Lakshmi Nivasa: ಅಪಾಯದಲ್ಲಿ ಮುಗ್ಧ ಜೀವಗಳು; ವೀಕ್ಷಕರಲ್ಲಿ ಆತಂಕ ಹೆಚ್ಚಿಸಿದ ಜಯಂತ್‌ ಸಂಚು

Published : Dec 23, 2025, 11:10 AM IST

ಸೈಕೋ ಜಯಂತ್, ಜಾಹ್ನವಿಯನ್ನು ಪಡೆಯಲು ವೆಂಕಿ ಮತ್ತು ಚೆಲುವಿಯನ್ನು ಮೋಸದಿಂದ ಕರೆತಂದಿದ್ದಾನೆ. ಇನ್ನೊಂದೆಡೆ, ಸಂತೋಷ್‌ನ ನಿಜಬಣ್ಣ ಬಯಲಾಗಿದ್ದು, ಭಾವನಾ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈ ಗೊಂದಲಗಳ ನಡುವೆ ಧಾರಾವಾಹಿಯಲ್ಲಿ ಹಲವು ಪಾತ್ರಗಳ ಭವಿಷ್ಯ ಅನಿಶ್ಚಿತವಾಗಿದೆ.

PREV
15
ಸೈಕೋ ಜಯಂತ್

ತನ್ನ ಪ್ರೀತಿಯ ಮಡದಿ ಚಿನ್ನುಮರಿ ಜಾಹ್ನವಿಯನ್ನು ಪಡೆಯಲು ಸೈಕೋ ಜಯಂತ್ ಮತ್ತೊಂದು ಪ್ಲಾನ್ ಮಾಡಿಕೊಂಡಿದ್ದಾನೆ. ಜಾನು ಬರ್ತ್ ಡೇ ಅಂತೇಳಿ ಮುಗ್ಧ ವೆಂಕಿ ಮತ್ತು ಚೆಲುವಿಯನ್ನು ಕರೆದುಕೊಂಡು ಹೋಗಿದ್ದಾನೆ. ಜಯಂತ್‌ನ ಮೋಸ ತಿಳಿಯದ ಲಕ್ಷ್ಮೀ-ಶ್ರೀನಿವಾಸ್ ಮಗ ಮತ್ತು ಸೊಸೆಯನ್ನು ಬಲವಂತವಾಗಿ ಕಳುಹಿಸಿದ್ದಾರೆ.

25
ವೀಕ್ಷಕರಲ್ಲಿ ಆತಂಕ

ಇನ್ಮುಂದೆ ಜಾಹ್ನವಿಯನ್ನು ಹುಡುಕುವ ಕೆಲಸ ಮಾಡಲ್ಲ. ನನ್ನ ಚಿನ್ನುಮರಿಯೇ ಬರುವಂತೆ ಮಾಡುತ್ತೇನೆ. ಮನೆಗೆ ಅತಿಥಿಗಳನ್ನು ಕರೆದುಕೊಂಡು ಬರುವೆ. ಸ್ಪೆಷಲ್ ಅಡುಗೆ ತಯಾರಿಸುವಂತೆ ಶಾಂತಮ್ಮಗೆ ಹೇಳಿ ಜಯಂತ್ ಬಂದಿದ್ದಾನೆ. ಇದೀಗ ಆ ಗೆಸ್ಟ್‌ಗಳು ವೆಂಕಿ ಮತ್ತು ಚೆಲುವಿ ಎಂದು ತಿಳಿದು ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ.

35
ಜಾಹ್ನವಿ ಮತ್ತು ಜಯಂತ್

ವಿಶ್ವನ ರಕ್ಷಣೆಯಲ್ಲಿ ಜಾಹ್ನವಿ ಇರೋ ವಿಷಯ ತಿಳಿದಿದ್ರೂ ಜಯಂತ್‌ನಿಂದ ಏನು ಮಾಡಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಯಂತ್ ಬೇರೆಯದ್ದೇ ರೀತಿಯಲ್ಲಿಯೇ ಚಿನ್ನುಮರಿಯನ್ನು ಪಡೆದುಕೊಳ್ಳಲು ಸಂಚು ರೂಪಿಸಿದ್ದಾನೆ. ಇದೀಗ ಮೋಸದಿಂದ ವೆಂಕಿ-ಚೆಲುವಿಯನ್ನು ಕರೆದುಕೊಂಡು ಹೋಗಿರುವ ಜಯಂತ್ ಮುಂದೇನು ಮಾಡ್ತಾನೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ನಿರ್ದೇಶಕರು ಸಹ ಕಥೆಯ ಸೀಕ್ರೆಟ್‌ ಬಿಟ್ಟುಕೊಟ್ಟಿಲ್ಲ.

45
ಭಾವನಾ ಸಂಸಾರ

ಇತ್ತ ಸಂತೋಷ್‌ನಿಂದಲೇ ಭಾವನಾ ಸಂಸಾರ ಹಾಳು ಆಗಿರುವ ವಿಷಯ ಶ್ರೀನಿವಾಸ್ ಮತ್ತು ಲಕ್ಷ್ಮೀಗೆ ಗೊತ್ತಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ವೀಣಾ ಮೇಲೆ ಕೈ ಮಾಡಿದ್ದಾನೆ. ಇದರಿಂದ ಕೋಪಗೊಂಡ ವೀಣಾ, ಮಗನನ್ನು ಕರೆದುಕೊಂಡು ಅತ್ತೆ-ಮಾವನ ಮನೆಗೆ ಬಂದಿದ್ದಾಳೆ. ಪತ್ನಿ ವೀಣಾ ಇಷ್ಟು ತಿಳಿಸಿ ಹೇಳಿದ್ರೂ ಸಂತು ಮಾತು ತನ್ನ ತಪ್ಪು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: Lakshmi Nivasa Serial: ದುಡ್ಡೇ ದೊಡ್ಡಪ್ಪ, ತಂಗಿ ಜೀವನ ಬಲಿ ಕೊಟ್ಟ; ಇಂಥ ಅಣ್ಣ-ತಮ್ಮ ಸಾಯೋದು ಬೆಸ್ಟ್!

55
ಹಲವು ಗೊಂದಲ

ಸಂತೋಷ್‌ನಿಂದ ಹರೀಶ್ ಹಣ ಪಡೆದುಕೊಂಡಿರುವ ವಿಷಯ ಸಿಂಚನಾಗೂ ಗೊತ್ತಾಗಿದೆ. ಇದರಿಂದ ಹರೀಶ್‌ ಸಹ ಪತ್ನಿಯ ಕೋಪಕ್ಕೆ ತುತ್ತಾಗಿದ್ದಾನೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಶ್ವನ ತಾಯಿ ಲಲಿತಾ ಪಾತ್ರ ಕೊನೆಯಾಗಲಿದೆ. ಯಾವ ರೀತಿ ಈ ಪಾತ್ರ ಕೊನೆ ಮಾಡಲಾಗುತ್ತೆ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಮತ್ತೊಂದೆಡೆ ವಿಶ್ವನ ತಂದೆ ಪಾತ್ರ ಹಲವು ದಿನಗಳಿಂದ ಕಾಣಿಸುತ್ತಿಲ್ಲ.

ಇದನ್ನೂ ಓದಿ: ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories