Karna Serial Update: ಆಯ್ತು, ಮುಗಿದೋಯ್ತು; ತೇಜಸ್‌ಗೆ ಕರ್ಣ ಹೇಳಿದ ಸತ್ಯ ದೊಡ್ಡ ಸಮಸ್ಯೆ ತಂದಿಡ್ತು!

Published : Dec 23, 2025, 09:23 AM IST

Karna Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಹಾಗೂ ನಿತ್ಯಾ ಮುಖಾಮುಖಿಯಾಗಿದ್ದಾರೆ. ಈಗ ಸತ್ಯ ಹೊರಬಂದಿದೆ. ಆದರೆ ಇಲ್ಲಿ ಎಡವಟ್ಟು ಆಗುವ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಏನಾಗಬಹುದು? 

PREV
15
ಕರ್ಣ, ನಿತ್ಯಾ ಮದುವೆ ನಾಟಕ

ನಿತ್ಯಾ ಹಾಗೂ ತೇಜಸ್‌ ಒಂದಾಗಬಾರದು ಎಂದು ರಮೇಶ್‌ ಪ್ಲ್ಯಾನ್‌ ಮಾಡಿ, ತೇಜಸ್‌ನನ್ನು ಕಿಡ್ನ್ಯಾಪ್‌ ಮಾಡಿಸಿದ್ದನು. ಇದರಿಂದ ತೇಜಸ್‌ ಹಾಗೂ ನಿತ್ಯಾ ಮದುವೆ ನಿಂತಿತು. ಮೊಮ್ಮಗಳ ಜೀವನ ಹಾಳಾಯ್ತು ಎಂದು ನಿತ್ಯಾ ಅಜ್ಜಿ ಬೇಸರದಲ್ಲಿದ್ದಳು. ಹೀಗಾಗಿ ಕರ್ಣ, ನಿತ್ಯಾ ಮದುವೆ ಆಗಬೇಕು ಎಂದು ಹೇಳಲಾಯ್ತು. ಕರ್ಣ, ನಿತ್ಯಾ ಮದುವೆ ಆಗುವ ನಾಟಕ ಮಾಡಿದರು.

25
ಗರ್ಭಿಣಿ ನಿತ್ಯಾ ಒಂಟಿಯಾಗಬಾರದು

ಅಜ್ಜಿ ಆರಾಮಾಗಿರಬೇಕು, ಎಲ್ಲರೂ ನಿರಾಳದಿಂದ ಇರಬೇಕು ಎಂದು ಕರ್ಣ ಬಯಸಿದ್ದನು. ಆಮೇಲೆ ನಿತ್ಯಾ ಹೊಟ್ಟೆಯಲ್ಲಿ ಮಗು ಇರೋದು ಕೂಡ ಕರ್ಣನಿಗೆ ಗೊತ್ತಾಯ್ತು. ಮಗು ಅನಾಥ ಆಗಬಾರದು, ಗರ್ಭಿಣಿ ನಿತ್ಯಾ ಒಂಟಿಯಾಗಬಾರದು ಎಂದು ಅವನು ಮದುವೆ ಆಗುವ ನಾಟಕ ಮಾಡಿದ್ದನು. ಅವನಿಗೆ ಇಂದಲ್ಲ, ನಾಳೆ ತೇಜಸ್‌, ಕರ್ಣ ಒಂದಾಗಬಹುದು ಎಂಬ ಆಶಯ ಇತ್ತು.

35
ಎಸ್ಕೇಪ್‌ ಆದ ತೇಜಸ್‌

ಇನ್ನು ತೇಜಸ್‌ ಕಿಡ್ನ್ಯಾಪ್‌ ಆಗಿದ್ದ ಸ್ಥಳದಿಂದ ತಪ್ಪಿಸಿಕೊಂಡು ಬಂದಿದ್ದನು. ತೇಜಸ್‌ ಹಾಗೂ ನಿಧಿ ಭೇಟಿ ಕೂಡ ಆಯ್ತು. ನಿತ್ಯಾ ಜೊತೆಗೆ ತೇಜಸ್‌ ಮಾತುಕತೆ ಮಾಡಲು ಅನುವು ಮಾಡಿಕೊಡಬೇಕು ಎಂದು ನಿಧಿ ಪ್ಲ್ಯಾನ್‌ ಮಾಡಿದ್ದಳು. ತೇಜಸ್‌ ಯಾವುದೇ ಕಾರಣಕ್ಕೂ ನಿತ್ಯಾಳನ್ನು ಭೇಟಿ ಮಾಡಬಾರದು ಎಂದು ರಮೇಶ್‌, ಸಂಜಯ್‌ ಕೂಡ ಯೋಚನೆ ಮಾಡಿದ್ದರು.

45
ಕರ್ಣ, ನಿತ್ಯಾ ಮದುವೆ ನಾಟಕ ಗೊತ್ತಾಯ್ತು

ಕೊನೆಗೂ ನಿತ್ಯಾ ಹಾಗೂ ತೇಜಸ್‌ ಭೇಟಿಯಾಗಿದ್ದಾರೆ. ತೇಜಸ್‌ ನನಗೆ ಮೋಸ ಮಾಡಿದ ಎಂದು ನಿತ್ಯಾ ಕೂಗಾಡಿದ್ದಾಳೆ. ಆಮೇಲೆ ತೇಜಸ್‌, ನನ್ನನ್ನು ಕಿಡ್ನ್ಯಾಪ್‌ ಮಾಡಿಸಿದ್ದರು ಎಂದು ಹೇಳಿದರೂ ನಿತ್ಯಾ ನಂಬಲಿಲ್ಲ. ಯಾರು ಕಿಡ್ನ್ಯಾಪ್‌ ಮಾಡಿಸಿದ್ದರು ಎಂದು ಅವಳು ಕೇಳಿದ್ದಳು. ಇನ್ನೇನು ಉತ್ತರ ಕೊಡಬೇಕು ಎನ್ನುವಷ್ಟರಲ್ಲಿ ಕರ್ಣ, ನಿಧಿ ಎಂಟ್ರಿಯಾಗಿದೆ. ಕರ್ಣನನ್ನು ನೋಡಿದ ತೇಜಸ್, ನನ್ನ ಜೀವನ ಹಾಳು ಮಾಡಿದೆ ಎಂದು ಕೂಗಾಡಿದ್ದಾನೆ. ಆಗ ಕರ್ಣ, ನಾನು, ನಿತ್ಯಾ ಮದುವೆ ಆಗಿಲ್ಲ, ಮದುವೆ ನಾಟಕ ಮಾಡಿದೆವು ಎಂದು ಹೇಳಿದ್ದಾನೆ.

55
ಮುಂದೆ ಏನು ಆಗಬಹುದು?

ಕರ್ಣ ಹೇಳಿದ ಸತ್ಯವನ್ನು ಅಲ್ಲಿಯೇ ಅಡಗಿ ಕೂತಿದ್ದ ರಮೇಶ್‌, ನಯನತಾರಾ, ಸಂಜಯ್ ಶಾಕ್‌ ಆಗಿದ್ದಾರೆ. ಕರ್ಣ, ನಿತ್ಯಾ ಮದುವೆ ಆಗಿತ್ತು ಎಂದು ಅವರು ನಂಬಿದ್ದರು. ಈಗ ಅವರಿಗೆ ಸತ್ಯ ಗೊತ್ತಾಗಿದೆ. ತೇಜಸ್‌ ಪ್ರಕಾರ, ಕರ್ಣನೇ ಅವನ ಕಿಡ್ನ್ಯಾಪ್‌ ಮಾಡಿಸಿದ್ದಾನೆ. ಕರ್ಣನ ಹೆಸರು ಹೇಳಿದರೆ, ನಿತ್ಯಾ ನಂಬುತ್ತಾಳಾ? ಕರ್ಣನನ್ನು ಅವಳು ದೂಷಿಸುತ್ತಾಳಾ? ಕರ್ಣ ಹಾಗೂ ನಿಧಿ ಲವ್‌ ಮಾಡುತ್ತಿರೋ ವಿಚಾರ ನಿತ್ಯಾಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅಷ್ಟು ಬೇಗ ಈ ಗಂಟು ಬಿಡಿಸುವ ಹಾಗೆ ಕಾಣ್ತಿಲ್ಲ. ಕರ್ಣನ ಮೇಲೆ ಆರೋಪ ಬರೋದಂತೂ ಪಕ್ಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories