Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾರನ್ನು ಒಂದು ಮಾಡಲು ಮುತ್ತಜ್ಜಿ, ಮೊಮ್ಮಕ್ಕಳು ಒಂದಾಗಿದ್ದಾರೆ. ಹೀಗೆ ಹೊಸ ಗೇಮ್ ಆಡುತ್ತಿದ್ದಾರೆ. ಇದು ಯಾರಿಗೆ ಗೊತ್ತಾಗಬೇಕಿತ್ತೋ ಅವರಿಗೆ ಗೊತ್ತಾಗಿಲ್ಲ.
ಗೌತಮ್ ಹಾಗೂ ಭೂಮಿಕಾ ಹತ್ತಿರ ಇದ್ದರೂ ಕೂಡ ದೂರ ದೂರವಾಗಿ ಬದುಕುತ್ತಿದ್ದಾರೆ. ಶಕುಂತಲಾ ಅಂದು ಹೇಳಿದಂತೆ ನಾನು, ಗೌತಮ್‌ರಿಂದ ಹಾಗೂ ಮನೆಯವರಿಂದ ದೂರ ಇದ್ದರೆ ಮಾತ್ರ ನನ್ನವರು ಆರಾಮಾಗಿ ಇರುತ್ತಾರೆ ಎಂದು ಅವಳು ಮಗನನ್ನು ಕರೆದುಕೊಂಡು ಒಂಟಿಯಾಗಿ ಬದುಕುತ್ತಿದ್ದಳು. ಈಗ ಗೌತಮ್‌ಗೆ ಪತ್ನಿ, ಮಗನ ಸುಳಿವು ಸಿಕ್ಕಿತ್ತು. ಒಂದೇ ವಠಾರದಲ್ಲಿಯೇ ಗೌತಮ್-ಭೂಮಿಕಾ ಇದ್ದರೂ ಕೂಡ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ.
25
ಅಜ್ಜಿಗೆ ಸತ್ಯ ಗೊತ್ತಾಯ್ತು
ಗೌತಮ್ ಹಾಗೂ ಭೂಮಿಕಾ ದೂರ ಇರೋದು ಅಜ್ಜಿಗೆ ಗೊತ್ತಾಗಿದೆ. ಹೀಗಾಗಿ ಅವಳು ಇವರನ್ನು ಒಂದು ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ತಾನಿದ್ದ ಆಶ್ರಮಕ್ಕೆ ಗೌತಮ್-ಭೂಮಿ, ಮೊಮ್ಮಕ್ಕಳನ್ನು ಕರೆಸಿಕೊಂಡಳು. ತನ್ನ ಆರೋಗ್ಯ ಹಾಳಾಗಿದೆ, ನಾನು ಜಾಸ್ತಿ ದಿನ ಇರೋದಿಲ್ಲ ಎಂದು ಹೇಳಿ ಅವಳು ಎಲ್ಲರನ್ನು ಕರೆಸಿಕೊಂಡಳು. ಅಜ್ಜಿ ಖುಷಿಗೋಸ್ಕರ, ಅಜ್ಜಿ ಆಸೆ ಈಡೇರಿಸಲು ಎಲ್ಲರೂ ಅಲ್ಲಿಗೆ ಬಂದರು.
35
ಪ್ಲ್ಯಾನ್ ಮಾಡಿದ ಅಜ್ಜಿ
ಗೌತಮ್ ಹಾಗೂ ಭೂಮಿಕಾ ಒಂದಾಗಿ ಬಾಳಬೇಕು ಎಂದು ಅಜ್ಜಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಅಜ್ಜಿ ಖುಷಿಗೋಸ್ಕರ ಗೌತಮ್ ಒಂದು ಪ್ಲ್ಯಾನ್ ಮಾಡಿದ್ದಾನೆ. ಅಜ್ಜಿಯನ್ನು ವಠಾರಕ್ಕೆ ಕರೆದುಕೊಂಡು ಹೋಗಿ ಇರಿಸೋಣ, ಅಲ್ಲಿ ನಾನು, ಭೂಮಿಕಾ ಚೆನ್ನಾಗಿದ್ದೇವೆ ಎನ್ನೋ ಥರ ನಾಟಕ ಮಾಡೋಣ ಎಂದುಕೊಂಡಿದ್ದಾನೆ. ಇದನ್ನು ಅವನು ಭೂಮಿಕಾಗೆ ಹೇಳಿದ್ದಾನೆ. ಬಹುಶಃ ಭೂಮಿ ಕೂಡ ಈ ಮಾತನ್ನು ಒಪ್ಪಬಹುದು.
ಇನ್ನು ಜಯದೇವ್, ಅಜ್ಜಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಗೌತಮ್ ಮಾಡಿದ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬೇಕು ಎಂದುಕೊಂಡಿದ್ದನು. ಅಜ್ಜಿ ಬಳಿ ಮೋಸದಿಂದ ಬಾಂಡ್ ಪೇಪರ್‌ಗೆ ಹೆಬ್ಬೆಟ್ಟು ಹಾಕಿಸಿಕೊಂಡಿದ್ದನು. ಆದರೆ ಅವನು ತಪ್ಪಾಗಿ ಬಲಗೈ ಹೆಬ್ಬೆಟ್ಟು ಹಾಕಿಸಿಕೊಂಡಿದ್ದು, ನೆನಪಾಗಿ ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಬೇಕು ಎಂದಿದ್ದನು. ಹೀಗಾಗಿ ಅವನು ಅಜ್ಜಿ ಬಳಿ ಮತ್ತೆ ಬಂದಿದ್ದಾನೆ.
55
ಮುಂದೆ ಏನು ಆಗಬಹುದು?
ಜಯದೇವ್ ಈಗ ಅಜ್ಜಿ ಬಳಿ ಬಂದು, ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಲು ನೋಡಿದ್ದಾನೆ. ಆಗ ಅಜ್ಜಿ ನನ್ನ ಎಲ್ಲ ಆಸ್ತಿಯನ್ನು ಗೌತಮ್‌ಗೆ ಬರೆದಾಗಿದೆ, ನೀನು ಏನೂ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದಿದ್ದಾಳೆ. ಈಗ ಜಯದೇವ್‌ಗೆ ಅಜ್ಜಿ ಚಳ್ಳೆಹಣ್ಣು ತಿನಿಸಿದರೂ ಕೂಡ, ಗೌತಮ್-ಭೂಮಿಕಾಗೆ ಸಮಸ್ಯೆ ತಪ್ಪಿದ್ದಲ್ಲ. ಗೌತಮ್ ಹಾಗೂ ಭೂಮಿಕಾರನ್ನು ಜಯದೇವ್ ಟಾರ್ಗೆಟ್ ಮಾಡೋದಂತೂ ಸತ್ಯ. ಇನ್ನು ಮುಂದೆ ಏನೇನು ಆಗುವುದೋ ಏನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.