Karna Serial: ನಿಜ ಜೀವನದಲ್ಲಿಯೂ ಕರ್ಣನೇ ನಟ ಕಿರಣ್​ ರಾಜ್​- ವಿಡಿಯೋ ನೋಡಿ ಮಹಾರಾಜರೂ ಭಾವುಕ

Published : Oct 19, 2025, 12:13 PM IST

'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನಾಥಾಶ್ರಮಕ್ಕೆ ಸಹಾಯ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹಾಗೂ ಬಾಲಕನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಅವರ ಸೇವೆ ಜೀ ಪ್ರಶಸ್ತಿ ವೇದಿಕೆಯಲ್ಲಿ ಭಾವುಕರನ್ನಾಗಿಸಿತು.

PREV
17
ಅಲ್ಲೂ ಕರ್ಣ ಇಲ್ಲೂ ಕರ್ಣ

ಒಬ್ಬ ಮನುಷ್ಯ ಇಷ್ಟೆಲ್ಲಾ ಒಳ್ಳೆಯವನಾಗೋದು ಸಾಧ್ಯನಾ, ಇದ್ಯಾಕೋ ಸ್ವಲ್ಪ ಅತಿಯಾಯಿತು ಎನ್ನಿಸುತ್ತದೆ ಎಂದು Karna Serialನ ಕರ್ಣ ಪಾತ್ರಧಾರಿಯನ್ನು ನೋಡಿದಾಗ ಹಲವಾರು ಮಂದಿ ಕಮೆಂಟ್​ ಮಾಡಿರುವುದು ಉಂಟು. ಜೀವನದಲ್ಲಿ ಇಷ್ಟು ಒಳ್ಳೆಯವರಾಗುವುದು ಸರಿಯಲ್ಲ ಎಂದೂ, ಯಾರು ಎಷ್ಟೇ ನೋವು ಕೊಟ್ಟರೂ ಅದನ್ನು ಖುಷಿಯಿಂದ ಸ್ವೀಕರಿಸುವ ಕ್ಯಾರೆಕ್ಟರ್​ ಬಹುಶಃ ನಿಜ ಜೀವನದಲ್ಲಿ ಯಾರಿಗೂ ಇರಲು ಸಾಧ್ಯವೇ ಇಲ್ಲ ಬಿಡಿ ಇದ್ಯಾಕೋ ಸ್ವಲ್ಪ ಹೆಚ್ಚೇ ಅನ್ನಿಸ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಸೀರಿಯಲ್​ ಪಾತ್ರದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಅದೇ ನಿಜ ಜೀವನದಲ್ಲಿ ಅಂಥದ್ದೇ ವ್ಯಕ್ತಿತ್ವ ಇರುವುದು ತುಂಬಾ ತುಂಬಾ ಕಡಿಮೆಯೇ.

27
ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ

ಆದರೆ, ನಿಜ ಜೀವನದಲ್ಲಿಯೂ ಬೇರೆಯವರಿಗೆ ಬೆಳಕಾಗಿದ್ದಾರೆ ಇದೇ ಕರ್ಣ ಪಾತ್ರಧಾರಿ ನಟ ಕಿರಣ್​ ರಾಜ್​ (Kiran Raj). ಅದಕ್ಕೆ ಸಾಕ್ಷಿಯಾದದ್ದು, ಅವರ ನಿಜ ಜೀವನದ ಕಥೆ ಅನಾವರಣಗೊಂಡಿದ್ದು ಜೀ ಕುಟುಂಬ ಅವಾರ್ಡ್​ನಲ್ಲಿ.  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನೆಚ್ಚಿನ ನಾಯಕ ಪ್ರಶಸ್ತಿ ಪಡೆದರು ಕಿರಣ್​ ರಾಜ್. ಈ ಸಂದರ್ಭದಲ್ಲಿ ​ ಅವರು ಮಾಡ್ತಿರೋ ಸೇವೆಯ ಬಗ್ಗೆ ಪ್ರಶಸ್ತಿ ನೀಡಲು ಬಂದ ಮೈಸೂರು ಮಹಾರಾಜ ಯದುವೀರ ದತ್ತ ಅವರ ಎದುರು ವಿಟಿ ಮೂಲಕ ತೋರಿಸಿದಾಗ, ವೇದಿಕೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ನೀರು ಬಂದಿದೆ.

37
ಸಮಾಜ ಸೇವೆಯಲ್ಲಿ ಕಿರಣ್​ ರಾಜ್​

ನಟ ಕಿರಣ್ ರಾಜ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

47
ಪ್ರತಿ ತಿಂಗಳೂ ರೇಷನ್​

ಅನಾಥಾಶ್ರಮ ಒಂದಕ್ಕೆ ಕಿರಣ್​ ರಾಜ್​ ಕಡೆಯಿಂದ ಪ್ರತಿತಿಂಗಳೂ ರೇಷನ್​ ಬರುತ್ತದೆ. 25 ಮಕ್ಕಳ ಸ್ಕೂಲ್​ ಫೀಸ್​ ತುಂಬುತ್ತಿದ್ದಾರೆ. ಆಶ್ರಮದ ಮಕ್ಕಳನ್ನು ಟೂರ್​ಗೂ ಕರೆದುಕೊಂಡು ಹೋಗ್ತಾರೆ. ಈ ಬಗ್ಗೆ ಖುದ್ದು ಆಶ್ರಮವಾಸಿಗಳು ಭಾವುಕರಾಗಿ ನುಡಿದಿದ್ದಾರೆ.

57
ಆ ದಿನಗಳ ನೆನೆದ ನಟ

ಈ ಬಗ್ಗೆ ಮಾತನಾಡಿದ ಕಿರಣ್​ ರಾಜ್ ಅವರು, ಲೈಫ್​ನಲ್ಲಿ ಒಂದು ಸನ್ನಿವೇಶ ಬಂದಿತ್ತು. ದಾರಿನೇ ಇರಲಿಲ್ಲ. ಆಗ ಅನ್ನಿಸ್ತಿತ್ತು. ದೇವರು ಕಷ್ಟ ಅರ್ಥಮಾಡಿಕೊಂಡು ನನಗೆ ಸಪೋರ್ಟ್​ ಮಾಡಿಬಿಡಲಿ ಎಂದು. ಆದರೆ ಅದು ಸಾಧ್ಯ ಆಗಲಿಲ್ಲ. ನನಗಂತೂ ಆಗಲಿಲ್ಲ. ಆದರೆ ಬೇರೆಯವರಿಗೆ ನನ್ನಿಂದ ನೆರವಾಗಲಿ ಎಂದುಕೊಂಡೆ. ಇಂದು ಆರ್ಥಿಕವಾಗಿ ಸದೃಢ ಆಗಿದ್ದೇನೆ. ಆದರೆ ಇವರ ಸ್ಲೈಲ್​ ನೋಡಿದಾಗ ಅದರ ಮುಂದೆ ಎಲ್ಲವೂ ಗೌಣವಾಗುತ್ತದೆ ಎಂದಿದ್ದಾರೆ.

67
ವೇದಿಕೆಯ ಮೇಲೆ ಮಕ್ಕಳು

ಇದೇ ವೇಳೆ ಆಶ್ರಮದ ವಾಸಿಗಳು, ಮಕ್ಕಳು ಎಲ್ಲರೂ ವೇದಿಕೆಯ ಮೇಲೆ ಹಾಜರು ಇದ್ದರು. ಆ್ಯಂಕರ್​ ಅನುಶ್ರೀ ಅವರು ನಿಮ್ಮಲ್ಲಿ ನಾವು ಅಪ್ಪು ಸರ್​ ಅವರನ್ನು ಕಂಡ್ವಿ ಎಂದು ಭಾವುಕರಾದರು. ಇದೇ ವೇದಿಕೆಯಲ್ಲಿ ಕಿರಣ್​ ರಾಜ್ ಹಾರ್ಟ್​ ಸರ್ಜರಿ ಮಾಡಲು ನೆರವಾದ ಕಾರಣಕ್ಕೆ ಬದುಕುಳಿದ ಬಾಲಕ ಕೂಡ ಹಾಜರಿದ್ದ.

77
ಮಹಾರಾಜರಿಂದಲೂ ಸಹಾಯ

ಇದನ್ನು ನೋಡಿದ ಯದುವೀರ ದತ್ತ ಒಡೆಯರ್​ ಅವರು, ಇದು ತುಂಬಾ ಸಂತೋಷದ ಸಂಗತಿ. ನೀವು ಎಲ್ಲಕ್ಕಿಂತ ಮೇಲೆ ಹೋಗಿದ್ದೀರಿ ಎಂದು ನಟನನ್ನು ಪ್ರಶಂಸಿಸಿ ನಮ್ಮ ಪ್ರತಿಷ್ಠಾನದ ಕಡೆಯಿಂದಲೂ ಈ ಅನಾಥಾಶ್ರಮಕ್ಕೆ ಕೈಜೋಡಿಸುತ್ತೇವೆ ಎಂದು ಹೇಳಿದರು.

Read more Photos on
click me!

Recommended Stories