BBK12 contestant Mallamma: ಕನ್ನಡ ಬಿಗ್‌ಬಾಸ್ ಸೀಸನ್ 12 ರಲ್ಲಿ, ಉತ್ತರ ಕರ್ನಾಟಕದ ಸ್ಪರ್ಧಿ ಮಲ್ಲಮ್ಮ ಅವರು ಬಿಗ್‌ಬಾಸ್‌ಗೆ ಕನ್ಫೇಷನ್ ರೂಮ್‌ನಲ್ಲಿ ಒಗಟು ಕೇಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕನ್ನಡ ಬಿಗ್‌ಬಾಸ್ ಸೀಸನ್ 12 ಆರಂಭವಾಗಿದೆ. ಇಷ್ಟು ವರ್ಷ ನಡೆಯದ ಘಟನೆಯೊಂದು ನಡೆದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದವರಾಗಿರುವ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಸೂಚನೆಗಳನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಈ ಕಾರಣದಿಂದ ಬಿಗ್‌ಬಾಸ್ ಸಹ ಸರಳ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.
25
ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿ
ಈಗ ಕನ್ಫೇಷನ್ ರೂಮ್‌ನಲ್ಲಿ ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿಯಾಗಿದ್ದಾರೆ. ಕಳೆದ 11 ಸೀಸನ್‌ಗಳಲ್ಲಿ ಬಿಗ್‌ಬಾಸ್ ಹೇಳಿದ್ದನ್ನು ಕೇಳಿಸಿಕೊಂಡು, ಸೂಚಿಸಿರೋದನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು ಬರಬೇಕಾಗುತ್ತದೆ. ಆದ್ರೆ ಈ ಬಾರಿಯ 12ನೇ ಸೀಸನ್ ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ.
35
ಕನ್ಫೇಷನ್ ರೂಮ್
ಎಲ್ಲರನ್ನು ಪ್ರಶ್ನೆ ಮಾಡುವ ಬಿಗ್‌ಬಾಸ್‌ಗೆ ಮಲ್ಲಮ್ಮ ಅವರೇ ಮನೆಯ ಬಾಸ್‌ಗೆ ಪ್ರಶ್ನೆ ಮಾಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕನ್ಫೇಷನ್ ರೂಮ್‌ಗೆ ಬರುವಂತೆ ಮಲ್ಲಮ್ಮ ಅವರಿಗೆ ಸೂಚಿಸಲಾಯ್ತು. ಕನ್ಫೇಷನ್ ರೂಮ್‌ನೊಳಗೆ ಬರುತ್ತಿದ್ದಂತೆ ಮಲ್ಲಮ್ಮ ಅವರಿಗೆ, ನನ್ನ ಮಾತುಗಳು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ ಅಲ್ಲವಾ ಎಂದು ಬಿಗ್‌ಬಾಸ್ ಕೇಳುತ್ತಾರೆ. ಅದಕ್ಕೆ ಮಲ್ಲಮ್ಮ, ಓಕೆ ರೀ ಅಂತಾರೆ.
ಇಷ್ಟಕ್ಕೆ ಸುಮ್ಮನಾಗದ ಬಿಗ್‌ಬಾಸ್, ಏನಾದರೂ ಮಾತನಾಡಿ ಎಂದು ಮಲ್ಲಮ್ಮ ಅವರಿಗೆ ಹೇಳುತ್ತಾರೆ. ಆಗ ಮಲ್ಲಮ್ಮ, ನಾನು ನಿಮಗೆ ಒಗಟು ಹೇಳುತ್ತೇನೆ. ನೀವು ಉತ್ತರ ಕೊಡಿ ಅಂತಾರೆ. ಬಿಳಿ ಹೊಲದಾಗ ಕರಿ ಬೀಜ ಬಿತ್ತವನು ಬಲು ಜಾಣ ಏನಿದು ಅಂತ ಕೇಳ್ತಾರೆ. ಸ್ಪಲ್ಪ ಯೋಚಿಸಿದ ಬಿಗ್‌ಬಾಸ್ "ಹತ್ತಿ" ಎಂದು ಸರಿಯಾದ ಉತ್ತರವನ್ನು ನೀಡುತ್ತಾರೆ.
ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್‌ಗೆ ಮಾತನಾಡೋದಕ್ಕೆ ಮತ್ತು ಉತ್ತರ ಕೊಡೋದಕ್ಕೆ ಯೋಚನೆ ಮಾಡುವ ಹಾಗೆ ಮಾಡಿದೀರಿ ಮಲ್ಲಮ್ಮ ಎಂದು ತಮಾಷೆ ಮಾಡುತ್ತಾರೆ. ಬಿಗ್‌ಬಾಸ್‌ಗೆ ಪ್ರಶ್ನೆ ಕೇಳುವ ಮೂಲಕ ಮಲ್ಲಮ್ಮ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.