾ ಆಗಬಹುದು ಎಂಬುದನ್ನ ನಿರ್ದೇಶಕರು ಸುಳಿವು ನೀಡಿದರೂ, ಇಷ್ಟೆಲ್ಲಾ ಧಾರಾವಾಹಿಯಲ್ಲಿ ನಡೆಯುತ್ತಿದ್ದರೂ ವೀಕ್ಷಕರಿಗೆ ಸಮಾಧಾನದ ವಿಷಯವೊಂದಿದೆ. ಬಹುಶಃ ಇದಕ್ಕೆ ಉತ್ತರ ನಿತ್ಯಾ ಅಭಿಮಾನಿಗಳಿಗೆ ಮಾತ್ರ ತಿಳಿದಿರುತ್ತದೆ.
'ಕರ್ಣ' ಧಾರಾವಾಹಿಯ ಹೊಸ ಪ್ರೊಮೊ ನೋಡಿದಾಗಿನಿಂದ ವೀಕ್ಷಕರಿಗೆ ನಿದ್ದೇನೇ ಇಲ್ಲ. ಇನ್ನೇನು ಕರ್ಣನ ಜೊತೆ ನಿಧಿ ಮದುವೆ ಆಗೋಯ್ತು ಅನ್ನುವಷ್ಟರಲ್ಲಿ ವೀಕ್ಷಕರಿಗೆ ಭರ್ಜರಿ ಟ್ವಿಸ್ಟ್ ಕೊಟ್ಟಿದ್ದಾರೆ ನಿರ್ದೇಶಕರು.
27
ಊಹೆ ಮಾಡಿರಲಿಲ್ಲ ವೀಕ್ಷಕರು
ಅದು ಅಂತಿಂಥ ಟ್ವಿಸ್ಟ್ ಅಲ್ಲ, ಬಹುಶಃ ವೀಕ್ಷಕರೂ ಅದನ್ನ ಊಹೆ ಮಾಡಿರಲಿಲ್ಲ. ನಿಧಿಯ ಬದಲು ನಿತ್ಯಾಳನ್ನು ಮದುವೆಯಾಗಿದ್ದಾನೆ ಕರ್ಣ. ಅಷ್ಟೇ ಅಲ್ಲ, ನಿತ್ಯಾ ತಾಯಿಯಾಗುತ್ತಿರುವ ಮುನ್ಸೂಚನೆಯೂ ಸಿಕ್ಕಿದೆ.
37
ನಿತ್ಯಾ ಫ್ಯಾನ್ಸ್‌ಗೆ ಗೊತ್ತು
ಹೇಗೆ?, ಏಕೆ? ಎಂಬುದು ನಿಮಗೆ ಧಾರಾವಾಹಿ ನೋಡಿದ ಮೇಲೆಯೇ ತಿಳಿಯುವುದು. ಮುಂದೆ ಧಾರಾವಾಹಿಯಲ್ಲಿ ಏನೇನೆಲ್ಲಾ ಆಗಬಹುದು ಎಂಬುದನ್ನ ನಿರ್ದೇಶಕರು ಸುಳಿವು ನೀಡಿದರೂ, ಇಷ್ಟೆಲ್ಲಾ ಧಾರಾವಾಹಿಯಲ್ಲಿ ನಡೆಯುತ್ತಿದ್ದರೂ ವೀಕ್ಷಕರಿಗೆ ಸಮಾಧಾನದ ವಿಷಯವೊಂದಿದೆ. ಬಹುಶಃ ಇದಕ್ಕೆ ಉತ್ತರ ನಿತ್ಯಾ ಅಭಿಮಾನಿಗಳಿಗೆ ಮಾತ್ರ ತಿಳಿದಿರುತ್ತದೆ.
ಯೆಸ್. ಅದೇ ನಿತ್ಯಾ ಜೊತೆ ಕರ್ಣನ ಮದುವೆ. ಮೊದಲಿನಿಂದಲೂ ಬಹುಪಾಲು ವೀಕ್ಷಕರು ನಿತ್ಯಾ-ಕರ್ಣ ಮದುವೆಯಾಗ್ಬೇಕು ಎಂದು ವೋಟ್ ಮಾಡುತ್ತಿದ್ದರು. ಹೆಚ್ಚಿನ ಕಾಮೆಂಟ್ಸ್ ಕರ್ಣ-ನಿತ್ಯಾ ಪರವಾಗಿಯೇ ಇರುತ್ತಿತ್ತು. ಕರ್ಣ ನಿತ್ಯಾ ಮದುವೆಯಾಗದಿದ್ದರೆ ನಾವು ಧಾರಾವಾಹಿಯೇ ನೋಡಲ್ಲ ಎನ್ನುವಷ್ಟರ ಮಟ್ಟಿಗೆ ಫೀಲ್ ಆಗಿದ್ದರು.
57
ಫುಲ್ ಖುಷ್ ಆಗಿದ್ದಾರೆ ನಿತ್ಯಾ ಫ್ಯಾನ್ಸ್
ಆದರೀಗ ಜೀ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೊಮೊ ನೋಡುತ್ತಿದ್ದಂತೆ ಫುಲ್ ಖುಷ್ ಆಗಿದ್ದಾರೆ ನಿತ್ಯಾ ಫ್ಯಾನ್ಸ್. ಅಷ್ಟೇ ಅಲ್ಲ, ಇದು ಹೀಗೆ ಆಗುತ್ತದೆ ಎಂದು ನಾವು ಮೊದಲೇ ಊಹೆ ಮಾಡಿದ್ದೆವು ಎನ್ನುತ್ತಿದ್ದಾರೆ.
67
ನಿತ್ಯಾ ಅಭಿಮಾನಿಗಳು ಮಾಡಿರುವ ಕಾಮೆಂಟ್ಸ್
*"ನಿತ್ಯಾ ಕರ್ಣ ಮದುವೆ ಆಗಿರೋದು ಯಾರಿಗೆಲ್ಲ ಖುಷಿ ತಂದು ಕೊಟ್ಟಿದೆ ಅವರೆಲ್ಲ ಒಂದು ಲೈಕ್ ಮಾಡಿ ಹೋಗಲಿ". *ನಮಗೆಲ್ಲ ಮುಂಚೆನೇ ಗೊತ್ತಿತ್ತು ಇದು ಹೀಗೆ ಆಗುತ್ತೇ ಅಂತ. ಇನ್ನೂ ಇಬ್ಬರ ಮಧ್ಯ ಪ್ರೀತಿ ಹುಟ್ಟಿ ಪ್ರೀತಿಸೋಕ್ಕೆ ಶುರು ಮಾಡಿದ ಮೇಲೆ ಅಂತು ಕನ್ಫರ್ಮ್ ಆಗಿತ್ತು. ಪಕ್ಕಾ director ಉಲ್ಟಾ ಹೊಡಿತಾರೆ ಅಂತ. *ವೀಕ್ಷಕರು ಹೇಳಿದ್ದು ನಿಜ ಆಯಿತು. ಮೊದ್ಲೇ ಶಾಸ್ತ್ರ ಹೇಳಿದ್ರು ನಮ್ ವೀಕ್ಷಕರು *ಈಗ ಭವ್ಯ ಹೀರೋಯಿನ್ ಅಲ್ಲ ಅಂತ ಗೊತಾಯ್ತಲ್ಲ ಇನ್ಮೇಲೆ ಈ ಧಾರವಾಹಿ ನೋಡ್ತಿವಿ ಬಿಡಿ ಡೈರೆಕ್ಟರ್ ಚೆನ್ನಾಗಿ ಟ್ವಿಸ್ಟ್ ಇಟ್ಟರು. *ಕರ್ಣ ಅಂತ ಸೀರಿಯಲ್ ಹೆಸರು ಇಟ್ಟಿದುಕ್ಕೆ ಸಾರ್ಥಕ ಆಯ್ತು ಈಗ ನಿರ್ದೇಶಕರಿಗೆ. ಇಲ್ಲಾ ಅಂದ್ರೆ ಕರ್ಣ ಅನ್ನೋ ಹೆಸರಿಗೆ ವ್ಯಾಲ್ಯೂ ಇರ್ತ ಇರ್ಲಿಲ್ಲ. ಒಟ್ಟಿನಲ್ಲಿ ಕರ್ಣ ಇಬ್ಬರು ಹೆಂಡತಿಯರ ಮುದ್ದಿನ ಪೊಲೀಸ್ ಮುಂದಿನ ಎಪಿಸೋಡ್ ಗಳಲ್ಲಿ. ಇದು ಒಂದು ರೀತಿ ಸೂಪರ್ ಟ್ವಿಸ್ಟ್, ಕಥೆಗೆ ತಕ್ಕನಾಗಿ ಸ್ಟೋರಿ ಬರ್ತಾ ಇದೆ, ಎಲ್ಲಾ ಕಲಾವಿದರು ಸೂಪರ್ ಆಕ್ಟಿಂಗ್ ಮಾಡಿದ್ದಾರೆ. ಈ ರೀತಿ ಟ್ವಿಸ್ಟ್ ಕೊಟ್ರೆ ಒಂದು ಹೊಸ ಸ್ಟೋರಿ ಗೊತ್ತಾಗದು ಎಲ್ಲರಿಗೂ. ಡೈರೆಕ್ಟರ್ ಸಾಹೇಬ್ರೆ.. ಎಂದೆಲ್ಲಾ ಕಾಮೆಂಟ್ಸ್ ಮಾಡಿರುವುದನ್ನ ನೋಡಬಹುದು.
77
ಟ್ವಿಸ್ಟ್ ಮೇಲೆ ಟ್ವಿಸ್ಟ್
ಇದೆಲ್ಲಾ ವೀಕ್ಷಕರಿಂದ ಬರುತ್ತಿರುವ ಮಿಶ್ರಪ್ರತಿಕ್ರಿಯೆ. ಆದರೂ ಕೆಲವರು ಮುಂದೆ ಕರ್ಣ ಇಬ್ಬರನ್ನೂ ಮದುವೆಯಾಗುತ್ತಾನೆ ಅನ್ನುತ್ತಿದ್ದಾರೆ. ಏತನ್ಮಧ್ಯೆ ನಿತ್ಯಾ ಅಥವಾ ನಿಧಿ ಇಬ್ಬರಲ್ಲಿ ಒರ್ವ ಪಾತ್ರಧಾರಿ ಸೀರಿಯಲ್‌ನಿಂದ ಆಚೆ ಬರಬಹುದು ಎಂಬ ರೂಮರ್ಸ್ ಬೇರೆ ಹರಿದಾಡುತ್ತಿವೆ. ಹಾಗಾಗಿ ಕರ್ಣ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿರೋದಂತೂ ಸುಳ್ಳಲ್ಲ.